ಬೆಂಗಳೂರು: ಇಲ್ಲಿನ ಟಿಂಬರ್ ಲೇಔಟ್‌ನಲ್ಲಿ ಪ್ಲೇವುಡ್ ಗೋಡೌನ್ ಬೆಂಕಿಗೆ ಆಹುತಿಯಾಗಿದೆ. ಈ ಗೋಡೌನ್ ಪಕ್ಕದಲ್ಲೇ ಎಚ್ ಪಿ ಗ್ಯಾಸ್ ದಾಸ್ತಾನು ಮಳಿಗೆ ಇತ್ತು. ಹೀಗಾಗಿ, ಆತಂಕ ಹೆಚ್ಚಾಗಿತ್ತು. ರಾತ್ರಿ ಸುಮಾರು 12.40ರಿಂದ ಬೆಳಗಿನ 6 ಗಂಟೆಯವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ(Fire Accident).
ಪ್ಲೇವುಡ್ ಗೋಡೌನ್ ಪಕ್ಕದಲ್ಲೇ ಹೆಚ್ ಪಿ ಗ್ಯಾಸ್ ಗೋಡೌನ್ ಇತ್ತು. ಈ ಗೋಡೋನ್ ನಲ್ಲಿ 580 ಲೋಡೆಡ್ ಸಿಲಿಂಡರ್ ಗಳಿದ್ದವು. ಒಂದು ವೇಳೆ ಗ್ಯಾಸ್ ಗೋಡೋನ್ ಗೆ ಬೆಂಕಿ ತಗುಲಿದ್ದರೆ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಗಳಿದ್ದವು. ಅದೃಷ್ಟವಶಾತ್ ಆ ರೀತಿ ಆಗಿಲ್ಲ.
ನಿರಂತರ ಆರು ಗಂಟೆಗಳ ಕಾಲ ಬೆಂಕಿ ನಂದಿಸಲಾಗಿದೆ. 23 ಅಗ್ನಿಶಾಮಕ ವಾಹನಗಳು ಹಾಗೂ 100 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಲಿಂಡರ್ ಶಿಫ್ಟ್
ಪಕ್ಕದ ಪ್ಲೇವುಡ್ ಗೋಡೌನ್‌ಗೆ ಬೆಂಕಿ ಬೀಳುತ್ತಿದ್ದಂತೆ ಎಚ್ಚೆತ್ತ ಗ್ಯಾಸ್ ಏಜೆನ್ಸಿ ಸಿಬ್ಬಂದಿ, ಅಷ್ಟೂ ಗ್ಯಾಸ್ ಸಿಲಿಂಡರ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಇದರಿಂದಾಗಿ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಇದನ್ನೂ ಓದಿ | Fire accident | ಶಿವಮೊಗ್ಗದಲ್ಲಿ ಬೆಂಕಿ ಅವಘಡ : ತಂದೆಯ ಸಾವು, ಮಗ ಗಂಭೀರ