Site icon Vistara News

ಅಕ್ಕ-ತಮ್ಮ ಸಾವು | ಒಡಹುಟ್ಟಿದವನಿಗೆ ಹೃದಯಾಘಾತ; ಆಘಾತಕ್ಕೊಳಗಾಗಿ ಮಡಿದಳು ಅಕ್ಕ

ಅಕ್ಕ-ತಮ್ಮ ಸಾವು

ಕೊಪ್ಪಳ: ಇಲ್ಲಿನ ಕವಲೂರಿನಲ್ಲಿ ತಮ್ಮನ ಸಾವಿನ ಸುದ್ದಿ ಕೇಳಿ ಕಂಗಾಲಾಗಿದ್ದ ಮಹಿಳೆಯೊಬ್ಬರು ಅಂತ್ಯಕ್ರಿಯೆ ಮಾಡುವಾಗಲೇ ಕುಸಿದು ಮೃತಪಟ್ಟಿರುವ ಘಟನೆ ನಡೆದಿದೆ. ಒಡಹುಟ್ಟಿದವನು ಹೃದಯಾಘಾತದಿಂದ ಮೃತಪಟ್ಟಿದ್ದ, ಇದರಿಂದ ಆಘಾತಕ್ಕೊಳಗಾದ ಅಕ್ಕ ಮಡಿದಿದ್ದಾಳೆ.

ಕವಲೂರು ಗ್ರಾಮದ ಶರಣಯ್ಯ ನಿಂಬೇಕಾಯಿಮಠ (63) ಹಾಗೂ ಗಂಗಮ್ಮ (74) ಸಾವಿನಲ್ಲಿ ಒಂದಾದ ಅಕ್ಕ ತಮ್ಮ. ಭಾನುವಾರ ಸಂಜೆ ಶರಣಯ್ಯರಿಗೆ ಹೃದಯಾಘಾತವಾಗಿ ಮೃತಪಟ್ಟರು. ಹೊಳೆಆಲೂರಿನಿಂದ ತಮ್ಮನ ಅಂತ್ಯಕ್ರಿಯೆಗೆ ಬಂದಿದ್ದ ಅಕ್ಕ ಗಂಗಮ್ಮ ಕುಸಿದು ಬಿದ್ದಿದ್ದಾರೆ.

ಕುಟುಂಬಸ್ಥರು ಹಾಗೂ ಸಂಬಂಧಿಗಳು ಮೃತರನ್ನು ಅಕ್ಕಪಕ್ಕ ಕೂರಿಸಿ ಪೂಜೆ ಮಾಡಿ, ಇಬ್ಬರ ಅಂತ್ಯಕ್ರಿಯೆಯನ್ನು ಕವಲೂರಿನಲ್ಲಿ ನೆರವೇರಿಸಿದ್ದಾರೆ. ಮನೆಯ ಇಬ್ಬರು ಹಿರಿ ಜೀವವನ್ನು ಕಳೆದುಕೊಂಡ ಬಂಧು ಮಿತ್ರರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ | ಜೋಳಿಗೆ ಹಿಡಿದ ಮಹಾನುಭಾವ ಎಂದ HDK, ಏ ಪಂಚೆ ಎಂದ ಇಬ್ರಾಹಿಂ: ಬಿ.ಎಲ್‌. ಸಂತೋಷ್‌ ವಿರುದ್ಧ ದಳಪತಿಗಳು ಗರಂ

Exit mobile version