Site icon Vistara News

ಚಂದ್ರಶೇಖರಯ್ಯ ಈಗ ಮುಬಾರಕ್‌ ಪಾಷಾ, ಇಸ್ಲಾಂಗೆ ಮತಾಂತರಗೊಂಡ ಅರ್ಚಕ

ಅರ್ಚಕ

ತುಮಕೂರು: ರಾಜ್ಯದಲ್ಲಿ ಕೋಮು ಗಲಭೆ, ಧರ್ಮ ಸಂಘರ್ಷ ಜೋರಾಗಿರುವ ಬೆನ್ನಲ್ಲೇ ಜಿಲ್ಲೆಯ ಅರ್ಚಕರೊಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಸ್ವ ಇಚ್ಚೆಯಿಂದ ಮತಾಂತರಗೊಂಡಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ.

ತಾಲೂಕಿನ ಊರ್ಡಿಗೆರೆ ಹೋಬಳಿ ಹಿರೇಹಳ್ಳಿಯ ಓಂಕಾರೇಶ್ವರ ದೇವಾಲಯದ ಅರ್ಚಕ ದಿವಂಗತ ರೇಣುಕಾರಾದ್ಯ ಎಂಬುವವರ ಪುತ್ರ ಎಚ್.ಆರ್ ಚಂದ್ರಶೇಖರಯ್ಯ ಉರುಫ್ ಮಂಜಣ್ಣ ಇಸ್ಲಾಂ ಅಪ್ಪಿಕೊಂಡವರು.

ಮತಾಂತರಗೊಂಡಿರುವ ಎಚ್.ಆರ್.ಚಂದ್ರಶೇಖರಯ್ಯ ಹೆಸರನ್ನು ಮುಬಾರಕ್ ಪಾಷಾ ಎಂದು ಬದಲಾಯಿಸಿಕೊಂಡಿದ್ದಾರೆ. ತಾವು ವಿವಿಧ ಸಮಸ್ಯೆಗಳ ಕಾರಣದಿಂದ 2022ರ ಆಗಸ್ಟ್ 18ರಂದು ಸ್ವ ಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಚಂದ್ರಶೇಖರಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | Non Veg | ದೇವಸ್ಥಾನ ಭೇಟಿ ಮುನ್ನ ನಾಟಿಕೋಳಿ ತಿಂದಿದ್ದರೇ ಸಿದ್ದರಾಮಯ್ಯ?; ಮತ್ತೆ ವಿವಾದ ಸೃಷ್ಟಿ!

Exit mobile version