Site icon Vistara News

Tiger Death | ಬನ್ನೇರುಘಟ್ಟ ಉದ್ಯಾನದಲ್ಲಿ ಸುರೇಶ ಹೆಸರಿನ ಹುಲಿ ಸಾವು

Tiger attack ಗುಂಡ್ಲುಪೇಟೆಯಲ್ಲಿ ರೈತನ ಮೇಲೆ ಹುಲಿ ದಾಳಿ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಅನಾರೋಗ್ಯದಿಂದಾಗಿ (Tiger Death) ಮೃತಪಟ್ಟಿದೆ. ಸುಮಾರು ೧೩ ವರ್ಷದ “ಸುರೇಶ” ಎಂಬ ಹೆಸರಿನ ಹುಲಿಯು ಕಳೆದ ಎರಡು ವರ್ಷಗಳಿಂದ ಬೆನ್ನುಹುರಿಯ ಗಾಯ ಮತ್ತು ಹಿಂಭಾಗದ ಪಾರ್ಶ್ವವಾಯುದಿಂದ ಬಳಲುತ್ತಿತ್ತು. ಇದರಿಂದಾಗಿ ಎದ್ದೇಳಲೂ ಕಷ್ಟಪಡುತ್ತಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಹುಲಿ ಅನಾರೋಗ್ಯಕ್ಕೀಡಾಗುತ್ತಲೇ ಆರೈಕೆ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಆರೈಕೆಗಾಗಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಹುಲಿಗೆ ಲೇಸರ್ ಚಿಕಿತ್ಸೆ ಸೇರಿ ಇತರೆ ಪೂರಕ ಚಿಕಿತ್ಸೆ ನೀಡಲಾಗುತ್ತಿತ್ತು. ಹಿಂಗಾಲುಗಳೆರಡರ ಮೇಲಿನ ಗಾಯಗಳು ಸೆಪ್ಟಿಸೆಮಿಯಾಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಆಹಾರ ಸೇವಿಸದೆ ಸಂಪೂರ್ಣವಾಗಿ ಬಳಲಿತ್ತು. ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೆ ಹುಲಿ ಸುರೇಶ ಮೃತಪಟ್ಟಿದ್ದು ದೇಹದ ಅಂಗಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ | Tiger Kirana | ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಹುಲಿ ಸಾವು

Exit mobile version