Site icon Vistara News

wind turbine | ನೆಲಕ್ಕೆ ಉರುಳಿಬಿದ್ದ ವಿಂಡ್ ಪವರ್ ಫ್ಯಾನ್

wind turbine

ಬಾಗಲಕೋಟೆ: ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ಸುಜಲಾನ್ ಕಂಪನಿಯಿಂದ ಅಳವಡಿಸಿದ್ದ ವಿಂಡ್ ಪವರ್ ಫ್ಯಾನ್‌ (wind turbine) ಉರುಳಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

2017-18ರಲ್ಲಿ ಅಳವಡಿಸಿರುವ ಸುಜಲಾನ್ ಕಂಪನಿಯಿಂದ ಪವನ ವಿದ್ಯುತ್ ಫ್ಯಾನ್‌ ಅಳವಡಿಸಲಾಗಿತ್ತು. ಆದರೆ, ಭಾನುವಾರ ಏಕಾಏಕಿ ಫ್ಯಾನ್‌ ನೆಲಕ್ಕೆ ಉರುಳಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತೆವ್ವ ಕಂದಕೂರ, ಪ್ರೇಮಾ ಗೌಡರ, ಶರಣಗೌಡ ಕಂದಕೂರ ಎಂಬುವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫ್ಯಾನ್ ಬಿದ್ದ ರಭಸಕ್ಕೆ ಫ್ಯಾನ್‌ನ ಅವಶೇಷಗಳು ಚೆಲ್ಲಾಪಿಲ್ಲಿಯಾಗಿವೆ. ಸಂಬಂಧಿಸಿದ ಕಂಪನಿಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | ಹೆರಿಗೆ, ಶಸ್ತ್ರಚಿಕಿತ್ಸೆ ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಣೆ; ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರಾಷ್ಟ್ರಮಟ್ಟದ ಲಕ್ಷ್ಯ ಪ್ರಶಸ್ತಿ

Exit mobile version