ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಜೂನ್ 1ರಿಂದ 5ರವರೆಗೆ ʼಆಕೃತಿʼ ಕಲಾ ಪ್ರದರ್ಶನ (Art Exhibition) ಹಮ್ಮಿಕೊಳ್ಳಲಾಗಿದೆ. ಕಲಾಸಕ್ತರು ವಿವಿಧ ಕಲಾವಿದರು ರಚಿಸಿರುವ ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್‌ನಲ್ಲಿ 5 ದಿನಗಳ ಕಾಲ ವೀಕ್ಷಿಸಬಹುದು.
ಜೂನ್ 1ರಂದು ಸಂಜೆ 4 ಗಂಟೆಗೆ ಈ ವಿಶೇಷ ʼಆಕೃತಿʼ ಕಲಾ ಪ್ರದರ್ಶನ ಉದ್ಘಾಟನೆಯಾಗಲಿದೆ. ಮುಖ್ಯ ಅತಿಥಿಗಳಾಗಿ ಎಸ್‌ಬಿಐ ನಿವೃತ್ತ ವ್ಯವಸ್ಥಾಪಕ, ಹಿರಿಯ ವ್ಯಂಗ್ಯಚಿತ್ರಕಾರರು ಮತ್ತು ಡೂಡಲ್ ಕಲಾವಿದರಾದ ಶ್ರೀಧರ್ ಕೊಮರವಳ್ಳಿ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಡಿಜಿಟಲ್ ಕ್ರಿಯೇಟರ್ ಹಾಗೂ ಕಲಾವಿದರಾದ ಶೇಷಗಿರಿ ಕೆ.ಎಂ. ಭಾಗವಹಿಸಲಿದ್ದಾರೆ.
ಕಲಾವಿದರಾದ ಸ್ನಿಗ್ಧ ಪಂಡ, ಪೂರ್ಣಿಮಾ ಅವಿನಾಶ್, ಪ್ರೀತಿ ಪ್ರಸೂನ, ರೋಸ್ ಮೇರಿ ಕ್ರಿಸ್ಟೋಫರ್ ಅವರು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ | ತರುಣ ಪದ ಅಂಕಣ: ನಮ್ಮ ಗಡಿ ಕಾಯುವ ಮೊದಲ ಕಾವಲುಗಾರರ ಕಡೆ ಇರಲಿ ನಮ್ಮ ಕಾಳಜಿ