Site icon Vistara News

Abalashrama | ಜ.22ರಂದು ಬೆಂಗಳೂರಿನ ಅಬಲಾಶ್ರಮದಲ್ಲಿ ʼಸಮರ್ಪಣಾ ದಿನʼ

Abalashrama

ಬೆಂಗಳೂರು: ಸಮಾಜ ಸೇವಾ ಸಂಸ್ಥೆ ಅಬಲಾಶ್ರಮ (Abalashrama) ವತಿಯಿಂದ ಜನವರಿ ೨೨ರಂದು ಬೆಳಗ್ಗೆ 1೧ ಗಂಟೆಗೆ ʼಸಮರ್ಪಣಾ ದಿನ; ಸಂಕಲ್ಪ-ಸಾಧನೆಗಳ ಸಂಭ್ರಮಾಚರಣೆʼ ಕಾರ್ಯಕ್ರಮವನ್ನು ನಗರದ ಬಸವನಗುಡಿಯ ಡಾ. ಡಿ.ವಿ. ಗುಂಡಪ್ಪ ರಸ್ತೆಯ ಅಬಲಾಶ್ರಮದ ೪ನೇ ಮಹಡಿಯ ಶತಮಾನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆ ಹಾಗೂ ʼಸವಿಸ್ಮೃತಿʼ-ವಿಧವಾ ಪುನರ್ವಿವಾಹದ ರೂವಾರಿಗಳು ಪುಸ್ತಕವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಬಿಡುಗಡೆ ಮಾಡಲಿದ್ದಾರೆ. ಡಾ.ವಿಜಯ ಲಕ್ಷ್ಮಿ ದೇಶಮಾನೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಅತಿಥಿಗಳಾಗಿ ರಾಷ್ಟ್ರ ಸೇವಿಕಾ ಸಮಿತಿಯ ವಂದನೀಯ ಪ್ರಮುಖ ಸಂಚಾಲಿಕಾ ಮಾನನೀಯ ಶಾಂತಕುಮಾರಿ, ಅಖಿಲ ಭಾರತೀಯ ಕುಟುಂಬ ಪ್ರಬೋಧನ ಪ್ರಮುಖ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ವಿವರ
ದೀಪ ಪ್ರಜ್ವಲನದ ಮೂಲಕ ʼಸಮರ್ಪಣಾ ದಿನ; ಸಂಕಲ್ಪ-ಸಾಧನೆಗಳ ಸಂಭ್ರಮಾಚರಣೆʼ ಕಾರ್ಯಕ್ರಮದ ಉದ್ಘಾಟನೆಯಾಗಲಿದೆ. ನಂತರ ಬಹುಮಾನಿತ ತಂಡ, ಆಶ್ರಮ ನಿವಾಸಿಗಳಿಂದ ನೃತ್ಯ, ಅಬಲಾಶ್ರಮ ನಡೆದುಬಂದ ಸಾಕ್ಷ್ಯಚಿತ್ರ ಪ್ರದರ್ಶನ, ಬಾ.ವೆಂ.ಶೇಷ ಅವರಿಂದ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಂದ ಪುಸ್ತಕ ಲೋಕಾರ್ಪಣೆ, ಡಾ.ಗೀತಾ ಕೃಷ್ಣಮೂರ್ತಿ ಅವರ ಪ್ರಧಾನ ಸಂಪಾದಕರ ಮಾತು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಭಾಷಣ, ಮಾನನೀಯ ಶಾಂತಕುಮಾರಿ ಅವರಿಂದ ಸಾಧಕಿಯರಿಗೆ ಸನ್ಮಾನ ಹಾಗೂ ಭಾಷಣ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸ್ಮರಣಿಕೆ ಬಿಡುಗಡೆ ಮಾಡಿ ಭಾಷಣ ಮಾಡಲಿದ್ದಾರೆ. ನಂತರ ಕಜಂಪಾಟಿ ಸುಬ್ರಹ್ಮಣ್ಯ ಭಟ್‌ ಅವರು ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.

ಇದನ್ನೂ ಓದಿ | Gurukula Kala Pratishtana | ಜ.22ರಂದು ಬೆಂಗಳೂರಿನಲ್ಲಿ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನ-2; ವಿವಿಧ ಸಾಧಕರಿಗೆ ಪ್ರಶಸ್ತಿ

Exit mobile version