ಬೆಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ (ABVP) ನೂತನವಾಗಿ ರಚನೆಗೊಂಡಿರುವ ರ್ನಾಟಕ ಉತ್ತರ ಪ್ರಾಂತ ಮತ್ತು ದಕ್ಷಿಣ ಪ್ರಾಂತಗಳಿಗೆ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ಮಾಡಲಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 68ನೇ ರಾಷ್ಟ್ರೀಯ ಅಧಿವೇಶನವು 2022ರ ನವೆಂಬರ್ 25, 26, 27ರಂದು ಜೈಪುರದಲ್ಲಿ ನಡೆದಿತ್ತು. ಈ ರಾಷ್ಟ್ರೀಯ ಅಧಿವೇಶನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಪ್ರಾಂತವನ್ನು ಸಂಘಟನಾತ್ಮಕವಾಗಿ ಕರ್ನಾಟಕ ಉತ್ತರ ಪ್ರಾಂತ ಮತ್ತು ದಕ್ಷಿಣ ಪ್ರಾಂತ ಎಂದು ಪುನರ್ ರಚನೆ ಮಾಡಲಾಗಿತ್ತು.
ಈ ಕಾರಣಕ್ಕೆ ಪುನರ್ ರಚನೆಯಾದ ಕರ್ನಾಟಕ ಉತ್ತರ ಪ್ರಾಂತ ಮತ್ತು ದಕ್ಷಿಣ ಪ್ರಾಂತಗಳಿಗೆ ಎವಿಬಿಪಿಯ ಚುನಾವಣಾಧಿಕಾರಿ ಕೇಶವ ಬಂಗೇರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆಯು 2023ರ ಜನವರಿ 3ರಂದು ನಡೆಸಲಾಗಿತ್ತು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಿಂದ ಸೂಚಿಸಿರುವ ಹೆಸರುಗಳ ಮೇಲೆ ಚುನಾವಣೆ ಪ್ರಕ್ರಿಯೆಯು ನಡೆದು ಉತ್ತರ ಪ್ರಾಂತಕ್ಕೆ ಅಧ್ಯಕ್ಷರಾಗಿ ರೋಹಿಣಾಕ್ಷ ಶಿರ್ಲಾಲು ಹಾಗೂ ಪ್ರಾಂತ ಕಾರ್ಯದರ್ಶಿಯಾಗಿ ಮಣಿಕಂಠ ಕಳಸ ಆಯ್ಕೆ ಆಗಿದ್ದಾರೆ. ದಕ್ಷಿಣ ಪ್ರಾಂತ್ಯಕ್ಕೆ ಅಧ್ಯಕ್ಷರಾಗಿ ಡಾ. ಸತೀಶ್ ಎಚ್.ಕೆ ಹಾಗೂ ಕಾರ್ಯದರ್ಶಿಯಾಗಿ ಪ್ರೇಮಶ್ರೀ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | Bear Attack | ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ರೈತನ ಮೇಲೆ ಎರಗಿದ ಕರಡಿಗಳು; ಪ್ರಾಣಾಪಾಯದಿಂದ ಪಾರು