ಕಾರವಾರ: ಮೋಟಾರು ಅಪಘಾತ ವಿಮಾ ಪರಿಹಾರವನ್ನು (Accident Insurance) ನ್ಯಾಯಾಲಯದ ಆದೇಶದ ಅನ್ವಯ ನೊಂದ ಕುಟುಂಬಕ್ಕೆ ನೀಡಲು ವಿಫಲವಾದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟ ವಿಭಾಗದ ಬಸ್ಸನ್ನು ಹೊನ್ನಾವರ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2004ರ ಫೆಬ್ರವರಿ 4ರಂದು ಮಂಗಳೂರು ಕಡೆಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಶ್ರೀದೇವಿ ಆಸ್ಪತ್ರೆಯ ತಿರುವಿನ ಬಳಿ ಬೈಕ್ ಸವಾರ ಗಣಪತಿ ಮೇಸ್ತ ಎಂಬವವರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಿಂದ ಗಣಪತಿ ಮೇಸ್ತ ಮೃತಪಟ್ಟಿದ್ದರು. ಗಣಪತಿ ಮೇಸ್ತ ಅವರ ಕುಟುಂಬವು ಅಪಘಾತ ವಿಮಾ ಪರಿಹಾರ ಕೋರಿ ಹೊನ್ನಾವರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Shah Rukh Khan: ಶಾರುಖ್ ಖಾನ್ ಬಂಗಲೆಗೆ ಅಕ್ರಮವಾಗಿ ನುಗ್ಗಿದ ಇಬ್ಬರು ಯುವಕರು: ಆರೋಪಿಗಳ ವಿರುದ್ಧ ಎಫ್‌ಐಆರ್
ಹೊನ್ನಾವರ ಎಂ.ಎ.ಸಿ.ಟಿ ನ್ಯಾಯಾಲಯವು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪರಿಹಾರ ಹಣವನ್ನು ನೀಡಲು ಆದೇಶ ಮಾಡಿತ್ತು. ಆದರೆ ನ್ಯಾಯಾಲಯದ ತೀರ್ಪಿನ ಪ್ರಕಾರ ಸಂಸ್ಥೆಯ ಬಾಗಲಕೋಟ ವಿಭಾಗವು ನ್ಯಾಯಾಲಯಕ್ಕೆ ಹಣವನ್ನು ತುಂಬಿರಲಿಲ್ಲ. ಮೃತನ ಕುಟುಂಬವು ಪರಿಹಾರ ಹಣವನ್ನು ತುಂಬದ ಸಾರಿಗೆ ಸಂಸ್ಥೆಯ ವಿರುದ್ಧ ಮತ್ತೆ ಅಮಲ್ದಾರಿ ಪ್ರಕರಣವನ್ನು ದಾಖಲಿಸಿ 18,97,797 ರೂ. ಹಾಗೂ ಅದರ ಮೇಲಿನ ಬಡ್ಡಿ ಸಹಿತ ನೀಡುವಂತೆ ಕೋರಿದ್ದರು.
ಇದನ್ನೂ ಓದಿ: Air India Recruitment 2023 : ಪಿಯುಸಿ ಆದವರಿಗೂ ಏರಿ ಇಂಡಿಯಾದಲ್ಲಿ ಉದ್ಯೋಗ; ಇಲ್ಲಿದೆ ಸಂಪೂರ್ಣ ಮಾಹಿತಿ
ಅಮಲ್ದಾರಿ ಪ್ರಕರಣವನ್ನು ವಿಚಾರಿಸಿದ ಎಂ.ಎ.ಸಿ.ಟಿ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಜಿ. ಸಂಸ್ಥೆಯ ಬಾಗಲಕೋಟ ವಿಭಾಗದ ಬಸ್ ಜಪ್ತಿ ಪಡಿಸಲು ಆದೇಶ ನೀಡಿದ್ದರು. ನ್ಯಾಯಾಲಯದ ಆದೇಶದ ಅನ್ವಯ ಹೊನ್ನಾವರದ ಕೋರ್ಟ್ ಸಿಬ್ಬಂದಿಗಳು ಬಸ್ಸನ್ನು ನ್ಯಾಯಾಲಯಕ್ಕೆ ಜಪ್ತಿ ಮಾಡಿ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: World Wildlife Day: ಇಂದು ವಿಶ್ವ ವನ್ಯಜೀವಿ ದಿನ: ಏನಿದರ ಮಹತ್ವ?