Site icon Vistara News

Acid Attack: ಮನೆಯ ಸೌಂದರ್ಯಕ್ಕೆ ಧಕ್ಕೆ; ಜಯನಗರದಲ್ಲಿ ಮರಕ್ಕೆ ಆ್ಯಸಿಡ್ ಹಾಕಿದ ದುರುಳರು

ಮರಕ್ಕೆ ಆ್ಯಸಿಡ್ ಹಾಕಿದ ದುರುಳರು

ಮರಕ್ಕೆ ಆ್ಯಸಿಡ್ ಹಾಕಿದ ದುರುಳರು

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಉದ್ಯಾನನಗರಿ ಎಂಬ ಹೆಸರು ಹೇಳು ಹೆಸರಿಲ್ಲದಂತಾಗುವ ಸಮಯ ಸನಿಹದಲ್ಲಿದೆ. ಅಭಿವೃದ್ಧಿ, ನಗರೀಕರಣ, ಆಧುನೀಕರಣದ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಯುತ್ತಲೇ ಇದೆ. ಈಗೀರುವಾಗ ಬೆಂಗಳೂರಲ್ಲಿ ಕೆಲವರು ಮನೆ ಮುಂಭಾಗ ಇರುವ ಮರಗಳಿಗೆ ಆ್ಯಸಿಡ್ ಹಾಕುತ್ತಿದ್ದಾರೆ.

ಮರದ ಬುಡಕ್ಕೆ ಆ್ಯಸಿಡ್ ದಾಳಿ

ಮನೆ ಮುಂಭಾಗ ಮರದ ಎಲೆಗಳು ಬಿದ್ದು, ಗಲೀಜಾಗಿ ಕಾಣಿಸುತ್ತದೆ. ಮರದ ಕೊಂಬೆ ನಮ್ಮ ಮನೆಗೆ ಅಡ್ಡಲಾಗಿದೆ ಎಂದು ಮರಗಳನ್ನು ಕತ್ತರಿಸುವುದು, ಮರಕ್ಕೆ ಆ್ಯಸಿಡ್ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಜಯನಗರದ 36ನೇ ಕ್ರಾಸ್‌ನಲ್ಲಿ ಈ ದುಷ್ಟ ಕೃತ್ಯ ನಡೆದಿದ್ದು, ವಿಚಾರ ತಿಳಿದ ಕೂಡಲೇ ಬಿಬಿಎಂಪಿ ಹಾಗೂ ಟ್ರೀ ಡಾಕ್ಟರ್ ಅವರನ್ನು ಕರೆಸಿ ಮರಕ್ಕೆ ಟ್ರೀಟ್ಮೇಂಟ್ ಮಾಡಿ ಪೋಷಣೆ ಮಾಡಲಾಗುತ್ತಿದೆ.

ಆ್ಯಸಿಡ್ ದಾಳಿಯಿಂದಾಗಿ ಒಣಗಿದ ಹೊಂಗೆ ಮರ

ಸುಮಾರು 12 ವರ್ಷದ ಹಳೆಯದಾದ ಹೊಂಗೆ ಮರದ ಬುಡಕ್ಕೆ ಆ್ಯಸಿಡ್ ಹಾಕಿ ಮರವೂ ಒಣಗುವಂತೆ ಮಾಡಿದ್ದಾರೆ. ಈ ರೀತಿ ಆದಾಗ ಒಣಗಿದ ಮರವನ್ನು ತೆರವು ಮಾಡುವಂತೆ ಪಾಲಿಕೆಗೆ ಒತ್ತಡ ತರುವ ಕೆಲಸ ಮಾಡಲಾಗುತ್ತದೆ. ಈ ರೀತಿ ಮರಗಳಿಗೆ ವಿಷವುಣಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: Manjunath Nagar Flyover: ಅಪಾಯದಲ್ಲಿ ಮಂಜುನಾಥ ನಗರ ಫ್ಲೈ ಓವರ್?; ಫಿಟ್/ಅನ್‌ಫಿಟ್ ಟೆಸ್ಟ್‌ಗೆ ಮುಂದಾದ IISC ತಜ್ಞರು

ಸದ್ಯ ಈ ಸಂಬಂಧ ಪಾಲಿಕೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದೆ. ಇತ್ತ ಒಣಗಿದ ಮರಕ್ಕೆ ಜೀವ ನೀಡುವ ಕೆಲಸವನ್ನು ಟ್ರೀ ಡಾಕ್ಟರ್‌ ವಿಜಯ್‌ ನಿಶಾಂತ್‌ ಮಾಡುತ್ತಿದ್ದಾರೆ. ಮರಕ್ಕೆ ಮಹಿಳೆಯೊಬ್ಬರು ವಿಷವುಣಿಸಿದ್ದಾಗಿ ಮರವನ್ನು ಪೋಷಿಸುತ್ತಿರುವವರು ಆರೋಪಿಸಿದ್ದಾರೆ. ಕಳೆದ ಜನವರಿಯಲ್ಲಿ ಮರದ ಬುಡಕ್ಕೆ ಆ್ಯಸಿಡ್ ಹಾಕಿದಾಗ ಸ್ಥಳೀಯರೆಲ್ಲರೂ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

Exit mobile version