ಚಿತ್ರದುರ್ಗ: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ (Actor Darshan) ರಾಜಾತಿಥ್ಯ ಸಿಗುತ್ತಿರುವುದಕ್ಕೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ನೋಡಿ ನಮಗೆ ಶಾಕ್ ಆಯ್ತು ಎಂದು ಕಣ್ಣೀರಿಟ್ಟಿರುವ ಅವರು, ಪೊಲೀಸರು ಹಾಗೂ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಆ ನಂಬಿಕೆ ಉಳಿಸಿಕೊಳ್ಳಬೇಕು. ಜೈಲು ಜೈಲಾಗಿರಬೇಕು, ರೆಸಾರ್ಟ್ ಆಗಬಾರದು ಎಂದು ಕಿಡಿಕಾರಿದ್ದಾರೆ.
ಯಾರಾದರೂ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಮಾಧ್ಯಮಗಳು ಎಲ್ಲವನ್ನು ಬಯಲಿಗೆ ತರುತ್ತಿವೆ ಎಂದ ಅವರು, ಪೊಲೀಸರು ಮತ್ತು ಸರ್ಕಾರದ ಮೇಲೆ ನಂಬಿಕೆ ಇದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದರೆ ವಾಸಿ ಎಂದು ಈಗ ನನಗೆ ಅನಿಸುತ್ತಿದೆ. ಇದನ್ನು ನೋಡಿ ನಮಗೆ ಶಾಕ್ ಆಯ್ತು, ಈ ಬಗ್ಗೆಯೂ ಸಮಗ್ರವಾಗಿ ತನಿಖೆ ಆಗಲಿ, ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ಮಾಡಲಿ ಎಂದು ಆಗ್ರಹಿಸಿದರು.
ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಿದ ಬಳಿಕ ಗೊತ್ತಾಗುತ್ತದೆ. ಜಡ್ಜ್ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತಾರೆ ಎಂಬ ನಂಬಿಕೆ ಇದೆ. ಆ ನಂಬಿಕೆ ಉಳಿಸಿಕೊಳ್ಳಬೇಕು. ಫೋಟೊ ನೋಡಿದರೆ ಅತನಿಗೆ, ತಪ್ಪು ಮಾಡಿದ್ದೇನೆ ಎಂಬ ಭಾವನೆ ಇಲ್ಲ. ಈ ಘಟನೆ ನೋಡಿ ನನಗೆ ಪರಮಾಶ್ಚರ್ಯ ಆಗಿದೆ. ಜೈಲು ಜೈಲಾಗಿರಬೇಕು, ಮತ್ತೊಂದು ಆಗಿರಬಾರ್ದು. ಕುರ್ಚಿ ಮೇಲೆ ಕುಳಿತು ಚಹ , ಸಿಗರೇಟ್ ಹಿಡಿದು ರೆಸಾರ್ಟ್‌ನಲ್ಲಿ ಕುಳಿತಂತೆ ಕುಳಿತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ, ಪೊಲೀಸರ ಮೇಲೆಯೂ ನಮಗೆ ಪೂರ್ಣ ನಂಬಿಕೆ ಇದೆ. ಪ್ರಕರಣದಲ್ಲಿ ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು ಎಂದರು.
ಮಗನ ಕಳೆದುಕೊಂಡಿರುವ ನೋವು ನನಗೆ ಗೊತ್ತಿದೆ. ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗಬೇಕು, ಅಪರಾಧಿಗಳಿಗೆ ಅವರಿಗೆ ಶಿಕ್ಷೆಯಾಗಬೇಕು ಎಂದು ಕೈಮುಗಿದು ಸರ್ಕಾರವನ್ನು ನಾನು ಕೇಳುತ್ತೇನೆ. ನನ್ನ ಮಗನ ಸಾವಿಗೆ ಇಡೀ ರಾಜ್ಯ ದುಃಖ ಪಟ್ಟಿದೆ. ಗೃಹ ಸಚಿವರು ಕೂಡ ಈ ಬಗ್ಗೆ ಗಮನ ಹರಿಸಬೇಕು. ನಮ್ಮ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದೇವೆ ಎಂದರು.
ಇದನ್ನೂ ಓದಿ | Actor Darshan : ರೌಡಿಶೀಟರ್‌ಗಳ ಜತೆಗೆ ಸಿಗರೇಟ್ ಸೇದುತ್ತಾ ಜೈಲಿನಲ್ಲಿ ನಟ ದರ್ಶನ್ ಬಿಂದಾಸ್ ಲೈಫ್! ವೈರಲ್ ಆಯ್ತು ಫೋಟೊಇದನ್ನೂ ಓದಿ |
ಇಂಥವರಿಗೆ ಮನುಷ್ಯತ್ವ ಇದೆಯಾ? ದಿನ ಬೆಳಕಾದ್ರೆ ಸೊಸೆ ಜೀವನದ ಬಗ್ಗೆ ಸಂಕಟ ಆಗುತ್ತದೆ. ಇಂಥ ದೃಶ್ಯ ನಮ್ಮ ಹೊಟ್ಟೆ ಉರಿಸುತ್ತದೆ. ದಯವಿಟ್ಟು ಅರ್ಥ ಮಾಡಿಕೊಂಡು ಸಮಗ್ರ ತನಿಖೆ ಆಗಬೇಕು. ಈ ರೀತಿ ಆಗುತ್ತಿರುವುದರಿಂದಲೇ ನಾವು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದು ಶಿವನಗೌಡರ್ ಹೇಳಿದರು.