ಬೆಂಗಳೂರು: ಭಾರತೀಯ ಸಂಪ್ರದಾಯದಲ್ಲಿ ಪತಿಯನ್ನು ದೇವರೆಂದು ಭಾವಿಸಿ, ಪೂಜಿಸುವ ಸಂಪ್ರದಾಯ ಇದೆ. ಭೀಮನ ಅಮಾವಾಸ್ಯೆ (Bheemana Amavasya) ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಮಹಿಳೆಯರು ಪತಿಗೆ ಪೂಜೆ ಸಲ್ಲಿಸಿ, ಆಯಸ್ಸು, ಆರೋಗ್ಯ ವೃದ್ಧಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅದರಂತೆ ಸೋಮವಾರ, ನಗರದ ನಿವಾಸದಲ್ಲಿ ಸ್ಯಾಂಡಲ್‌ವುಡ್ ನಟ ನೆನಪಿರಲಿ ಪ್ರೇಮ್ ಅವರ ಪತ್ನಿ ಜ್ಯೋತಿ ಅವರು ಪತಿಯ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು.
ಸನಾತನ ಹಿಂದು ಸಂಪ್ರದಾಯದಲ್ಲಿ ದೇವರು-ದೇವತೆಗಳನ್ನು ಪೂಜಿಸುವುದಷ್ಟೆ ಅಲ್ಲದೆ ಪವಿತ್ರವಾದ ಸಂಬಂಧಗಳನ್ನು ಪೂಜಿಸಿ, ಗೌರವಿಸುವ ಪದ್ಧತಿ ಇದೆ. ಹೀಗಾಗಿ ನಾಡಿನೆಲ್ಲೆಡೆ ಭೀಮನ ಅಮಾವಾಸ್ಯೆಯನ್ನು ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಜತೆಗೆ ಮನೆಯಲ್ಲಿ ಪತಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಆಚರಿಸಿದ್ದು ಕಂಡುಬಂತು.
ಇದನ್ನೂ ಓದಿ | Adhika Masa 2023 : ಅಧಿಕಮಾಸದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ!