Site icon Vistara News

Actor Rishab Shetty | ಕುಟುಂಬ ಸಮೇತ ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಮಾಡಿದ ರಿಷಬ್‌ ಶೆಟ್ಟಿ

ಕಾಂತಾರ ಮೂಲಕ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಹವಾ ಕ್ರಿಯೇಟಿ ಮಾಡಿರುವ ನಟ ರಿಷಬ್‌ ಶೆಟ್ಟಿ (Actor Rishab Shetty), ಕುಟುಂಬದೊಂದಿಗೆ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಮಂಗಳೂರು: ಕಾಂತಾರ ಸಿನಿಮಾ ಸಕ್ಸಸ್‌ನ ಖುಷಿಯಲ್ಲಿರುವ ನಟ ಕಂ ನಿರ್ದೇಶಕ ರಿಷಬ್‌ ಶೆಟ್ಟಿ (Actor Rishab Shetty) ಗುರುವಾರ ಕುಟುಂಬ ಸಮೇತ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಕುಟುಂಬದವರೊಂದಿಗೆ ಕಟೀಲಿಗೆ ಭೇಟಿ ನೀಡಿದ್ದು, ದುರ್ಗಾಪರಮೇಶ್ವರಿಯ ದರ್ಶನ ಮಾಡಿದ್ದಾರೆ. ಶೆಟ್ಟರಿಗೆ ಪತ್ನಿ ಪ್ರಗತಿ ಸಾಥ್‌ ನೀಡಿದ್ದರು. ದೇವಳದ ವತಿಯಿಂದ ರಿಷಬ್ ಶೆಟ್ಟಿ ಅವರಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದ್ದು, ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ಗೌರವಿಸಲಾಯಿತು.

ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು
ನೆಚ್ಚಿನ ನಟ ದೇವಸ್ಥಾನಕ್ಕೆ ಬಂದಿರುವುದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳೆಲ್ಲ ಸೆಲ್ಫಿಗಾಗಿ ಮುಗಿಬಿದ್ದರು. ದೇವಸ್ಥಾನದ ಮುಂಭಾಗ ನಿಂತು ಸೆಲ್ಫಿಗೆ ರಿಷಬ್‌ ಶೆಟ್ಟಿ ಪೋಸ್‌ ಕೊಟ್ಟರು.

ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯಲು ಕಾಂತಾರ ಸಜ್ಜು
ಕಾಂತಾರ ಸಿನಿಮಾದ (Kantara Movie) ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹಿಂದಿ ವರ್ಷನ್‌ ಒಟಿಟಿಯ ದಿನಾಂಕವನ್ನು ರಿವೀಲ್‌ ಮಾಡಿ ಸಿನಿಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದರು. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯಲು ಇಂಗ್ಲಿಷ್‌ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ತುಳು ಭಾಷೆಯಲ್ಲಿ ಕಾಂತಾರ ಡಬ್ ಆಗಿ ರಿಲೀಸ್ ಆಗಿದೆ.

ಕಾಂತಾರ ಇಂಗ್ಲಿಷ್ ಭಾಷೆಗೆ ಡಬ್ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಎಲ್ಲ ಭಾಷೆಯ ಪ್ರೇಕ್ಷಕರನ್ನು ಸೆಳೆಯುತ್ತಿರುವ ಕಾಂತಾರ ಈಗ ವಿದೇಶಿಗರನ್ನು ಸೆಳೆಯಲು ಮುಂದಾಗಿದೆ. ಕಾಂತಾರ ಇಂಗ್ಲಿಷ್ ವರ್ಷನ್ ಜನವರಿಯಿಂದ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.

ಇದನ್ನೂ ಓದಿ | Actor Yash | ಗೃಹಪ್ರವೇಶ ಹಿನ್ನೆಲೆ ವಿಷ್ಣು ದಾದಾ ಮನೆಗೆ ಯಶ್‌ ದಂಪತಿ, ಕಿಚ್ಚ ಸುದೀಪ್‌ ಭೇಟಿ: ಫೋಟೊಗಳು ವೈರಲ್‌!

Exit mobile version