Site icon Vistara News

Shiva Rajkumar: ʼಹಾಯ್‌ ನಾನ್ನʼ ಮೆಚ್ಚಿದ ಶಿವಣ್ಣ; ಚಿತ್ರ ತಂಡಕ್ಕೆ ಅಭಿನಂದನೆ

Actor Shiva Rajkumar

ಬೆಂಗಳೂರು: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ʼಹಾಯ್‌ ನಾನ್ನʼ ಚಿತ್ರವನ್ನು ಸ್ಯಾಂಡಲ್‌ವುಡ್‌ ನಟ ಶಿವ ರಾಜ್‌ಕುಮಾರ್‌ ಅವರು ವೀಕ್ಷಿಸಿದ್ದು, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದಾಗ ಶಿವರಾಜ್‌ಕುಮಾರ್ ಅವರನ್ನು ನಟ ನಾನಿ ಭೇಟಿಯಾಗಿ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದರು. ಇದೀಗ ಸಿನಿಮಾ ಬಗ್ಗೆ ನಟ ಶಿವಣ್ಣ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಪೋಸ್ಟ್‌ ಮಾಡಿರುವ ಶಿವರಾಜ್‌ ಕುಮಾರ್‌ ಅವರು, ಬಹಳ ಉತ್ತಮವಾಗಿ ಚಿತ್ರ ತೆಗೆದಿರುವುದಕ್ಕೆ ಅಭಿನಂದನೆಗಳು. ನಾನಿ ನಿಮ್ಮ ಅಭಿನಯ ಅದ್ಭುತವಾಗಿದೆ. ಚಿತ್ರದಲ್ಲಿನ ಎಲ್ಲ ಅಂಶಗಳು ಇಷ್ಟವಾಗಿದ್ದು, ವಿಶೇಷವಾಗಿ ತಂದೆ-ಮಗಳ ಬಾಂಧವ್ಯ ಇಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ‘Hi Nanna’ ಚಿತ್ರ ನೋಡಿದೆ. ಮನಸಿಗೆ ತುಂಬ ಖುಷಿ ಕೊಟ್ಟ ಚಿತ್ರ ಇದಾಗಿದ್ದು, ತಂದೆ-ಮಗಳ ಸಂಬಂಧ ತುಂಬಾ ಅಮೂಲ್ಯವಾದುದು. ಅದನ್ನು ನಿರ್ದೇಶಕ ಶೌರ್ಯುವ್ ತಮ್ಮ ಮೊದಲನೇ ಚಿತ್ರವನ್ನು ಅದ್ಭುತವಾಗಿ ತೆರೆ ಮೇಲೆ ತಂದಿದ್ದಾರೆ. ಚಿತ್ರದ ಜೀವಾಳ ನಾನಿ ಅವರ ನಟನೆ. ಒಬ್ಬ ನಟ ಹೊಸ ನಿರ್ದೇಶಕರ ಬೆನ್ನೆಲುಬಾಗಿ ನಿಲ್ಲುವುದು ಒಳ್ಳೆಯ ಬೆಳವಣಿಗೆ. ನಾನಿ, ಮೃಣಾಲ್ ಠಾಕೂರ್, ಬೇಬಿ ಕಿಯಾರಾ, ನಿರ್ಮಾಪಕರಾದ ಮೋಹನ್ ಚೆರುಕುರಿ (cvm), ಡಾ. ವಿಜೇಂದರ್ ರೆಡ್ಡಿ ತೀಗಲ ಹಾಗು ಇಡೀ ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ | Thalaivar 170 Title: ʼತಲೈವರ್ 170ʼ ಸಿನಿಮಾ ಟೈಟಲ್‌ ರಿವೀಲ್; ಮತ್ತೊಮ್ಮೆ ಪೊಲೀಸ್‌ ಗೆಟಪ್‌ನಲ್ಲಿ ರಜನಿಕಾಂತ್

ಇದಕ್ಕೂ ಮುನ್ನ ಮೈಸೂರಿನಲ್ಲಿ ಚಿತ್ರ ವೀಕ್ಷಿಸಿದ್ದ ಶಿವಣ್ಣ ಅವರು, ತುಂಬ ಅದ್ಭುತ ಸಿನಿಮಾ. ಎಮೋಷನ್, ಸೆಂಟಿಮೆಂಟ್ ಬೇಗ ಕನೆಕ್ಟ್ ಆಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಇದ್ದರೆ ಬೇಗ ಇಷ್ಟವಾಗುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಬೇಗ ಕನೆಕ್ಟ್ ಆಯ್ತು. ಮ್ಯೂಸಿಕ್ ತುಂಬಾ ಚೆನ್ನಾಗಿದೆ. ನಾನಿ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲರ ಅಭಿನಯ ಅದ್ಭುತವಾಗಿದೆ. ನನಗೆ ಬಹಳ ಟಚ್ ಆಯ್ತು ಸಿನಿಮಾ. ಕೊನೆ ಹತ್ತು ನಿಮಿಷ ಕಣ್ಣಲ್ಲಿ ನೀರು ಬಂತು. ನಾನಿ ನಾನು ನಿಮ್ಮ ಅಭಿಮಾನಿಯಾಗಿದ್ದೇನೆ ಎಂದು ತಿಳಿಸಿದ್ದರು.

ಶೌರ್ಯುವ್ ನಿರ್ದೇಶನದ ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ʻಹಾಯ್ ನಾನ್ನʼ (Hi Nanna Trailer) ಚಿತ್ರ ಡಿಸೆಂಬರ್ 7 ರಂದು ಬಿಡುಗಡೆಯಾಗಿತ್ತು. ಹಾಯ್ ನಾನ್ನ ಎಂಬ ತೆಲುಗು ಸಾಲಿನ ಅರ್ಥ ‘ಹಾಯ್ ಅಪ್ಪ’ ಎಂಬುದಾಗಿದೆ. ಸೌತ್ ಭಾಷೆಯಲ್ಲಿ ಒಂದೇ ಟೈಟಲ್ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಹಾಯ್ ನಾನ್ನ ಎಂದೇ ಶೀರ್ಷಿಕೆ ಫಿಕ್ಸ್ ಮಾಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಂಡಿದ್ದಾರೆ. ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Kirik Party: ʼಕಿರಿಕ್‌ ಪಾರ್ಟಿ 2ʼ ಬರುತ್ತಾ?; ಪರಂವಃ ಸ್ಟುಡಿಯೊದಿಂದ ಕುತೂಹಲಕಾರಿ ಸುಳಿವು!

ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version