Site icon Vistara News

Babanna Kalmani : ನಟ, ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ನಿಧನ

Babanna Kalmani

ಕೊಪ್ಪಳ: ಚಿತ್ರನಟ ಹಾಗೂ ರಂಗಭೂಮಿ ಹಿರಿಯ ಕಲಾವಿದ ಬಾಬಣ್ಣ ಕಲ್ಮನಿ (Babanna Kalmani) ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಬಾಬಣ್ಣ ಅವರಿಗೆ ಪತ್ನಿ ಹಾಗೂ ಮಕ್ಕಳು ಅಪಾರ ಅಭಿಮಾನಿಗಳಿದ್ದಾರೆ. ರಂಗಭೂಮಿ ಕಲಾವಿದರಾಗಿ, ದೂರದರ್ಶನ ಮತ್ತು ಚಲನಚಿತ್ರ ನಟರಾಗಿ ಅವರು ಹೆಸರಾಗಿದ್ದರು. ಬಾಬಣ್ಣ ಅವರಿಗೆ 1993ರಲ್ಲಿ ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿ ಬಂದಿತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯರು ಇದ್ದಾರೆ.

12 ವರ್ಷದ ಬಾಲಕನಾಗಿದ್ದಾಗ ರಂಗಭೂಮಿಗೆ ಪ್ರವೇಶ ಪಡೆದಿದ್ದ ಬಾಬಣ್ಣ ಅವರು ಅಲ್ಲಿಂದ ರಂಗಭೂಮಿಯ ನಂಟು ಮುಂದುವರಿಸಿದ್ದರು. ಬಾಬಣ್ಣ ಸ್ತ್ರೀರತ್ನ ನಾಟಕದ ಮೂಲಕ ಬಾಲ ನಟರಾದರು. ನಾಟಕದ ಮೇಲಿನ ಅತೀವ ಪ್ರೀತಿಯಿಂದಾಗಿ ಲಲಿತಕಲಾ ನಾಟ್ಯ ಸಂಘ ಆರಂಭಿಸಿದರು. ‘ಸಂತ ಶಿಶುನಾಳ ಸಾಹೇಬರ ಮಹಾತ್ಮ’, ‘ಅಜಾತ ನವಲಗುಂದ ನಾಗಲಿಂಗ ಲೀಲೆ’ ಹಾಗೂ ಮೂಡಲಮನೆ ಧಾರವಾಹಿಯಲ್ಲಿ ಅಭಿನಯ ಇವರಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟವು. ಬಾಬಣ್ಣ ಕಲ್ಮನಿ ಅವರಿಗೆ 2021-22ನೇ ಸಾಲಿನ ‘ಗುಬ್ಬಿ ವೀರಣ್ಣ’ ಪ್ರಶಸ್ತಿ ಲಭಿಸಿದೆ.

ನಟಿಲೀಲಾವತಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ

ಬೆಂಗಳೂರು: ಹಿರಿಯ ನಟಿ ಲೀಲಾವತಿ ಅವರ (Actress Leelavathi) ಅಂತ್ಯ ಸಂಸ್ಕಾರ ನೆಲಮಂಗಲದ ಸೋಲದೇವನಹಳ್ಳಿಯ ತೋಟದ ಮನೆ ಬಳಿ ಕುಟುಂಬಸ್ಥರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ ಸಂಜೆ ನೆರವೇರಿತು. ಸಕಲ ಸರ್ಕಾರಿ ಗೌರವದೊಂದಿಗೆ ಹಿಂದು ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಯಿತು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

ಇದಕ್ಕೂ ಮುನ್ನಾ ನಡೆದ ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಸೋಲದೇವನಹಳ್ಳಿಗೆ ಆಂಬ್ಯುಲೆನ್ಸ್‌ನಲ್ಲಿ ತರಲಾಯಿತು. ನಂತರ ವಿನೋದ್‌ ರಾಜ್‌ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ನಂತರ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಸರ್ಕಾರದ ಪರವಾಗಿ ಸಚಿವ ಕೆ.ಎಚ್‌.ಮುನಿಯಪ್ಪ ಪುಷ್ಪಗುಚ್ಛ ಸಮರ್ಪಿಸಿದರು. ಬಳಿಕ ಹಿಂದು ಧರ್ಮದ ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ನಟಿ ಲೀಲಾವತಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ, ಡಿಸಿಎಂ ಸೇರಿ ಗಣ್ಯರು

ನೆಲಮಂಗಲದ ಅಂಬೇಡ್ಕರ್‌ ಮೈದಾನದ ಬಳಿಕ ಹಿರಿಯ ನಟಿ ಲೀಲಾವತಿ ಅವರ (Actress Leelavathi) ಅಂತಿಮ ದರ್ಶನಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್‌.ಯರಿಯೂರಪ್ಪ ಸೇರಿ ರಾಜಕೀಯ ನಾಯಕರು ಹಾಗೂ ಚಿತ್ರರಂಗದ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Exit mobile version