ಬೆಂಗಳೂರು: ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘದಿಂದ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ತಂತ್ರಜ್ಞರಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘದಿಂದ ಆಯೋಜಿಸಲಾಗಿರುವ “ಕೆಎಂಎಚ್ ಕಪ್” ಕ್ರಿಕೆಟ್ ಟೂರ್ನಿ (KMH CUP) ಲೋಗೋ ಬಿಡುಗಡೆ ಸಮಾರಂಭ ಈಚೆಗೆ ನಡೆಯಿತು.
ಈ ಟೂರ್ನಿಯ ರಾಯಭಾರಿ ಆಗಿರುವ ನಟಿ ಭಾವನ ರಾಮಣ್ಣ ಲೋಗೊ ಬಿಡುಗಡೆ ಮಾಡಿದರು. ಕಾಂಗ್ರೆಸ್ ಮುಖಂಡ ದಿನೇಶ್, ಸಂಘದ ಅಧ್ಯಕ್ಷ ಎಸ್. ಬಾಬು ಧರ್ಮೇಂದ್ರ ಹಾಗೂ ಕಾರ್ಯದರ್ಶಿ ದಿನೇಶ್ ಆಚಾರ್ ಈ ವೇಳೆ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘಕ್ಕೆ ಮೂವತ್ತೈದು ವರ್ಷಗಳ ಇತಿಹಾಸವಿದೆ. ಅನೇಕ ಹಿರಿಯರು ಈ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಇದೇ ಮೊದಲ ಬಾರಿಗೆ ನಮ್ಮ ಸಂಘದ ವತಿಯಿಂದ “ಕೆಎಂಎಚ್ ಕಪ್” ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಸದಾ ನಮ್ಮ ಸಂಘದ ಜತೆಯಿರುವ ನಟಿ ಭಾವನ ರಾಮಣ್ಣ ಈ ಟೂರ್ನಿಯ ರಾಯಭಾರಿಯಾಗಿದ್ದಾರೆ.
ಇದನ್ನೂ ಓದಿ: Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ
ಜುಲೈ 20 ಹಾಗೂ 21 ಶನಿವಾರ ಹಾಗೂ ಭಾನುವಾರ ವಿಜಯನಗರದ ಬಿ.ಜಿ.ಎಸ್. ಮೈದಾನದಲ್ಲಿ ಈ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಬೆಳಿಗ್ಗೆ 8 ರಿಂದ ರಾತ್ರಿ 8 ವರೆಗೂ ಪಂದ್ಯಗಳು ನಡೆಯುತ್ತದೆ. ನಾಕೌಟ್ ಪಂದ್ಯಗಳು ಆರು ಓವರ್ ಇರುತ್ತದೆ. ಫೈನಲ್ ಪಂದ್ಯ ಎಂಟು ಓವರ್ ನದಾಗಿರುತ್ತದೆ. ಗೆದ್ದ ಮೊದಲ ತಂಡಕ್ಕೆ 49,999 ರೂಪಾಯಿ ಹಾಗೂ ರನ್ನರ್ ತಂಡಕ್ಕೆ 24, 999 ರೂಪಾಯಿ ಬಹುಮಾನ ನೀಡಲಾಗುವುದು.
ಟೂರ್ನಿಯಲ್ಲಿ ಭಾಗವಹಿಸುವ ತಂಡಕ್ಕೆ ಹತ್ತು ಸಾವಿರ ಪ್ರವೇಶ ದರ ವಿರುತ್ತದೆ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಒಳಪಡುವ ಹನ್ನೆರಡು ಸಂಘಗಳು ಹಾಗೂ ಮಾಧ್ಯಮದ ಮಿತ್ರರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ಹದಿನಾಲ್ಕು ತಂಡಗಳು ಟೂರ್ನಿಯಲ್ಲಿ ಭಾಗಿಯಾಗಲಿದೆ ಎಂದು ಸಂಘದ ಅಧ್ಯಕ್ಷ ಬಾಬು ಧರ್ಮೇಂದ್ರ ತಿಳಿಸಿದರು.
ಇದನ್ನೂ ಓದಿ: Share Market: ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಗರಿಷ್ಠ ಮಟ್ಟ ತಲುಪಿದ ನಿಫ್ಟಿ
ತಮ್ಮ ಮೊದಲ ಚಿತ್ರಕ್ಕೆ ಮೇಕಪ್ ಮಾಡಿದ ವೆಂಕಟೇಶ್ ಅವರನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ನಟಿ ಭಾವನ ರಾಮಣ್ಣ, ನಾನು ನಟಿಸುವ ಎಲ್ಲಾ ಚಿತ್ರಗಳ ನಿರ್ಮಾಪಕರಿಗೆ ಹೇಳುವುದು ಮೇಕಪ್ ಹಾಗೂ ಕೇಶಾಲಂಕಾರಕ್ಕೆ ಈ ಸಂಘದ ಸದಸ್ಯರೇ ಇರಲಿ ಎಂದು. ಈಗ ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಮೇಕಪ್ ಕುರಿತು ಪ್ರಮೋಷನ್ ಮಾಡಿಕೊಳ್ಳುತ್ತಾರೆ. ಅದರಿಂದ ಇವರಿಗೆ ಸ್ವಲ್ಪ ತೊಂದರೆಯಾಗುತ್ತಿದೆ. ಇನ್ನು ಈ ಟೂರ್ನಿಯ ಬಗ್ಗೆ ಹೇಳಬೇಕೆಂದರೆ, ಹೆಚ್ಚಾಗಿ ಕಲಾವಿದರು ಕ್ರಿಕೆಟ್ ಆಡುತ್ತೇವೆ. ತಂತ್ರಜ್ಞರು ಆಡುವುದು ಕಡಿಮೆ. ಕಾರ್ಮಿಕರು ಹಾಗೂ ತಂತ್ರಜ್ಞರಿಗಾಗಿ ಆಯೋಜಿಸಿರುವ ಈ ಕ್ರಿಕೆಟ್ ಟೂರ್ನಿಯ ರಾಯಭಾರಿಯಾಗಿದ್ದು ಖುಷಿಯಾಗಿದೆ. ಟೂರ್ನಿ ಯಶಸ್ವಿಯಾಗಲಿ ಎಂದು ತಿಳಿಸಿದರು.