ಬೆಂಗಳೂರು: “ಕ್ರೀಮ್ʼ ಸಿನಿಮಾ ಚಿತ್ರೀಕರಣದ ವೇಳೆ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ಅವರು ಗಾಯಗೊಂಡಿದ್ದಾರೆ. ಫೈಟಿಂಗ್ ಸೀನ್ ಚಿತ್ರೀಕರಣದ ವೇಳೆ ಕಾಲು ಟ್ವಿಸ್ಟ್ ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಕಂಠೀರವ ಸ್ಟುಡಿಯೋದಲ್ಲಿ ಬುಧವಾರ ಚಿತ್ರೀಕರಣದ ಮಾಡುತ್ತಿದ್ದಾಗ ಸಾಹಸ ದೃಶ್ಯಕ್ಕೆ ಡ್ಯೂಪ್ ಬಳಸದೆ ಅವರೇ ಸ್ಟಂಟ್ ಮಾಡಲು ಹೋಗಿದ್ದಾಗ ಅವಘಡ ಸಂಭವಿಸಿದೆ ಎಂದು ಚಿತ್ರತಂಡ ತಿಳಿಸಿದೆ. ಸಂಯುಕ್ತಾ ಅವರು ಈಗ ಚೇತರಿಕೆ ಕಾಣುತ್ತಿದ್ದು, ವೈದ್ಯರು 15 ದಿನ ವಿಶ್ರಾಂತಿ ಪಡೆಯಲು ಹೇಳಿದ್ದಾರೆ.
ಫೈಟ್ ಶೂಟಿಂಗ್‌ನಲ್ಲಿ ಶೇ.೯೦ ಭಾಗ ಮುಗಿದಿತ್ತು. ಆದರೆ ಕೊನೆಯ ಹಂತದಲ್ಲಿ ನಟಿಯ ಕಣ್ಣಿನ ಬಳಿ ಮತ್ತು ಕಾಲಿಗೆ ಪೆಟ್ಟಾಗಿದೆ ಎಂದು ನಿರ್ಮಾಪಕ ಡಿ.ಕೆ. ದೇವೇಂದ್ರ ಮಾಹಿತಿ ನೀಡಿದ್ದಾರೆ. ಕ್ರೀಮ್ ಚಿತ್ರಕ್ಕೆ ಅಭಿಷೇಕ್ ಬಸಂತ್ ನಿರ್ದೇಶಕರಾಗಿದ್ದು, ಪ್ರಭು ಫೈಟ್ ಮಾಸ್ಟರ್ ಹಾಗೂ ಸುನೋಜ್ ವೇಲಾಯುಧನ್ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ | Vikrant Rona | ಕಿಚ್ಚ ವರ್ಸ್ ಲಾಂಚ್; ಡಿಜಿಟಲ್ ಜಗತ್ತಿನಲ್ಲಿ ಕಿಚ್ಚ ಸುದೀಪ್ ಹವಾ ಶುರು