ಬೆಳಗಾವಿ: ಹೆಂಡತಿಯರೇ ನಿಮಗೆ ಬೇರೆ ಸಂಬಂಧ (Illicit Relationship) ಇದ್ದರೆ ಓಡಿ ಹೋಗಿ. ಆದರೆ, ಕಟ್ಟಿಕೊಂಡ ಗಂಡನನ್ನು ಕೊಲೆ (Murder Case) ಮಾಡಬೇಡಿ! ಬೆಳಗಾವಿಯಲ್ಲಿ ಕರವೇ ರಾಜ್ಯ ಸಂಚಾಲಕರೊಬ್ಬರ ವಿಶಿಷ್ಟ ಮನವಿ ಇದಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಎಂಬುವವರು ಇಂತಹ ವಿಶಿಷ್ಟ ಮನವಿಯನ್ನು ಮಾಡಿದ್ದಾರೆ. ಕಟ್ಟಿಕೊಂಡ ಗಂಡ ಇಷ್ಟ ಇಲ್ಲದಿದ್ದರೆ ಆತನಿಂದ ಬೇರ್ಪಡಲು ಕಾನೂನಿನಲ್ಲಿ ನಿಮಗೆ ಅವಕಾಶ ಇದೆ. ಪತಿಗೆ ವಿಚ್ಛೇದನ ನೀಡಿ ನೀವು ನಿಮ್ಮ ದಾರಿಯನ್ನು ನೋಡಿಕೊಳ್ಳಬಹುದು. ಇಂತಹ ಅವಕಾಶಗಳನ್ನು ಬಿಟ್ಟು ಗಂಡನನ್ನೇ ಕೊಲೆ ಮಾಡಿದರೆ ಹೇಗೆ? ಕೊಲೆಯಂತಹ ಕೃತ್ಯಗಳಿಗೆ ಇಳಿಯಬೇಡಿ. ಯಾರದ್ದೂ ಜೀವವನ್ನು ತೆಗೆಯಬಾರದು. ಅವರಿಗೂ ಅವರದ್ದೇ ಆದ ಬದುಕು ಇರುತ್ತದೆ. ನಂಬಿಕೆ ಇರುತ್ತದೆ. ಅದನ್ನೇಕೆ ಹಾಳು ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Education News: ಒಂದೂ ಮಕ್ಕಳಿಲ್ಲದ ಶಾಲೆಗೆ ಇಬ್ಬರು ಶಿಕ್ಷಕರು! ಇದು ದಾಸನಹುಂಡಿ ಸಕಿಪ್ರಾ ಶಾಲೆಯ ಕಥೆ-ವ್ಯಥೆ
ಏಕೆ ಈ ಮನವಿ?
ಬೆಳಗಾವಿ ಅಂಬೇಡ್ಕರ್ ನಗರ ನಿವಾಸಿ ರಮೇಶ ಕಾಂಬಳೆ ಎಂಬುವವರು ಈಚೆಗೆ ಪತ್ನಿ ಮತ್ತವಳ ಪ್ರಿಯಕರನಿಂದ ಹತ್ಯೆಗೀಡಾಗಿದ್ದರು. ಕೊಲೆ ಮಾಡಿದ ಮೇಲೆ ಇವರಿಬ್ಬರೂ ಸೇರಿ ಆ ಶವವನ್ನು ಚೋರ್ಲಾ ಘಾಟ್‌ಗೆ ಎಸೆದು ಬಂದಿದ್ದರು. ಬಳಿಕ ಏನೂ ಆಗದಂತೆ ಇದ್ದು ಬಿಟ್ಟಿದ್ದರು. ಕೊಲೆ ಸುದ್ದಿ ತಿಳಿದ ತಕ್ಷಣ ಪತ್ನಿ ಗೋಳಾಡಿದ್ದಳು. ಆದರೆ, ತನಿಖೆಗೆ ಇಳಿದ ಪೊಲೀಸರಿಗೆ ಆಕೆಯ ಅಸಲಿ ವಿಷಯ ಗೊತ್ತಾಗಿದೆ. ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾಳೆ. ಪ್ರಿಯಕರ ಬಾಳು ಬಿರಂಜೆ ಎಂಬಾತನ ಜತೆ ಸೇರಿದ್ದ ರಮೇಶ್ ಕಾಂಬಳೆ ಅವರ ಪತ್ನಿ ಸಂಧ್ಯಾ ಕಾಂಬಳೆ ತನ್ನ ಗಂಡನನ್ನೇ ಹತ್ಯೆ ಮಾಡಿದ ಆರೋಪಿಯಾಗಿದ್ದಾಳೆ. ಈಗ ಕೊಲೆ ಆರೋಪಿಗಳು ಬಂಧಿತರಾಗಿದ್ದಾರೆ.
ಈ ಕಾರಣಕ್ಕಾಗಿ ಕರವೇ ಕುಟುಂಬಸ್ಥರ ನೆರವಿಗೆ ಬಂದಿದೆ. ತಪ್ಪಿತಸ್ಥರಿಗೆ ಶಿಕ್ಷೆ ಮಾಡುವಂತೆ ಆಗ್ರಹಿಸಿದೆ. ಜತೆಗೆ ಸಾಮೂಹಿಕವಾಗಿ ಮನವಿಯನ್ನೂ ಮಾಡಿದ್ದು, ಬಾಳಲು ಇಷ್ಟವಿಲ್ಲದಿದ್ದರೆ ಕಾನೂನು ಪ್ರಕಾರ ಪತ್ಯೇಕವಾಗಬೇಕು. ಈ ರೀತಿಯಾಗಿ ಯಾರ ಜೀವಕ್ಕೂ ಹಾನಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Earthquake in Hasana: ಅರಕಲಗೂಡಲ್ಲಿ ಕಂಪಿಸಿದ ಭೂಮಿ; ಹೆದರಿ ಹೊರಗೆ ಓಡಿ ಬಂದ ಜನ
ಕೊಲೆಗಾರರ ಆಸ್ತಿ ಮುಟ್ಟುಗೋಲಿಗೆ ಮನವಿ
ಕೊಲೆ ಮಾಡಿದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕಾರಣ, ರಮೇಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ಆಸ್ತಿ ಮುಟ್ಟುಗೋಲು ಹಾಕಿ ಆ ಹಣವನ್ನು ರಮೇಶ್ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ಅನುಕೂಲ ಮಾಡಬೇಕು. ಜತೆಗೆ ರಮೇಶ್ ಅವರನ್ನು ಕೊಂದವರನ್ನು ಗಲ್ಲಿಗೇರಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಹೋರಾಟಗಾರರು ಹಾಗೂ ಮೃತ ರಮೇಶ ಕುಟುಂಬಸ್ಥರು ಕೋರಿದ್ದಾರೆ.