ಭಾರತದ ವಾಯು ಪಡೆಯ (Air Force) ಬೆಂಗಳೂರು ವಿಭಾಗದ ಸಾಫ್ಟ್‌ವೇರ್ ಡೆವಲೆಪ್ಮೆಂಟ್ ಇನ್ಸ್ಟಿಟ್ಯೂಟ್ (Software Development Institute -SDI)ನ ಕಮಾಂಡಂಟ್ (ಮುಖ್ಯಸ್ಥ) ಆಗಿ ಏರ್ ವೈಸ್ ಮಾರ್ಷಲ್ ಕೆ.ಎನ್.ಸಂತೋಷ್ (Air Vice Marshal K N Santosh)ನೇಮಕಗೊಂಡಿದ್ದಾರೆ. ಇವರು ವಾಯುಪಡೆಯಲ್ಲಿ ಸುಮಾರು 30ವರ್ಷಗಳಿಂದಲೂ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ವಿವಿಧ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಏರ್ ಫೋರ್ಸ್ ಪ್ರಧಾನ ಕಚೇರಿ ವ್ಯಾಪ್ತಿಯ ಪ್ರಮುಖ ವಾಯುನೆಲೆಯೊಂದರಲ್ಲಿ ಮುಖ್ಯ ಎಂಜಿನಿಯರ್ ಆಗಿ, ಆಪರೇಶನಲ್ ನೆಟ್ವರ್ಕ್ನ ಪ್ರಿನ್ಸಿಪಾಲ್ ಡೈರೆಕ್ಟರ್, ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ SU-30 (Sukhoi Su-30 ಯುದ್ಧ ವಿಮಾನ)ಅಪ್ಗ್ರೇಡ್ ತಂಡದಲ್ಲಿ ಏವಿಯಾನಿಕ್ಸ್ ಸಾಫ್ಟ್‌ವೇರ್ ಸ್ಪೆಷಲಿಸ್ಟ್ (ಏರ್ಕ್ರಾಫ್ಟ್ ಉಪಕರಣಗಳ ಸಾಫ್ಟ್‌ವೇರ್ ತಜ್ಞ) ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಏರ್ ವೈಸ್ ಮಾರ್ಶಲ್ ಕೆ.ಎನ್.ಸಂತೋಷ್ ಅವರು ಮಂಡ್ಯ (ಮೈಸೂರು ಯೂನಿವರ್ಸಿಟಿ)ದ ಪಿಇಎಸ್ ಎಂಜಿನಿಯರ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಿದ್ದಾರೆ. ಡಿಫೆನ್ಸ್ ಸರ್ವಿಸ್ ಕಾಲೇಜಿನ ಹಳೇ ವಿದ್ಯಾರ್ಥಿ. ಆಪರೇಶನಲ್ ಮ್ಯಾನೇಜ್ಮೆಂಟ್ ಮತ್ತು ಡಿಫೆನ್ಸ್ ಸ್ಟಡೀಸ್ನಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅವರು ಏರ್ಫೋರ್ಸ್ನ ಸಾಫ್ಟ್‌ವೇರ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ನಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಕೆ.ಎನ್.ಸಂತೋಷ್ ಅವರು 2005ರಲ್ಲಿ ವಿಶಿಷ್ಟ ಸೇವಾ ಪದಕ ಪುರಸ್ಕೃತರು. 2017ರಲ್ಲಿ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ಡಾ.ವಿ.ಎಂ.ಘಾಟ್ಗೆ ಪ್ರಶಸ್ತಿ ಪಡೆದಿದ್ದಾರೆ.