Site icon Vistara News

Akshara Dasoha |ಇಲಿ ಬಿದ್ದ ಸಾಂಬಾರನ್ನು ಮಕ್ಕಳಿಗೆ ಬಳಸಿದ ಕಾರ್ಯಕರ್ತರು; ಪೋಷಕರಿಂದ ತರಾಟೆ

Akshara Dasoha Mundagodu sirsi

ಶಿರಸಿ: ಬಿಸಿಯೂಟದ ಸಾಂಬರಿನಲ್ಲಿ ಇಲಿ ಬಿದ್ದರೂ ಅದೇ ಸಾಂಬರು ಬಳಸಿ ಮಕ್ಕಳಿಗೆ ಊಟ ಹಾಕಲಾಗಿದೆ ಎಂದು ಆರೋಪಿಸಿ ಶಿಕ್ಷಕರು ಹಾಗೂ ಅಕ್ಷರ ದಾಸೋಹ (Akshara Dasoha) ಕಾರ್ಯಕರ್ತರನ್ನು ಪೋಷಕರು ತರಾಟೆಗೆ ತೆದುಕೊಂಡ ಘಟನೆ ಉ.ಕ ಜಿಲ್ಲೆ ಮುಂಡಗೋಡಿನಲ್ಲಿ‌ ನಡೆದಿದೆ.

ಪಟ್ಟಣದ ಸರ್ಕಾರಿ ಮಾದರಿ ಶಾಲೆಯಲ್ಲಿ ಸೋಮವಾರ (ಡಿ.೨೬) ಈ ಘಟನೆ ನಡೆದಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮ‌ನ ನೀಡದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಇಲಿ ಬಿದ್ದ ವಿಷಯ ತಿಳಿದರೂ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸದೆ ಅದೇ ಅಡುಗೆಯನ್ನು ಮಕ್ಕಳಿಗೆ ಬಡಿಸಿರಿವುದು ಅಕ್ಷಮ್ಯ ಅಪರಾಧ. ಈ ಹಿನ್ನೆಲೆಯಲ್ಲಿ ಅಡುಗೆ ಮಾಡಿದವರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಅಡುಗೆ ಸಹಾಯಕಿರು ಅಡುಗೆ ಮಾಡುವ ವೇಳೆ ಇಲಿ ಬಿದ್ದಿದ್ದು, ಅದನ್ನು ತೆಗೆದುಹಾಕಿ ಅದೇ ಸಾಂಬರ್ ಬಳಸಿ ಮಕ್ಕಳಿಗೆ ಊಟ ಹಾಕಿದ್ದಾರೆ ಎಂದು ಸ್ವತಃ ಮಕ್ಕಳೇ ತಿಳಿಸಿದ್ದಾರೆ ಎನ್ನಲಾಗಿದೆ‌. ಮಂಗಳವಾರ (ಡಿ.೨೭) ಪೋಷಕರು ಹಾಗೂ ಶಿಕ್ಷರ ಸಭೆಯಲ್ಲಿ ಹೈ ಡ್ರಾಮ ನಡೆದಿದ್ದು, ಈ ಬಗ್ಗೆ ನಮಗೆ ತಿಳಿದೇ ಇಲ್ಲ ಅಂತ ಅಡುಗೆ ಸಹಾಯಕರು ಹೇಳಿದರು. ಹಾಗಾದರೆ ಬಿದ್ದಿರುವ ಇಲಿಯನ್ನು ಮಕ್ಕಳ ಕೈಯಲ್ಲಿ‌ ತೆಗಿಸಿದ್ದೀರಾ ಅಂತ ಪೋಷಕರು ಆರೋಪಿಸಿದರು. ಇನ್ನು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು‌ ಅಂತ ಅಕ್ಷರ ದಾಸೋಹ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | OBC Reservation In UP | ಒಬಿಸಿಗೆ ಮೀಸಲಾತಿ ನೀಡಲು ಯೋಗಿ ಪಣ, ಕೋರ್ಟ್‌ ತೀರ್ಪು ಬಳಿಕ ಆಯೋಗ ರಚನೆಗೆ ಆದೇಶ

Exit mobile version