Site icon Vistara News

Alcohol addiction : ಪತಿಯ ಕುಡಿತ, ಜಗಳಕ್ಕೆ ಬೇಸತ್ತ ಪತ್ನಿ; ಮನೆಯ ಕಂಬಕ್ಕೆ ಸರಪಳಿಯಿಂದ ಕಟ್ಟಿ ಹಾಕಿದಳು!

Alcohol addiction hartikote Alcohol addiction

ಚಿತ್ರದುರ್ಗ: ಗಂಡನ ಕುಡಿತದ ಚಟ (Alcohol addiction) ಬಿಡಿಸಲು ನಾನಾ ಪ್ರಯತ್ನಗಳನ್ನು ಮಾಡಿ ಸೋತ ಪತ್ನಿಯು ಕೊನೆಗೆ ಸರಪಳಿಯಲ್ಲಿ ಆತನನ್ನು ಕಂಬಕ್ಕೆ ಕಟ್ಟಿ ಹಾಕಿರುವ ಪ್ರಕರಣ ಹಿರಿಯೂರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಸಾಮಾಜಿಕ ಜಾಲತಾಣದಲ್ಲಿ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹರ್ತಿಕೋಟೆ ಗ್ರಾಮದ ಉಮೇಶ್ ಎಂಬಾತ ಕುಡಿತದ ಚಟವನ್ನು ಅಂಟಿಸಿಕೊಂಡಿದ್ದ. ಎಷ್ಟೇ ಮಾಡಿದರೂ, ಎಷ್ಟೇ ಹೇಳಿದರೂ ಆತ ಕುಡಿತದ ಚಟವನ್ನು ಬಿಟ್ಟಿರಲಿಲ್ಲ. ಅಲ್ಲದೆ, ಕುಡಿದು ಬಂದು ನಿತ್ಯ ಜಗಳ ಆಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಅಮೃತಾ ಅವರು ಪತಿ ಮನೆಯಿಂದ ಹೊರ ಹೋಗದಂತೆ ತಡೆಯಲು ಮನೆಯಲ್ಲಿಯೇ ಇದ್ದ ಕಂಬಕ್ಕೆ ಸರಪಳಿ ಮೂಲಕ ಕಟ್ಟಿ ಹಾಕಿದ್ದಾರೆ. ಅಮೃತ ಹೊಸಹಳ್ಳಿ ಗ್ರಾಮದವರಾಗಿದ್ದು, ಹರ್ತಿಕೋಟೆ ಉಮೇಶ್‌ ಅವರನ್ನು ವಿವಾಹವಾಗಿದ್ದಾರೆ.

Alcohol addiction hartikote

ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೋಷಿಯಲ್‌ ಮೀಡಿಯಾಗಳಲ್ಲಿ ವಿಡಿಯೊ ಸದ್ದು ಮಾಡುತ್ತಿದೆ. ಅಲ್ಲದೆ, ಪರ-ವಿರೋಧ ಚರ್ಚೆಗಳೂ ನಡೆಯುತ್ತಿವೆ.

ಇದನ್ನೂ ಓದಿ | Drivers hungama | ಪಾನಮತ್ತನಾಗಿ ಬಸ್ ಚಲಾಯಿಸುತ್ತಿದ್ದ ಚಾಲಕ: ಭಯಗೊಂಡ ಪ್ರಯಾಣಿಕರಿಂದ ತೀವ್ರ ತರಾಟೆ

Exit mobile version