Site icon Vistara News

ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಕುಡುಕರ ಅಡ್ಡೆ?; ರಾಶಿರಾಶಿ ಬಾಟಲಿಗಳು ಟೆರೇಸ್​​ ಮೇಲೆ ಬಿದ್ದಿವೆ!

Alcohol bottles

ಚಿಕ್ಕಬಳ್ಳಾಪುರ: ಆಸ್ಪತ್ರೆಗಳು ಎಂದರೆ ಅಲ್ಲಿ ಎಷ್ಟೇ ಸ್ವಚ್ಛತೆ-ಶಿಸ್ತುಯಿದ್ದರೂ ಸಾಕಗಲ್ಲ. ಅದರಲ್ಲೂ ಮದ್ಯಪಾನ, ಗುಟ್ಕಾ ಸೇವನೆಗೆಲ್ಲ ಯಾವ ಕಾರಣಕ್ಕೂ ಅವಕಾಶವೇ ಇರುವುದಿಲ್ಲ. ಅಂಥದ್ದರಲ್ಲಿ ಇಲ್ಲಿನ ಚಿಂತಾಮಣಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಮಹಡಿ ಮೇಲೆ ರಾಶಿರಾಶಿ ಮದ್ಯದ (Chintamani Government Hospital) ಬಾಟಲಿಗಳು ಇವೆ. ಎಲ್ಲವೂ ಖಾಲಿಯಾದ ಮದ್ಯದ ಬಾಟಲಿಗಳೇ (Alcohol Bottles) ಆಗಿದ್ದು, ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ (Health Minister Dinesh Gundu Rao) ಅವರೇ ಒಮ್ಮೆ ಈ ಆಸ್ಪತ್ರೆಗೆ ಭೇಟಿ ಕೊಡಲಿ ಎಂಬ ಆಗ್ರಹವೂ ಕೇಳಿಬಂದಿದೆ.

ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಟೆರೇಸ್​ ಮೇಲೆ ಹೋಗಿ ನೋಡಿದರೆ ನಿಮಗೆ ಮೂಲೆಮೂಲೆಯಲ್ಲಿ ಖಾಲಿ ಮದ್ಯದ ಬಾಟಲಿಗಳು ಕಾಣಿಸುತ್ತಿವೆ. ಇದೇನು ಕುಡುಕರ ಅಡ್ಡವಾ, ಆಸ್ಪತ್ರೆಯಾ ಎಂಬ ಅನುಮಾನ ಬರುವುದು ಗ್ಯಾರಂಟಿ. ಬಿಯರ್​, ವಿಸ್ಕಿ ಮತ್ತಿತರ ಬಾಟಲಿಗಳು ಯತೇಚ್ಛವಾಗಿ ಬಿದ್ದಿವೆ. ಆಸ್ಪತ್ರೆ ಟೆರೇಸ್​ ಮೇಲೆ ಕುಡಿಯುವವರು ಯಾರು ಎಂಬ ಪ್ರಶ್ನೆ ಎದ್ದಿರುವ ಜತೆ, ಆಸ್ಪತ್ರೆ ಸಿಬ್ಬಂದಿಯೇ ಕುಡಿದು ಬಿಸಾಕಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಸಂಪಾದಕೀಯ: ಉತ್ತರ ಕನ್ನಡಕ್ಕೆ ಅಗತ್ಯವಾಗಿ ಬೇಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಕುಡಿದು ಚಿಕಿತ್ಸೆ?
ರಾತ್ರಿ ಹೊತ್ತಲ್ಲಿ ಆಸ್ಪತ್ರೆ ಸಿಬ್ಬಂದಿ ಇಲ್ಲಿ ಕುಳಿತು ಕುಡಿದು, ಬಾಟಲಿಗಳನ್ನು ಎಸೆದಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಹೀಗೆ ಚಿಕಿತ್ಸೆ ನೀಡುವ ವೈದ್ಯರು, ರೋಗಿಗಳ ಆರೈಕೆ ಮಾಡುವವರು, ಆಸ್ಪತ್ರೆಯ ಇನ್ನಿತರ ಕೆಲಸಕ್ಕೆ ನಿಯೋಜನೆಗೊಂಡವರು ಹೀಗೆ ಕುಡಿದು ತಮ್ಮ ಕೆಲಸ ಮಾಡಿದರೆ, ರೋಗಿಗಳು ಎಷ್ಟು ಸೇಫ್​ ಎಂಬ ಆತಂಕ ಪ್ರಾರಂಭವಾಗಿದೆ. ಇಷ್ಟೊಂದು ಮದ್ಯದ ಬಾಟಲಿಗಳು ಇಲ್ಲಿವೆ ಎಂದರೆ ಇದನ್ನು ಆಸ್ಪತ್ರೆ ಸಿಬ್ಬಂದಿಯಲ್ಲದೆ ಇನ್ಯಾರು ಮಾಡಲು ಸಾಧ್ಯ ಎಂದೇ ಹೇಳಲಾಗುತ್ತಿದೆ. ಮೇಲಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರಾ? ಆರೋಗ್ಯ ಸಚಿವರೇ ಒಮ್ಮೆ ಈ ವಿಚಾರವನ್ನು ಗಂಭೀರವಾಗಿ ಗಮನಿಸಬೇಕು.

Exit mobile version