ರಾಯ್‌ಪುರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS Baithak) ನೇತೃತ್ವದಲ್ಲಿ ಸೆಪ್ಟೆಂಬರ್ ೧೦ರಿಂದ ಇಲ್ಲಿನ ಜೈನಾಮ್ ಮಾನಸ ಭವನದಲ್ಲಿ ಮೂರು ದಿನಗಳ ಅಖಿಲ ಭಾರತ್ ಸಮನ್ವಯ್ ಬೈಠಕ್ ನಡೆಯಲಿದೆ. ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಅವರು ಶುಕ್ರವಾರ ಬೈಠಕ್ ಕುರಿತು ಮಾಹಿತಿ ನೀಡಿದ್ದು, ವರ್ಷಕ್ಕೆ ಒಂದು ಬಾರಿ ನಡೆಯುವ ಈ ಸಭೆಯಲ್ಲಿ ಸಮಾಜದ ನಾನಾ ಕ್ಷೇತ್ರಗಳಲ್ಲಿ ಸೇವಾ ಕಾರ್ಯದಲ್ಲಿ ತೊಡಗಿರುವ ಸಂಘಟನೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
“ಸರ ಸಂಘ ಚಾಲಕ ಡಾ. ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ, ಕೃಷ್ಣ ಗೋಪಾಲ್, ಮನ್‌ಮೋಹನ್ ವೈದ್ಯ, ಅರುಣ್ ಕುಮಾರ್, ಮುಕುಂದ್, ರಾಮ್‌ದತ್ ಚಕ್ರಧರ್ ಸೇರಿದಂತೆ ಎಲ್ಲ ಸಹ ಸರಕಾರ್ಯವಾಹರು ಈ ಬೈಠಕ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ ೧೨ಕ್ಕೆ ಮುಕ್ತಾಯವಾಗುವ ಸಭೆಯಲ್ಲಿ ಸಂಘದ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ,” ಎಂದು ಅವರು ಮಾಹಿತಿ ನೀಡಿದರು.
ವಿದ್ಯಾ ಭಾರತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಕ್ಷಮ್, ವನವಾಸಿ ಕಲ್ಯಾಣ್ ಆಶ್ರಮ್, ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್, ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಜನತಾ ಪಾರ್ಟಿ, ಅಖಿಲ ಭಾರತೀಯ ಮಜ್ದೂರ್ ಸಂಘ ಸೇರಿದಂತೆ ರಾಷ್ಟ್ರೀಯತೆ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸುವ ೩೬ ಸಂಸ್ಥೆಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿವೆ.
“”ಬೈಠಕ್‌ನಲ್ಲಿ ಪಾಲ್ಗೊಳ್ಳಲಿರುವ ಸಂಘಟನೆಗಳು ತಮ್ಮ ತಮ್ಮ ಕಾರ್ಯ ಚಟುವಟಿಕೆಗಳ ವಿವರಗಳನ್ನು ಹಂಚಿಕೊಳ್ಳಲಿವೆ. ಅದೇ ರೀತಿ ಪರಿಸರ, ಕುಟುಂಬ ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿವೆ,” ಎಂದು ಅಂಬೇಕರ್ ಅವರು ವಿವರಿಸಿದರು.
“ಗೋಸೇವೆ, ಪರಿಸರ, ಶಿಕ್ಷಣ ಹಾಗೂ ಸೈದ್ಧಾಂತಿಕ ಕ್ಷೇತ್ರ, ಆರ್ಥಿಕ ಜಗತ್ತು, ಸೇವಾ ಕಾರ್ಯ, ಸಾಮಾಜಿಕ ಹಾಗೂ ರಾಷ್ಟ್ರೀಯ ಭದ್ರತಾ ವಿಷಯಗಳನ್ನು ಬೈಠಕ್‌ನಲ್ಲಿ ಚರ್ಚಿಸಲಾಗುವುದು,” ಎಂದು ಸುನೀಲ್ ಅಂಬೇಕರ್ ಅವರು ತಿಳಿಸಿದರು.
ಭಾಗವತ್, ಹೊಸಬಾಳೆ ಚರ್ಚೆ
ಬೈಠಕ್ ಹಿನ್ನೆಲೆಯಲ್ಲಿ ಸರ ಸಂಘ ಚಾಲಕ ಡಾ. ಮೋಹನ್ ಭಾಗವತ್, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಕಳೆದ ಮಂಗಳವಾರವೇ ರಾಯ್‌ಪುರಕ್ಕೆ ತೆರಳಿದ್ದಾರೆ. ಅವರಲ್ಲದೆ ಸಂಘದ ಇನ್ನಿತರ ಪದಾಧಿಕಾರಿಗಳೂ ಅಲ್ಲಿಗೆ ತೆರಳಿದ್ದು, ಪೂರ್ವ ಸಿದ್ಥತೆಯಲ್ಲಿ ತೊಡಗಿದ್ದಾರೆ. ಇದೇ ಮೊದಲ ಬಾರಿಗೆ ಅಖಿಲ ಭಾರತೀಯ ಸಮನ್ವಯ ಬೈಠಕ್ ಚತ್ತೀಸ್‌ಗಢದಲ್ಲಿ ನಡೆಯುತ್ತಿದೆ.
ಇದನ್ನೂ ಓದಿ | ಆರ್‌ಎಸ್‌ಎಸ್ ಮುಖಂಡರನ್ನು ಮುಗಿಸಲು ಸಂಚು ರೂಪಿಸಿದ್ದ ಉಗ್ರ