Site icon Vistara News

Ambegalu Short Film: ಕಿರುಚಿತ್ರ ಸ್ಪರ್ಧೆಯಲ್ಲಿ ಮಲೆನಾಡಿನ ಕಥೆಗಳು ಪ್ರಥಮ, ಬಿಡುಗಡೆಗೆ ದ್ವಿತೀಯ ಪ್ರಶಸ್ತಿ

Ambegalu Short Film Prize Distribution shivamogga

#image_title

ಶಿವಮೊಗ್ಗ: ಶಿವಮೊಗ್ಗ ಬೆಳ್ಳಿ ಮಂಡಲ, ಯುಗ ಧರ್ಮ ಜಾನಪದ ಸಮಿತಿ ಹಾಗೂ ಸಿನಿಮೊಗೆ ಚಿತ್ರ ಸಮಾಜಗಳ ಆಶ್ರಯದಲ್ಲಿ ಆಯೋಜಿಸಿದ್ದ ಅಂಬೆಗಾಲು-5: ಕಿರುಚಿತ್ರ ಸ್ಪರ್ಧೆಯ (Ambegalu Short Film) ಬಹುಮಾನ ವಿತರಣಾ ಸಮಾರಂಭ ಭಾನುವಾರ (ಫೆ.೧೨) ಸುವರ್ಣ ಸಂಸ್ಕೃತಿ ಭವನದಲ್ಲಿ ಜರುಗಿತು.

ಪ್ರಶಸ್ತಿ ಪುರಸ್ಕೃತ ಕಿರುಚಿತ್ರಗಳು

ಪ್ರಥಮ ಪ್ರಶಸ್ತಿ: ಎಚ್.ಜಿ. ಸಂತೋಷ್ ನಿರ್ದೇಶನದ ʻಮಲೆನಾಡಿನ ಕಥೆಗಳುʼ (೨೫,೦೦೦ ರೂ. ಬಹುಮಾನ)
ದ್ವಿತೀಯ: ಡಿ.ಎಂ. ರಾಜಕುಮಾರ್ ಅವರ ʻಬಿಡುಗಡೆʼ (೧೫,೦೦೦ ರೂ. ಬಹುಮಾನ)
ತೃತೀಯ: ಜನಾರ್ಧನ್ ಶೆಟ್ಟಿ ಅವರ ʻಮಾತಾಡಿʼ ಕಿರುಚಿತ್ರ (೧೦,೦೦೦ ರೂ. ಬಹುಮಾನ)
ವಿಶೇಷ ಪುರಸ್ಕಾರ: ಸಂತೋಷ್ ಶೆಟ್ಟಿ ಅವರ ಕಜನಿ

ಕಿರುಚಿತ್ರಗಳ ಪ್ರದರ್ಶನ: 8 ರಿಂದ 10 ನಿಮಿಷಗಳ ಸ್ಪರ್ಧೆಯಲ್ಲಿ ಪ್ರಾಜೆಕ್ಟ್ ವಿಜನ್, ಮಾಯಾ ಬಜಾರ್, ಆಲ್ಫಾ, ಆಂತರ್ಯ, ಅಂದರಿಕಿ ನಮಸ್ಕಾರಂ, ವೇದ-ದ ರಿಯಲ್ ವಾರಿಯರ್, ದ ಟೈನ್, ದ ಗಿಫ್ಟ್, ಬಿಡುಗಡೆ, ಕಜನಿ, ದೇವರೆಲ್ಲಿದ್ದಾನೆ, ಮಾತಾಡಿ, ವಜ್ರ್ಯಂ, ಮಲೆನಾಡಿನ ಕಥೆಗಳು ಕಿರು ಚಿತ್ರಗಳು ಪ್ರದರ್ಶನಗೊಂಡವು.

ಇತರ ಪ್ರಶಸ್ತಿಗಳು
ಶ್ರೇಷ್ಠ ನಿರ್ದೇಶನ- ಕಾರ್ತಿಕ ನಾಗಲಾಪುರ (ಆಂತರ್ಯ)
ಶ್ರೇಷ್ಠ ಸಂಗೀತ- ಗೌತಮ್ ವರುಣ್ (ಆಲ್ಫಾ)
ಶ್ರೇಷ್ಠ ಸಂಕಲನ- ಮಲೆನಾಡಿನ ಕಥೆಗಳು
ಶ್ರೇಷ್ಠ ಛಾಯಾಗ್ರಹಣ-ಮಲೆನಾಡಿನ ಕಥೆಗಳು
ಶ್ರೇಷ್ಠ ಪೋಷಕ ನಟಿ – ವಿಭಾ (ಕಜನಿ)
ಶ್ರೇಷ್ಠ ಪೋಷಕ ನಟ-ಎಸ್.ಆರ್.ಅರವಿಂದ (ಆಲ್ಫ)
ಶ್ರೇಷ್ಠ ನಟಿ-ಪಾರ್ವತಿ (ಮಾತಾಡಿ)
ಶ್ರೇಷ್ಠ ನಟ-ಮಾಲ್ಗುಂಡಿ ದಾನಂ (ಬಿಡುಗಡೆ)
ತೀರ್ಪುಗಾರರ ಮೆಚ್ಚುಗೆ ಬಹುಮಾನ-ಶಿವಮೊಗ್ಗ ರಾಮಣ್ಣ (ದೇವರೆಲ್ಲಿದ್ದಾನೆ), ಸಿಂಧು (ದ ಗಿಫ್ಟ್), ಶಶಾಂಕ್ ನಾರಾಯಣ್ (ಕಜನಿ), ತೀರ್ಪುಗಾರರ ವಿಶೇಷ ಮೆಚ್ಚುಗೆ ಚಿತ್ರ-ಸಂತೋಷ್ ಬಪ್ಪು (ವಜ್ರ್ಯಂ),

ಸಿನಿಮಾ ಸ್ಕೂಲ್‌ ಆಗಬೇಕು
ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಪ್ರಕಾಶ್ ʻʻಕರ್ನಾಟಕದಲ್ಲಿ ಸಿನಿಮಾ ಸ್ಕೂಲ್ ಆಗಬೇಕುʼʼ ಎಂಬ ಆಶಯ ವ್ಯಕ್ತಪಡಿಸಿದರು. ʼಪೂನಾದಲ್ಲಿ ಸಿನಿಮಾ ಸ್ಕೂಲ್ ಇದೆ. ಅಲ್ಲಿ ಬರವಣಿಗೆ ಪ್ರತ್ಯೇಕ, ನಿರ್ದೇಶನ ಪ್ರತ್ಯೇಕ…ಹೀಗೆ ಸಿನಿಮಾದ ಪ್ರತಿಯೊಂದು ವಿಭಾಗವನ್ನೂ ಪ್ರತ್ಯೇಕವಾಗಿ ಕಲಿಸುತ್ತಾರೆ. ಅಲ್ಲಿಂದ ಬಂದ ಹುಡುಗರು ಮಾಡುವ ಸಿನಿಮಾಗಳು ಅಮೆಜಾನ್, ನೆಟ್ ಫ್ಲಿಕ್ಸ್ ಹೀಗೆ ಒಟಿಟಿ ವೇದಿಕೆಯಲ್ಲಿ ಸುಲಭವಾಗಿ ಸ್ಥಾನ ಗಿಟ್ಟಿಸುತ್ತವೆʼಎಂದರು.

ʼಆದರೆ ಕನ್ನಡದ ಸಿನಿಮಾಗಳು ಡಿಜಿಟಲ್ ವೇದಿಕೆಯಲ್ಲಿ ರಾರಾಜಿಸುವಲ್ಲಿ ವಿಫಲ ಆಗುತ್ತಿವೆ. ಅಲ್ಲಿ ಅವಕಾಶವನ್ನೇ ಪಡೆಯಲು ಆಗುತ್ತಿಲ್ಲ. ಇಲ್ಲಿ ಗುಣಮಟ್ಟದ ಕೊರತೆ ಇದೆ. ಅದರಲ್ಲಿ ಸುಧಾರಣೆ ತಂದುಕೊಳ್ಳಬೇಕು. ಡಿಜಿಟಲ್ ವೇದಿಕೆಯಲ್ಲಿ ಕನ್ನಡ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಕೂಡ ಕಡಿಮೆ ಇದೆ. ಚಿತ್ರದಲ್ಲಿ ಗುಣಮಟ್ಟ ಇದ್ದರೆ ವೀಕ್ಷಕರು ಸಿಗುತ್ತಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿಯಾದರೂ ಒಂದು ಸಿನಿಮಾ ಸ್ಕೂಲ್ ಮಾಡಬೇಕು. ವಾರದಲ್ಲಿ ಎರಡು ದಿನ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಬಹುದುʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: WPL Auction : ಆರ್​ಸಿಬಿ ಬಳಗ ಸೇರಿದ ಸ್ಟಾರ್​ ಕ್ರಿಕೆಟರ್​ ಸ್ಮೃತಿ ಮಂಧಾನಾ, ಅವರು ಪಡೆದ ಮೊತ್ತವೆಷ್ಟು ಗೊತ್ತೇ?

ʼಶಿವಮೊಗ್ಗದಲ್ಲಿ ಗಿಡ ಇದೆ, ನೀರು ಹಾಕುವವರೂ ಇದ್ದಾರೆ. ಹಾಗಾಗಿ ಒಳ್ಳೆಯ ಹೂವು, ಹಣ್ಣು ನಿರೀಕ್ಷೆ ಮಾಡಬಹುದು. ಅದಕ್ಕೆ ಸಿನಿಮಾ ಸ್ಕೂಲ್ ನೆರವಾಗುತ್ತದೆ. ರಾಜ್ಯದಲ್ಲಿ ಎಲ್ಲೂ ಸಿಗದ ಅವಕಾಶಗಳು ಶಿವಮೊಗ್ಗದಲ್ಲಿ ಲಭ್ಯವಿದೆ. ಅಂಬೆಗಾಲು ನಿಜಕ್ಕೂ ಒಂದು ಪರಿಣಾಮಕಾರಿಯಾದ ವೇದಿಕೆ. ಇದನ್ನು ಸಮರ್ಥವಾಗಿ ಬಳಸಿಕೊಂಡು, ಗಂಭೀರವಾದ ಚಲನಚಿತ್ರಗಳ ನಿರ್ಮಾಣಗಳ ಮೂಲಕ ಸಾರ್ಥಕ ಪಡಿಸಿಕೊಳ್ಳಿʼ ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ಕನ್ನಡ ಚಿತ್ರಗಳಲ್ಲಿ ಬರವಣಿಗೆ ಅಷ್ಟೊಂದು ಶಕ್ತಿದಾಯಕ ಆಗಿಲ್ಲ. ಬರವಣಿಗೆ ಇಲ್ಲದೇ ಹೋದರೆ ಸಿನಿಮಾ ಸೋಲುತ್ತದೆ. ಕಥೆಗಳನ್ನು ಬಾಯಲ್ಲಿ ಹೇಳುವುದು ಬೇರೆ. ಸಿನಿಮಾದಲ್ಲಿ ಚಿತ್ರದ ಮೂಲಕವೇ ಕಥೆ ಹೇಳಬೇಕು. ಆರಂಭ ಹೇಗೆ, ಕೊನೆ ಹೇಗೆ ಎಂಬುದು ಗೊತ್ತಿರಬೇಕು. ಕಥೆ ಏನು ಹೇಳುತ್ತದೆ ಎಂಬುದೂ ನಮಗೆ ಅರಿವಿರಬೇಕು. ಸಿನಿಮಾ ಪ್ರೇಕ್ಷಕನ ಎದುರು ಎರಡರಿಂದ ಮೂರು ಗಂಟೆ ಇದ್ದರೂ, ಅದರ ಹಿಂದೆ ಅಗಾಧವಾದ ಕೆಲಸ ಇರುತ್ತದೆʼಎಂದರು.

ಇದನ್ನೂ ಓದಿ: Assembly Session: ಕಾಂಗ್ರೆಸ್‌ ಕಡೆ ಹೊರಟಿರುವ ಶಿವಲಿಂಗೇಗೌಡರಿಗೆ ಬಿಜೆಪಿ ಆಹ್ವಾನ !: ಸದನದಲ್ಲಿ ಸಿ.ಟಿ. ರವಿ ಸ್ವಾರಸ್ಯಕರ ಮಾತು

ವಿಧಾನ ಪರಿಷತ್ ಸದಸ್ಯ ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆ ಸಂಚಾಲಕ ಡಿ.ಎಸ್. ಅರುಣ್ ಪ್ರಾಸ್ತಾವಿಕ ಮಾತನಾಡಿ, ʻಸಿನಿಮಾಗಾಗಿ ಕಷ್ಟ ಪಡುತ್ತಿರುವ ಸಾವಿರಾರು ಯುವಕರಿದ್ದಾರೆ. ಆದರೆ ವರ್ಷದಲ್ಲಿ ಗೆಲ್ಲುವುದು ನಾಲ್ಕು – ಐದು ಚಿತ್ರ ಮಾತ್ರ. ಯುವಕರಿಗೆ ಮಾರ್ಗದರ್ಶನ, ಪ್ರೋತ್ಸಾಹ ನೀಡಲು ಈ ಸ್ಪರ್ಧೆ ನಡೆಸಲಾಗುತ್ತಿದೆʼ ಎಂದು ಹೇಳಿದರು.

ಶಿವಮೊಗ್ಗ ಬೆಳ್ಳಿ ಮಂಡಲದ ವೈದ್ಯ, ನಿರ್ಮಾಪಕ ಡಿ. ಮಂಜುನಾಥ್, ಡಾ.ರಜನಿ ಪೈ, ಡಾ. ಶುಭ್ರತಾ, ಒಗ್ಗರಣೆ ಡಬ್ಬಿ ಕೃಷ್ಣಪ್ಪ, ಡಾ. ಧನಂಜಯ ಸರ್ಜಿ, ಜಿ. ವಿಜಯಕುಮಾರ್, ಜಿ. ಅನಂತ, ಡಾ. ನಾಗರಾಜ ಪರಿಸರ, ಕಿರಣ್ ಇನ್ನಿತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪವರ್‌ ಸ್ಟಾರ್ ಪುನೀತ್ ರಾಜ್‌ ಕುಮಾರ್, ಬೆಳ್ಳಿ ಮಂಡಲದ ಹಿರಿಯ ಸದಸ್ಯ ಸಿ. ಎನ್. ಶ್ರೀನಿವಾಸ ಅವರಿಗೆ ಪುಷ್ಟ ನಮನ ಸಲ್ಲಿಸಲಾಯಿತು.

ಇದನ್ನೂ ಓದಿ: Panchamasali Reservation : ಪಂಚಮಸಾಲಿ ಹೋರಾಟ ಮತ್ತೆ ತೀವ್ರ; ಅಧಿವೇಶನ ಮುಗಿಯುವ ಮುನ್ನ ಮೀಸಲು ಘೋಷಣೆಗೆ ಆಗ್ರಹ

ವರ್ಣರಂಜಿತ ಸಮಾರಂಭದಲ್ಲಿ ಮಯೂರ ಮೋಶನ್ಸ್ ಪಿಕ್ಚರ್ಸ್ ವತಿಯಿಂದ ಡಿ.ಮಂಜುನಾಥ್ ನಿರ್ಮಿಸಿದ ಅನ್ಲಾಕ್ ರಾಘವ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ದೀಪಕ್ ಮಧುವನ ಹಳ್ಳಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ. ಸತ್ಯ ಪ್ರಕಾಶ್, ನಿರ್ಮಾಪಕ ಡಿ. ಮಂಜುನಾಥ್, ನಾಯಕ ನಟ ಮಿಲಿಂದ್, ಕಲಾವಿದ ಧರ್ಮಣ್ಣ ಕಡೂರು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಚಿತ್ರ ತಂಡದ ಶರಣ್ಯ, ಸುನಿಲ್ ಮಾನೆ, ಪ್ರಶಾಂತ್ ಬಾಗೂರು, ನರಹರಿ, ಯೋಗೀಶ್ ಕೆ. ಆರ್. ಉಪಸ್ಥಿತರಿದ್ದರು.

ಇದನ್ನೂ ಓದಿ: LTTE chief Prabhakaran: ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಸತ್ತಿಲ್ಲ, ಬದುಕಿದ್ದಾನೆ! ನೆಡುಮಾರನ್ ಹೇಳಿಕೆ

Exit mobile version