ಬೆಂಗಳೂರು: ರಾಜ್ಯಾದ್ಯಂತ ಸೆಪ್ಟೆಂಬರ್ 24ರ ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿದೆ. ಜಿವಿಕೆ ಏಜೆನ್ಸಿ ನಡೆಸುತ್ತಿರುವ 108 ಸಹಾಯವಾಣಿಗೆ, ಆರೋಗ್ಯ ಎಮರ್ಜನ್ಸಿ ಎಂದು ಯಾರೇ ಕರೆಮಾಡಿದರೂ ಅದನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಅನೇಕ ರೋಗಿಗಳು ಪರದಾಡುವಂತಾಗಿದೆ. ಆ್ಯಂಬುಲೆನ್ಸ್ಗಳು ಸಿಗದೆ ಕಷ್ಟಪಡುವಂತಾಗಿದೆ.
ಹೀಗೆ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳ್ಳಲು ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ. 108 ತುರ್ತು ಸೇವೆಗೆ ದಿನವೊಂದಕ್ಕೆ ಏನಿಲ್ಲವೆಂದರೂ ರಾಜ್ಯದೆಲ್ಲೆಡೆಯಿಂದ 20 ಸಾವಿರ ಕರೆಗಳು ಬರುತ್ತದೆ. ಆದರೆ ನಿನ್ನೆ ರಾತ್ರಿಯಿಂದ 108ಕ್ಕೆ ಕರೆ ಮಾಡಿದರೆ ಫೋನ್ ಸಂಪರ್ಕ ಸಿಗುತ್ತಿಲ್ಲ. ಒಮ್ಮೆ ರಿಂಗ್ ಆದರೂ ಅತ್ತಲಿಂದ ಉತ್ತರವೂ ಬರುವುದಿಲ್ಲ ಎಂದು ಹೇಳಲಾಗಿದೆ. ಇಷ್ಟಾದರೂ ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ ಗಮನ ಹರಿಸಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುರ್ತು ಸಂದರ್ಭ ಇರುವವರು ಹಣಕೊಟ್ಟು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾರೆ.
ಇದನ್ನೂ ಓದಿ: Viral Video | ಅಪಘಾತದಿಂದ ಗಾಯಗೊಂಡು ನರಳುತ್ತಿದ್ದ ವ್ಯಕ್ತಿ; ಆ್ಯಂಬುಲೆನ್ಸ್ ಕೆಲಸ ಮಾಡಿದ ಬುಲ್ಡೋಜರ್ !