Site icon Vistara News

Amrit Mahotsav | ಚಿಕ್ಕಪೇಟೆಯಿಂದ ಅಶೋಕ್‌ ಪಿಲ್ಲರ್‌ವರೆಗೆ ವಾಕಥಾನ್: ಶಾಸಕ ಉದಯ್ ಗರುಡಾಚಾರ್ ಸಾರಥ್ಯ

Amrit Mahotsav

ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75ನೇ ವಸಂತಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಈ ವರ್ಷವನ್ನು ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ (Amrit Mahotsav) ಎಂದು ಆಚರಿಸಲಾಗುತ್ತಿದೆ. ಇದರ ಬೆನ್ನಲ್ಲೇ ನಗರದ ಚಿಕ್ಕಪೇಟೆ ಶಾಸಕರ ಕಚೇರಿಯಿಂದ ಅಶೋಕ ಪಿಲ್ಲರ್‌ವರೆಗೂ ವಾಕಥಾನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನೂ ಓದಿ | Amrit Mahotsav | ಸ್ವಾತಂತ್ರ್ಯ ಅಮೃತ ಮಹೋತ್ಸವ: ಐತಿಹಾಸಿಕ ಹಂಪಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ

ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ತಿರಂಗಾ ಬಾವುಟವನ್ನು ಹಿಡಿದು ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು. ಮಳೆಯನ್ನು ಲೆಕ್ಕಸದೇ ಜನರು ವಾಕಥಾನ್‌ನಲ್ಲಿ ಪಾಲ್ಗೊಳ್ಳಲು ಬೆಳಗ್ಗೆಯಿಂದಲೂ ಕಾತುರದಿಂದ ಶಾಸಕರ ಕಚೇರಿಯೆದುರು ಜಮಾವಣೆಗೊಂಡಿದ್ದರು. ಸುಮಾರು 600ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಈ ವಾಕಥಾನ್‌ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎನ್ನಲಾಗಿದೆ.

Exit mobile version