ಆನೇಕಲ್: ಡಿ ಗ್ರೂಪ್ ನೌಕರರೊಬ್ಬರು ಪುರಸಭೆಯಲ್ಲೇ ವಿಷ ಕುಡಿದ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಆನೇಕಲ್ (Anekal News ) ತಾಲೂಕಿನ ಚಂದಾಪುರ ಪುರಸಭೆಯಲ್ಲಿ ಡಿ ಗ್ರೂಪ್ ನೌಕರ ವೇಣು ಎಂಬಾತ ವಿಷ ಕುಡಿದಿದ್ದಾರೆ.
ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ವೇಣು ಶನಿವಾರ ಚಂದಾಪುರ ಪುರಸಭೆಗೆ ವಿಷದ ಬಾಟಲಿಯೊಂದಿಗೆ ಬಂದಿದ್ದಾರೆ. ಬಳಿಕ ಪುರಸಭಾ ಕಚೇರಿಯಲ್ಲಿ ವಿಷ ಸೇವಿಸಿದ್ದಾರೆ. ವಿಷ ಸೇವಿಸುತ್ತಿರುವ ದೃಶ್ಯ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ವಿಷ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದ ಸಿಬ್ಬಂದಿ ವೇಣುವನ್ನು ಕೂಡಲೇ ಅಲ್ಲಿದ್ದ ಸಿಬ್ಬಂದಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚಂದಾಪುರದ ಬೆಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ