ಬೆಂಗಳೂರು: ರಾಜ್ಯಾದ್ಯಂತ ನಾಳೆ (ಜು.10) ಅಂಗನವಾಡಿ ಕಾರ್ಯಕರ್ತೆಯರು (Anganawadi workers) ಬೀದಿಗಿಳಿದು ಪ್ರತಿಭಟಿಸಲಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡಿದ್ದ ಮೊಬೈಲ್‌ಗಳನ್ನು ವಾಪಸ್ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಿದ್ದಾರೆ.
2018ರಲ್ಲಿ 63 ಸಾವಿರ ಮೊಬೈಲ್‌ಗಳನ್ನು ಕಾರ್ಯಕರ್ತೆಯರಿಗೆ ಕೊಡಲಾಗಿತ್ತು. ಪೊಷಣ್ ಅಭಿಯಾನದ ಪ್ರತಿದಿನದ ಚಟುವಟಿಕೆಗಳನ್ನು ಆಪ್ ಡೇಟ್ ಮಾಡಲು ಮೊಬೈಲ್ ಕೊಡಲಾಗಿತ್ತು. ಆದರೆ ಈಗ ಮೊಬೈಲ್‌ನಲ್ಲಿ ಸ್ಟೋರೆಜ್ ಸಮಸ್ಯೆ, ನೆಟವರ್ಕ್ ಸಮಸ್ಯೆ ಆಗುತ್ತಿದೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಮೊಬೈಲ್ ಹಿಂತಿರುಗಿಸಿ ಪ್ರತಿಭಟಿಸಲು ನಿರ್ಧರಿಸಿದ್ದಾಗಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ಮಾಹಿತಿ ನೀಡಿದ್ದಾರೆ.
ಹುಸಿಗೊಳಿಸಿದ ಬಜೆಟ್
ಸಿಎಂ ಸಿದ್ದರಾಮಯ್ಯ ಸರ್ಕಾರದ ಮೊದಲ ಬಜೆಟ್‌ನಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿಯ ಪ್ರಥಮ ಭರವಸೆಯನ್ನು ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಕುರಿತಂತೆ ಈಡೇರಿಸುವರೆಂದು ನಿರೀಕ್ಷೆಯಲ್ಲಿ ಇದ್ದರು. ಆದರೆ ಅದು ಹುಸಿಯಾಗಿದೆ.
ಇದನ್ನೂ ಓದಿ: Weather report : ರಾಜ್ಯದಲ್ಲಿ ಇನ್ನೆರಡು ದಿನ ಮುಂಗಾರು ಮಳೆಯ ಅಭಿಷೇಕ
ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಆಶಾ ಕಾರ್ಯಕರ್ತೆಯರಿಗೆ ಇವರ ದುಡಿತಕ್ಕೆ ನೀಡುವ 5000 ದಿಂದ 8000 ಗೌರವಧನ ಹೆಚ್ಚಿಗೆ ಮಾಡುವ ಕುರಿತು ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು. ಹಾಗೆಯೇ ಆಶಾ, ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿಯನ್ನು ನೀಡುವುದಾಗಿ ತಿಳಿಸಿದ್ದರು. ಆದರೆ ಮನೆ ಯಜಮಾನಿ ಮನೆಯಲ್ಲಿ ಬೇರೆಯವರು ಇದ್ದಾಗ ಆಶಾ ಕಾರ್ಯಕರ್ತೆಯರು ಈ ಗೃಹಲಕ್ಷ್ಮಿಯ ಗ್ಯಾರಂಟಿಯನ್ನು ಪಡೆಯಬಹುದೇ ಎನ್ನುವ ಗೊಂದಲವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಯಜಮಾನಿ ಮತ್ತೊಬ್ಬರಿದ್ದಾಗ್ಯೂ ಗೃಹಲಕ್ಷ್ಮಿ ಗ್ಯಾರಂಟಿಯನ್ನು ರಾಜ್ಯದ ಎಲ್ಲಾ ಕಾರ್ಯಕರ್ತೆಯರಿಗೆ ಖಾತ್ರಿಪಡಿಸಲು ಆಗ್ರಹಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ