ಬೆಂಗಳೂರು: ಸರ್ಕಾರಿ ಶಿಕ್ಷಕರ ಸ್ಥಾನಮಾನ ನೀಡಿ, ಸೇವಾ ಭದ್ರತೆ ಒದಗಿಸಬೇಕು ಎಂದು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಶನಿವಾರ ಸಮಾಪ್ತಿಗೊಳಿಸಿದ್ದಾರೆ.
ಬೇಡಿಕೆಗೆ ಸಂಬಂಧಿಸಿ ಸರ್ಕಾರದ ಕಡೆಯಿಂದ ಭರವಸೆ ಲಭಿಸಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ. ಅವರ ಬೇಡಿಕೆಗಳು ಇಂತಿವೆ-
- ಕನಿಷ್ಠ ವೇತನ
- ಮಿನಿ ಅಂಗನವಾಡಿ ಮೇಲದರ್ಜೆಗೆ ಏರಿಸಿವದು
- ಗ್ರಾಚ್ಯುಯಿಟಿ ಸೌಲಭ್ಯ.
- ಟಿಎ,ಡಿಎ ಸೌಲಭ್ಯ
ಸಚಿವ ಅಶ್ವಥ್ ನಾರಾಯಣ ಅವರು ಸಿಎಂ ಪರವಾಗಿ ಮನವಿ ಸ್ವೀಕರಿಸಿದರು. ಸಿಎಂ ಜೊತೆ ಮಾತನಾಡಿ ಬೇಡಿಕೆ ಈಡೇರಿಸಲು ಯತ್ನಿಸುವುದಾಗಿ ಸಚಿವರು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಅಂತ್ಯವಾಯಿತು.