Site icon Vistara News

ಸರ್ಕಾರಿ ಅಧಿಕಾರಿಗಳ ಮೈಗಳ್ಳತನಕ್ಕೆ ಬೇಸತ್ತ ಜನಪ್ರತಿನಿಧಿ; ಖಾಲಿ ಚೇರ್‌ಗೆ ಸನ್ಮಾನ ಮಾಡಿ ಆಕ್ರೋಶ

ಶಿವಮೊಗ್ಗ: ಅಧಿಕಾರಿಗಳ ಕಾರ್ಯವೈಖರಿಯಿಂದ ಬೇಸತ್ತ ಜನಪ್ರತಿನಿಧಿಯೊಬ್ಬರು ಖಾಲಿ ಚೇರ್‌ಗೆ ಸನ್ಮಾನ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.

ಸೊರಬ ಪುರಸಭೆಯ ವಿರೋಧ ಪಕ್ಷದ ನಾಯಕ ಪ್ರಸನ್ನ ಎಂಬುವವರು ಸೊರಬ ತಹಸೀಲ್ದಾರ್‌ ಕಚೇರಿ ಮುಂಭಾಗ ಖಾಲಿ ಚೇರ್‌ ಇಟ್ಟು, ಅದಕ್ಕೆ ಶಾಲು ಹಾಗೂ ಹಾರವನ್ನು ಹಾಕಿ ಸನ್ಮಾನ ಮಾಡಿದರು. ಮೂರು ವರ್ಷದಿಂದ ತಮ್ಮ ಕೆಲಸವನ್ನು ಮಾಡಿ ಕೊಡದೇ ಇರುವ ಅಧಿಕಾರಿಗಳ ವಿರುದ್ಧ ಈ ರೀತಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಪ್ರಸನ್ನ ಅವರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಯನ್ನು ಸೊರಬದ ತಹಸೀಲ್ದಾರ್‌ ಕಚೇರಿಯ ಸಿಬ್ಬಂದಿ ಕಳೆದು ಹಾಕಿದ್ದಾರೆ. ನಂತರ ಇದನ್ನು ಮಿಸ್ಸಿಂಗ್ ಫೈಲ್ ಎಂದು ಹೇಳಿದ್ದಾರೆ. ಹೊಸ ಫೈಲ್ ರೆಡಿ ಮಾಡಲು ಜಿಲ್ಲಾಧಿಕಾರಿ ಕಚೇರಿಯಿಂದ, ಉಪ ವಿಭಾಗಧಿಕಾರಿ ಕಚೇರಿಗೆ, ಅಲ್ಲಿಂದ ತಹಸೀಲ್ದಾರ್‌ ಕಚೇರಿ ಹೀಗೆ ಎಲ್ಲ ಕಡೆಯಿಂದ ಬಂದು ದಾಖಲೆ ರೆಡಿ ಆಗಬೇಕಿದೆ. ಈ ರೀತಿ ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳು ದಾಖಲೆ ತಯಾರು ಮಾಡಲು ಅಲೆದಾಡಿಸುತ್ತಿದ್ದಾರೆ. ಈ ಮೂಲಕ ಮೈಗಳ್ಳತನವನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರಸನ್ನ ಅವರು ವಿನೂತನವಾಗಿ ಪ್ರತಿಭಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಸರ್ಕಾರಿ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕಿದೆ ಎಂದು ಪ್ರಸನ್ನ ಆಗ್ರಹಿಸಿದ್ದಾರೆ.

ಇದನ್ನೂ ಓದಿ | Maths problem! | ಗಣಿತ ಲೆಕ್ಕ ಬಿಡಿಸುವ ಗಲಾಟೆ: ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಡಿದಾಡಿಕೊಂಡ ಅಧಿಕಾರಿಗಳು

Exit mobile version