Site icon Vistara News

Shivamogga News: ಸೊರಬ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅನಿತಾ ಮಧು ಬಂಗಾರಪ್ಪ

Anita Madhu Bangarappa was felicitated by Block Mahila Congress at soraba

ಸೊರಬ: ಕ್ಷೇತ್ರದಲ್ಲಿ ಮಹಿಳಾ (women) ಮತ್ತು ಯುವ ಮತದಾರರು (youth voters) ಹೆಚ್ಚಿನ ಸಂಖ್ಯೆಯಲ್ಲಿ ಒಲವು ತೋರಿದ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರು ಅತ್ಯಧಿಕ ಮತಗಳ (Votes) ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ತಿಳಿಸಿದರು.

ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ಬುಧವಾರ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Season Fashion: ಸೆಲೆಬ್ರೆಟಿ ಲುಕ್‌ಗಾಗಿ ಹೈ ಫ್ಯಾಷನ್‌ ಲೋಕಕ್ಕೆ ಬಂತು ಒನ್‌ ಶೋಲ್ಡರ್‌ ಡ್ರೆಸ್‌!

ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನತೆ ಕೊಟ್ಟ ಮಾತಿನಂತೆ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿದ್ದಾರೆ, ಕ್ಷೇತ್ರದ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಪ್ರಚಾರದ ವೇಳೆ ಜನತೆ ಅನೇಕ ಸಮಸ್ಯೆಗಳನ್ನು ಸಹ ತಮ್ಮ ಗಮನಕ್ಕೆ ತಂದಿದ್ದರು. ಅವುಗಳನ್ನು ಪತಿ ಮಧು ಬಂಗಾರಪ್ಪ ಅವರಿಗೆ ತಿಳಿಸಿ, ಹಂತ-ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲು ಕೇಳಿಕೊಳ್ಳುತ್ತೇನೆ ಎಂದರು.

ಪಕ್ಷವು ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಜವಾಬ್ದಾರಿಯನ್ನು ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯ ಮಕ್ಕಳಿಗೆ ದೊರೆಯಬೇಕು ಎಂಬ ಅಭಿಲಾಷೆಯನ್ನು ಅವರು ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಯು ಸೇರಿದಂತೆ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.

ಇದನ್ನೂ ಓದಿ: Congress Guarantee: ಫ್ರೀ ಕರೆಂಟ್‌ ನನಗೂ ಸಿಗುತ್ತಾ? ಅರ್ಜಿ ಸಲ್ಲಿಕೆ ಹೇಗೆ? ಬಾಡಿಗೆದಾರರಿಗೂ ಇದೆಯೆ?: ನಿಮ್ಮ 26 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಸರ್ಕಾರವು ಸಹ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಕಾರ್ಡ್‌ನಲ್ಲಿನ ಅಂಶಗಳನ್ನು ಜಾರಿಗೆ ತರುತ್ತಿದೆ. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದು ಮತ್ತು ಆನವಟ್ಟಿ-ಸೊರಬ ಭಾಗದ ಯುವಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉತ್ಸಾಹ ಹೊಂದಿದ್ದಾರೆ. ತಾವು ಸಹ ಮಧು ಬಂಗಾರಪ್ಪ ಅವರ ಜತೆಗಿದ್ದು, ಕ್ಷೇತ್ರದ ಜನತೆಯೊಂದಿಗೆ ಸದಾ ಇರುತ್ತೇನೆ ಮತ್ತು ಜನತೆಯ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ ಮಾತನಾಡಿ, ಕ್ಷೇತ್ರದ ಮಹಿಳಾ ಮತದಾರರು ಒಗ್ಗಟ್ಟಿನಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಪ್ರಚಾರಕ್ಕೆ ಪಕ್ಷದ ಮುಖಂಡರು ಸಹಕಾರ ನೀಡಿದರು. ಮುಖ್ಯವಾಗಿ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಪುತ್ರಿಯರಾದ ಸುಜಾತಾ ತಿಲಕ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಮತ್ತು ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಅವರು ಕೈ ಜೋಡಿಸಿದ್ದು ಪಕ್ಷಕ್ಕೆ ಆನೆ ಬಲ ಬಂದಂತಾಯಿತು.

ಮಹಿಳಾ ಮತದಾರರನ್ನು ನಮ್ಮತ್ತ ಸೆಳೆಯಲು ಸಹಕಾರಿಯಾಗಿದ್ದು, ಇದರ ಪರಿಣಾಮ ಮಧು ಬಂಗಾರಪ್ಪ ಅವರು ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಜನತೆ ಸಾಕಷ್ಟು ನಿರೀಕ್ಷೆಯೊಂದಿಗೆ ಮತ ಚಲಾಯಿಸಿದ್ದಾರೆ. ಜನತೆಯ ನಿರೀಕ್ಷೆಗಳನ್ನು ಕ್ರಮೇಣವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಅನಿತಾ ಮಧು ಬಂಗಾರಪ್ಪ ಅವರನ್ನು ಅಭಿನಂದಿಸಲಾಯಿತು.

ಇದನ್ನೂ ಓದಿ: Sugar Vs Salt: ಸಕ್ಕರೆ ಮತ್ತು ಉಪ್ಪು: ಕಿಡ್ನಿಗೆ ಯಾವುದು ಹಿತಕರ?

ಈ ವೇಳೆ ಜಿಪಂ ಮಾಜಿ ಸದಸ್ಯೆ ರಾಜೇಶ್ವರಿ ಗಣಪತಿ, ತಾಪಂ ಮಾಜಿ ಸದಸ್ಯೆ ಜ್ಯೋತಿ ನಾರಾಯಣಪ್ಪ, ಪುರಸಭೆ ಸದಸ್ಯೆ ಪ್ರೇಮಾ, ಚಂದ್ರಗುತ್ತಿ ಗ್ರಾಪಂ ಅಧ್ಯಕ್ಷೆ ಶಿಲ್ಪಾ ಗಿರೀಶ್ ಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಪ್ಪ, ಸದಸ್ಯರಾದ ಸರಿತಾ, ಲಕ್ಷ್ಮೀ ರವಿ, ಶ್ರೀಮತಿ ಚಂದ್ರಕಾಂತ್, ಮಹಿಳಾ ಪ್ರಮುಖರಾದ ಮಂಜುಳಾ ಕೆರಿಯಪ್ಪ, ಲಕ್ಷ್ಮಮ್ಮ, ಶಕುಂತಲಾ ಪಿ. ಶೇಟ್, ಎಂ. ಲಲಿತಾ, ಮುಖಂಡರಾದ ಜಯಶೀಲಗೌಡ, ಸುನೀಲ್‌ಗೌಡ, ಎನ್.ಜಿ. ನಾಗರಾಜ್, ಪ್ರದೀಪ್ ಬಾಡದಬೈಲು, ಎಂ.ಪಿ. ರತ್ನಾಕರ, ರೇಣುಕಾಪ್ರಸಾದ್, ಮಾರ್ಯಪ್ಪ ಬೆನ್ನೂರು, ಗಣೇಶ್ ಮರಡಿ, ಧರ್ಮಪ್ಪ ದ್ಯಾವಾಸ, ಸುಧಾಕರ ನಾಯ್ಕ್, ಪ್ರಶಾಂತ್ ನಾಯ್ಕ್ ಸೇರಿದಂತೆ ಇತರರಿದ್ದರು.

Exit mobile version