ಅಂಕೋಲಾ: (Ankola News) ತಾಲೂಕಿನ ಬೆರಡೆ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹವನ್ನು ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದ ಕಾರಣ ಮೂರು ಕಿ.ಮೀ.ವರೆಗೆ ಜೋಲಿಯಲ್ಲಿ ಕಟ್ಟಿಕೊಂಡು ಹೊತ್ತೊಯ್ದಿರುವ ಘಟನೆ ನಡೆದಿದೆ.
ಬೆರಡಿಯ ಗ್ರಾಮದ ದಾಮೋದರ ನಾಯ್ಕ (70) ಅವರು ಮಂಗಳವಾರ (ಜ.೧೦) ತಮ್ಮ ಮನೆಯ ಪಕ್ಕದ ಜಮೀನಿನಲ್ಲಿ ಬಿದ್ದ ಬೆಂಕಿಯನ್ನು ಆರಿಸಲು ಹೋಗಿ ಬೆಂಕಿ ತಗುಲಿ ಮೃತಪಟ್ಟಿದ್ದರು. ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಯಾವುದೇ ರಸ್ತೆ ಸಂಪರ್ಕ ಇಲ್ಲದೆ ಕಾಲು ದಾರಿಯಲ್ಲಿ ಶವವನ್ನು ಜೋಲಿಯಂತೆ ಕಟ್ಟಿಕೊಂಡು ಸ್ಥಳೀಯ ಯುವಕರೇ ಹೊತ್ತು 3 ಕಿ.ಮೀ. ಸಾಗಿದ್ದಾರೆ.
ಇಲ್ಲಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಅವರು ಈವರೆಗೆ ಯಾವುದೇ ಸಮಸ್ಯೆ ಪರಿಹರಿಸಿಲ್ಲ, ಇನ್ನಾದರೂ ಈ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ | Elephant attack | ರಸ್ತೆಯಲ್ಲೇ ರಾಜಾರೋಷವಾಗಿ ಸಾಗುವ ಭೀಮ: ಅವನಿಗೂ ಹೆದರಿಕೆ ಇಲ್ಲ, ಜನರಿಗೂ ಇಲ್ಲ!