Site icon Vistara News

Cooperative Society : ಪರಿವಾರ ಸಹಕಾರಿ ಸಂಸ್ಥೆಗೆ ಲಾಭವಷ್ಟೇ ಅಲ್ಲ, ಸದಸ್ಯರ ಏಳ್ಗೆಯೂ ಮುಖ್ಯ: ಶ್ರೀನಿವಾಸ್ ಹೆಬ್ಬಾರ್

Annual General Meeting of Parivar Cooperative Society in sirsi

ಶಿರಸಿ: ಪರಿವಾರ ಸಹಕಾರಿ ಸಂಘ (Parivar Cooperative Society) ಆರಂಭಿಸಲು ಲಾಭವೊಂದೇ ಉದ್ದೇಶವಲ್ಲ. ಸದಸ್ಯರ ಏಳ್ಗೆಗೆ ಸರ್ವಾಂಗೀಣ ಸಹಕಾರ ಕೊಡುವುದು ನಮ್ಮ ಪ್ರಮುಖ ಆಶಯ ಎಂದು ಪರಿವಾರ ಸಹಕಾರಿ ಸಂಘದ ಅಧ್ಯಕ್ಷ, ವಿಸ್ತಾರ ನ್ಯೂಸ್‌ ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್ ಹೇಳಿದರು.

ಸೋಮವಾರ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪರಿವಾರ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರಿ ಸಂಘದಲ್ಲಿ 876 ಸದಸ್ಯರಿದ್ದು, ದಿನದಿಂದ ದಿನಕ್ಕೆ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುತ್ತ ಮುನ್ನಡೆಯುತ್ತಿದೆ. ಸಾಲ ಪಡೆದ ಸದಸ್ಯರು ಕಟ್ ಬಾಕಿಯನ್ನು ಉಳಿಸಿಕೊಂಡಿಲ್ಲ. ಬಡ್ಡಿ, ಅಸಲು ಸಹಿತ ವಾಪಸ್ ಮಾಡುತ್ತಿದ್ದಾರೆ. ಠೇವಣಿಯೂ ಹೆಚ್ಚುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಮ್ಮ ಈ ಪರಿವಾರ ಸಹಕಾರಿ ಸಂಘವು ಆರ್‌ಬಿಐ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದೆ. ಸಂಸ್ಥೆ ಆರಂಭವಾಗಿ ಕೇವಲ ಏಳು ತಿಂಗಳಾಗಿದೆ. ಆರಂಭದಿಂದ ಈವರೆಗಿನ ದಾರಿ ಸಮಾಧಾನಕರವಿದ್ದು, ಇನ್ನು ಮುಂದೆ ಎಲ್ಲರೂ ಸೇರಿ ಇನ್ನಷ್ಟು ಬೆಳೆಸಬೇಕಿದೆ. ಇದು ಎಲ್ಲ ಪರಿವಾರಗಳ ಸಂಸ್ಥೆ ಆಗಬೇಕು. ಇದಕ್ಕೆ ಎಲ್ಲರ ಸಹಕಾರ, ಸಹಭಾಗಿತ್ವ ಅಗತ್ಯ ಎಂದು ಶ್ರೀನಿವಾಸ ಹೆಬ್ಬಾರ್ ಹೇಳಿದರು.‌

ಲಾಭ ಕಲ್ಪಿಸಲು ಪ್ರಯತ್ನ: ಹರಿಪ್ರಕಾಶ ಕೋಣೆಮನೆ

ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕರು ಹಾಗೂ ಪರಿವಾರ ಸಹಕಾರಿ ಸಂಸ್ಥೆ ನಿರ್ದೇಶಕರಾದ ಹರಿಪ್ರಕಾಶ ಕೋಣೆಮನೆ ಅವರು ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಆರ್ಥಿಕ ಶಿಸ್ತು ಇದ್ದರೆ ಸಾಧನೆ ಸಾಧ್ಯ. ಗದಗದಲ್ಲಿ ಆರಂಭವಾದ ಸಹಕಾರ ಚಳವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆದಿದೆ. ಪರಿವಾರ ಸಹಕಾರಿ ಸಂಘ ಕೂಡ ಜನರ ವಿಶ್ವಾಸ ಗಳಿಸಿ ಬೆಳೆಯುತ್ತಿದೆ. ಸಂಘವನ್ನು ಮುಂದಿನ ವರ್ಷದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿಸಿ ಅದರ ಅನುಕೂಲ ಹಾಗೂ ಲಾಭವನ್ನು ಸಂಘದ ಸದಸ್ಯರಿಗೆ ಕಲ್ಪಿಸಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Power Point with HPK : ಈಗ ರಮೇಶ್‌ ಜಾರಕಿಹೊಳಿ ಎದುರು ಬಂದು ನಿಂತ್ರೆ ಲಕ್ಷ್ಮಿ ಹೆಬ್ಬಾಳ್ಕರ್‌ ಏನು ಮಾಡಬಹುದು?

ಈ ವೇಳೆ ಸಂಸ್ಥೆ ಉಪಾಧ್ಯಕ್ಷ, ವಿಸ್ತಾರ ನ್ಯೂಸ್‌ ಚೇರ್ಮನ್‌ ಮತ್ತು ಎಂಡಿ ಎಚ್.ವಿ. ಧರ್ಮೇಶ್, ಪರಿವಾರ ಸಹಕಾರಿ ಸಂಸ್ಥೆಯ ನಿರ್ದೇಶಕರಾದ ಗುರುನಾಥ ದಾನಪ್ಪನವರ, ಎಂ.ಎಂ.ಭಟ್ಟ ಕಾರೆಕೊಪ್ಪ, ರಾಮಚಂದ್ರ ಹೆಗಡೆ, ಪಿ.ಡಿ.ಮದ್ಗುಣಿ, ಕಾರ್ಯನಿರ್ವಾಹಕ ದೀಪಕ್ ಹೆಗಡೆ ಇತರರು ಇದ್ದರು. ಗಿರಿಧರ ಕಬ್ನಳ್ಳಿ ವಂದಿಸಿದರು.

Exit mobile version