Site icon Vistara News

Fraud Case: ಚೆನ್ನವೀರ ಸ್ವಾಮೀಜಿಯ ಅಸಲಿ ಮುಖ ಬಯಲು ಮಾಡೋ ಮತ್ತೊಂದು ಆಡಿಯೊ ಲೀಕ್!

chennaveera swamiji fraud case

#image_title

ಬೆಂಗಳೂರು: ಕಂಬಾಳು ಮಠದ ಚೆನ್ನವೀರ ಶಿವಾಚಾರ್ಯ ಸ್ವಾಮಿಗೆ ವಂಚನೆ ಪ್ರಕರಣದಲ್ಲಿ ದಿನೇ ದಿನೇ ಸ್ಫೋಟಕ ರಹಸ್ಯಗಳು ಬೆಳಕಿಗೆ ಬರುತ್ತಿವೆ. ಮೊನ್ನೆ ಪ್ರಕರಣದ ಎರಡನೇ ಆರೋಪಿ ಮೊದಲ ಆರೋಪಿಯಾಗಿ ಹೇಗೆ ಬದಲಾದಲು ಎಂಬ ಆಡಿಯೋ ಲೀಕ್ ಆಗಿದ್ದರೆ, ಅದರ ಮುಂದುವರಿದ ಭಾಗದ ಆಡಿಯೊದಲ್ಲಿ ಸ್ವಾಮೀಜಿ ನಿಜ ಪುರಾಣ ಏನು ಎಂಬುವುದು ಬಯಲಾಗಿದೆ.

ನೆಲಮಂಗಲ‌ ಸಮೀಪದ ಕಂಬಾಳು ಮಠದ ಚೆನ್ನವೀರ ಸ್ವಾಮೀಜಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ವಾಮೀಜಿ ಹಾಗೂ ಪ್ರಕರಣದ ಮೊದಲ ಆರೋಪಿ ವರ್ಷಾಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪೊಲೀಸರು ಎರಡನೇ ಆರೋಪಿಯನ್ನೇ ಮೊದಲ ಆರೋಪಿಯನ್ನಾಗಿ ಮಾಡಿದ್ದಾರೆ ಎನ್ನಲಾಗಿದೆ. ಆ ಸಂಬಂಧ ಲೀಕ್ ಆದ ಆಡಿಯೊ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೊಲೀಸರ ಮೇಲೆ ಕೇಳಿ ಬಂದಿರುವ ಗಂಭಿರ ಆರೋಪದ ಮೇಲೆ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮೊನ್ನೆ ರಿಲೀಸ್ ಆದ ಆಡಿಯೊದಲ್ಲಿ ಬೆಳಕಿಗೆ ಬಂದ ಸ್ಫೋಟಕ ಸತ್ಯಕ್ಕೆ ಪುಷ್ಟಿ ನೀಡುವ ಹಾಗೂ ಸ್ವಾಮೀಜಿಯ ನಿಜ ಪುರಾಣ ಎಂತದುದೆಂದು ಎಂದು ಅನುಮಾನ ಮೂಡಿಸುವ ಮತ್ತೊಂದು ಆಡಿಯೊ ಲೀಕ್ ಆಗಿದೆ.

ಇದನ್ನೂ ಓದಿ | ಕಾಣೆಯಾಗಿದ್ದ ಮಹಿಳೆ ಶವ ನೀರಿನ ಟ್ಯಾಂಕ್​​ನಲ್ಲಿ ಪತ್ತೆ; ಯಾರನ್ನು ಹುಡುಕಿ ಹೋಗಿದ್ದಳೋ ಅವನಿಂದಲೇ ಹತ್ಯೆ

ಮೊದಲ ಆಡಿಯೊದಲ್ಲಿ ನಡೆದಿರುವಂತೆ ಪ್ರಕರಣದ ಎರಡನೇ ಆರೋಪಿ ಮಂಜುಳಾ ಹಾಗೂ ಮೂರನೇ ಆರೋಪಿ ಅವನಿಕಾ ಮಾತನಾಡಿರುವ ಈ ಆಡಿಯೊ ಕ್ಲಿಪ್‌ನಲ್ಲಿ ಸ್ವಾಮೀಜಿ ಹಾಗೂ ವರ್ಷಾ ನಡುವೆ ಸಂಬಂಧ ಎಂತಹದ್ದು, ಎಷ್ಟು ವರ್ಷಗಳಿಂದ ನಡೆಯುತ್ತಿತ್ತು ಅನ್ನೋ ಅಂಶಗಳು ಬೆಳಕಿಗೆ ಬಂದಿವೆ. ಎರಡನೇ ಆರೋಪಿ ಮಂಜುಳಾ ಹೇಳಿರುವಂತೆಯೇ ಈ ಪ್ರಕರಣದಲ್ಲಿ ವರ್ಷಾ ಅನ್ನೋ ಲೇಡಿ ಇರುವುದು ಕನ್ಫರ್ಮ್. 2018 ರಿಂದಲೇ ವರ್ಷಾ ಜತೆ ಚೆನ್ನವೀರ ಸ್ವಾಮೀಜಿ ಸಂಪರ್ಕ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ, ಸ್ವಾಮೀಜಿಯ ಋಣ ತೀರಿಸಲು ಹಾಗೂ ಮರ್ಯಾದೆ ಉಳಿಸಲು ನಾನೆ ವರ್ಷಾ ಎಂದಿರುವ ಮಂಜುಳಾ, ನಿಜವಾದ ವರ್ಷಾ ಹೊರಗೆ ಬಂದರೆ ಸ್ವಾಮೀಜಿ ಜೈಲು ಸೇರೋದು ಪಕ್ಕಾ ಅನ್ನೋದು ಉಲ್ಲೇಖಿಸಿದ್ದಾಳೆ.

ಸತ್ಯ ಬಾಯ್ಬಿಟ್ರೆ ಸ್ವಾಮೀಜಿ ಬೀದಿಗೆ ಬರೋದು ಪಕ್ಕಾ ಎಂದ ಮಹಿಳೆ

ಮತ್ತೊಂದೆಡೆ ಪ್ರಕರಣದ ತನಿಖೆ ನಡೆಸುತ್ತಿರುವ ದಾಬಸ್ ಪೇಟೆ ಪೊಲೀಸರಿಗೂ ವರ್ಷಾ ಹೊರಬರುವುದು ಇಷ್ಟವಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರು ಸ್ವಾಮೀಜಿ ಸೂಚನೆಯಂತೆ ಮಂಜುಳಾಳನ್ನೇ ವರ್ಷಾ ಅಂತ ಹೇಳಿಕೆ ಪಡೆದು ದಾಖಲಿಸಿಕೊಂಡಿದ್ದಾರೆ. ಆದರೆ, ಹೇಳಿಕೆ ನೀಡಿದ ಬಳಿಕ ಮಂಜುಳಾಗೆ ಮತ್ತೆ ಸಂಕಷ್ಟ ಎದುರಾಗಿದೆ.

ಸಂಸಾರ ಆಳಾಗುತ್ತಿದೆ, ನನ್ನ ಮಗನಿಗೆ ಸಹಾಯ ಮಾಡಿದರು ಅಂತ ಸ್ವಾಮೀಜಿಯನ್ನು ಉಳಿಸಲು ಮುಂದಾದೆ ಎಂದಿರುವ ಮಂಜುಳಾ, ಸ್ವಾಮೀಜಿ ಹಾಗೂ ವರ್ಷಾ ನಡುವೆ ಏನೆಲ್ಲಾ ನಡೆಯುತ್ತಿತ್ತು, ಸ್ವಾಮೀಜಿ ಎಷ್ಟು ವರ್ಷಗಳಿಂದ ಯಾವ ಬ್ಯಾಂಕ್‌ ಖಾತೆಯಿಂದ ವರ್ಷಾಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬ ಇಂಚಿಂಚು‌ ಮಾಹಿತಿಯನ್ನು ಮೂರನೇ ಆರೋಪಿ ಬಳಿ ಹಂಚಿಕೊಂಡಿದ್ದು, ಆ ಆಡಿಯೊ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

ಇದನ್ನೂ ಓದಿ | Fraud Case: ಡೇಟಿಂಗ್‌ ಆ್ಯಪ್‌ನಲ್ಲಿ ಅನಿರುದ್ಧ್‌ ಆಗಿ ಬದಲಾದ ಮುದಾಸಿರ್;‌ ಎಲ್ಲವನ್ನೂ ಮುಗಿಸಿ ಕಾಸೂ ಪಡೆದ!

ಮತ್ತೊಂದೆಡೆ ಸ್ವಾಮೀಜಿಗಳು ನನ್ನನ್ನು ತಂಗಿ ಅಂತ ಕರೆದಿದ್ದಾರೆ. ಸದ್ಯ ನಾನು ವರ್ಷಾ ಅಂತ ಒಪ್ಪಿಕೊಂಡಿರುವುದಕ್ಕಾದರೂ ಅವರು ಋಣಿಯಾಗಿರಬೇಕು. ನಾನು ಏನಾದರೂ ಸತ್ಯ ಬಾಯ್ಬಿಟ್ರೆ ಸ್ವಾಮೀಜಿ ಬೀದಿಗೆ ಬರೋದು ಪಕ್ಕಾ ಅಂತ ಸ್ವಾಮೀಜಿಯ ಕರಾಳ ಮುಖದ ಕೆಲ ಸಂಗತಿಗಳನ್ನು ಅವನಿಕಾ ಬಳಿ ವಿವರಿಸಿ ಮಂಜುಳಾ ಕಣ್ಣೀರಾಕಿದ್ದಾಳೆ. ಸದ್ಯ ಈ ಆಡಿಯೊ ಕ್ಲಿಪ್‌ನಿಂದಾಗಿ ತನಿಖೆ ಮತ್ಯಾವ ತಿರುವು ಪಡೆಯುತ್ತದೆ ಎಂಬುವುದು ನೋಡಬೇಕಿದೆ.

Exit mobile version