Site icon Vistara News

Tulsi Gowda : ಪದ್ಮಶ್ರೀ ಡಾ. ತುಳಸಿ ಗೌಡರಿಗೆ ಮತ್ತೊಂದು ಡಾಕ್ಟರೇಟ್ ಗೌರವ

Raja Marga column Tulsi Gowda

ಅಂಕೋಲಾ: ಇತ್ತೀಚೆಗಷ್ಟೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವ ನೀಡಿ ಗೌರವಿಸಿದ ಪದ್ಮಶ್ರೀ ಡಾ. ತುಳಸಿ ಗೌಡರಿಗೆ (Tulsi Gowda) ಮತ್ತೊಂದು ಡಾಕ್ಟರೇಟ್ ಗೌರವ ಅರಸಿ ಬಂದಿದೆ. ಕಲಬುರ್ಗಿಯ ಶ್ರೀಸತ್ಯಸಾಯಿಬಾಬಾ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ಗಾಗಿ ಡಾ. ತುಳಸಿ ಗೌಡ ಅವರ ಹೆಸರನ್ನು ಪ್ರಕಟಿಸಿದೆ.

ಇದರಿಂದಾಗಿ ತುಳಸಿ ಗೌಡ ಅವರಿಗೆ ಡಬಲ್ ಡಾಕ್ಟರೇಟ್ ಗೌರವ ಸಿಕ್ಕಂತಾಗಿದೆ. ಕಲಬುರಗಿ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಕಾರ್ಯಕ್ರಮವು ಜುಲೈ 3ರಂದು ಸಂಜೆ 4.30 ಕ್ಕೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಹಾಗೂ ಸಾಧನೆ ಮಾಡಿದ ದೇಶದ ಆರು ಮಂದಿ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುವುದು. ಅಂಥವರ ಸಾಲಿನಲ್ಲಿ ಪದ್ಮಶ್ರೀ ಡಾ. ತುಳಸಿ ಗೌಡ ಅವರು ಒಬ್ಬರಾಗಿರುವುದು ಅಂಕೋಲಾ ತಾಲೂಕಿಗೆ ಇನ್ನಷ್ಟು ಹಿರಿಮೆ ಬಂದಂತಾಗಿದೆ.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯದ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ವಿಶ್ವವಿದ್ಯಾಲಯದ ಸಂಸ್ಥಾಪಕ ಸದ್ಗುರು ಮಧುಸೂಧನ ಸಾಯಿ, ಕುಲಪತಿ ಬಿ.ಎನ್. ನರಸಿಂಹಮೂರ್ತಿ, ಉಪ ಕುಲಪತಿ ಡಾ.ಶ್ರೀಕಾಂತ ಮೂರ್ತಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Power Point with HPK : ಸಿದ್ದರಾಮಯ್ಯ ಸೆಕ್ಯುಲರ್‌ ಅಲ್ಲ, ಗ್ಯಾರಂಟಿಯಿಂದ ಬದುಕೇ ಸರ್ವನಾಶ: ಸಿ.ಟಿ. ರವಿ

ಹಸಿರೀಕರಣ ಗುರುತಿಸಿ ಈ ಗೌರವ

ಅಂಕೋಲಾ ತಾಲೂಕಿನ ಪದ್ಮಶ್ರೀ ತುಳಸಿಗೌಡ ಅವರನ್ನು ಹಸಿರೀಕರಣ ಮತ್ತು ಸಮಾಜ ಸೇವೆಗಾಗಿ ಗುರುತಿಸಿ, ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.

Exit mobile version