Site icon Vistara News

Jeevajala TaskForce: ಮತ್ತೊಂದು ಕೆರೆ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟ ಜೀವಜಲ ಕಾರ್ಯಪಡೆ

Jeevajala TaskForce in sirsi

ಶಿರಸಿ: ಬೇಸಿಗೆಯ ತಾಪದಿಂದ ಎಲ್ಲ ಕಡೆ ನೀರಿನ ಹಾಹಾಕಾರ ಹೆಚ್ಚುತ್ತಿದೆ. ಇದಕ್ಕೆಲ್ಲ ನೀರಿನ ಮೂಲಗಳು ಬರಿದಾಗುತ್ತಿರುವುದೂ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲ ಮೂಲವನ್ನು ಅಭಿವೃದ್ಧಿ ಪಡಿಸುತ್ತಾ ಬಂದಿರುವ ಕೆರೆ ಹೆಬ್ಬಾರ ಎಂದೇ ಖ್ಯಾತಿ ಪಡೆದಿರುವ ಶ್ರೀನಿವಾಸ ಹೆಬ್ಬಾರ (Srinivasa Hebbar) ಅವರು ತಮ್ಮ ಜೀವಜಲ ಕಾರ್ಯಪಡೆಯ (Jeevajala TaskForce) ಮೂಲಕ ಮತ್ತೊಂದು ಜಲಮೂಲವನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಪ್ರಾರಂಭಿಸಿದ್ದಾರೆ.

ಕಳೆದ ಆರು ವರ್ಷಗಳಿಂದ ಶಿರಸಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಸಹಕರಿಸಿರುವ ಜೀವಜಲ ಕಾರ್ಯಪಡೆ ಈಗಲೂ ತನ್ನ ಕೆಲಸವನ್ನು ಮುಂದುವರಿಸಿದೆ. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ಈಗ ಶಿರಸಿ ತಾಲೂಕಿನ ಗೌಡಳ್ಳಿಯ ಕೆಂಪು ಕೆರೆಯನ್ನು ಹೂಳೆತ್ತುವ ಕೆಲಸವನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: Salary Hike : ಭಾರತದಲ್ಲೇ ಬೆಂಗಳೂರಿನಲ್ಲಿ ಅತ್ಯಧಿಕ ಸಂಬಳ ಸಿಗಲು ಕಾರಣವೇನು? ಈ ವರ್ಷ ಎಷ್ಟು ಹೆಚ್ಚಳ?

ಕಳೆದ ಎರಡು ದಿನಗಳಿಂದ ಗೌಡಳ್ಳಿಯಲ್ಲಿ ಹೆಬ್ಬಾರ್ ನೇತೃತ್ವದಲ್ಲಿ ಹೂಳೆತ್ತುವ ಕೆಲಸ ನಡೆಸಲಾಗುತ್ತಿದೆ. ಎರಡು ಹಿಟಾಚಿ ಮತ್ತು ಎರಡು ಟಿಪ್ಪರ್‌ಗಳನ್ನು ಬಳಸಿ ಹೂಳೆತ್ತುವ ಕೆಲಸ ನಡೆಯುತ್ತಿದ್ದು, ಅರ್ಧದಷ್ಟು ಕಾಮಗಾರಿ ಈಗಾಗಲೇ ಮುಗಿದಿದೆ. ಅಂದಾಜು 20 ಅಡಿಯಷ್ಟು ಆಳದ ಹೂಳನ್ನು ತೆಗೆಯುವ ಕೆಲಸ ನಡೆಯುತ್ತಿದೆ.‌

ಸ್ಥಳೀಯರಿಂದ ಶ್ಲಾಘನೆ

ಗೌಡಳ್ಳಿಯ ಕೆಂಪು ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು, ಇಷ್ಟು ದಿನ ಇದು ಉಪಯೋಗಕ್ಕೆ ಬಾರದ ರೀತಿಯಲ್ಲಿತ್ತು. ಜತೆಗೆ ಗಿಡ-ಗಂಟಿಗಳು ಬೆಳೆದುಕೊಂಡಿತ್ತು. ಆದರೆ, ಈಗ ಅದನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸುವ ಕೆಲಸವು ಜೀವಜಲ ಕಾರ್ಯಪಡೆಯಿಂದ ನಡೆಯುತ್ತಿದ್ದು, ಇವರ ಕೆಲಸಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Congress Guarantee: ಗ್ಯಾರಂಟಿ ಈಡೇರಿಸದಿದ್ದರೆ ಮಹಿಳೆಯರು ಬೀದಿಗೆ ಬರೋದು ಗ್ಯಾರಂಟಿ ಎಂದ ಬೊಮ್ಮಾಯಿ

ಜಲಮೂಲ ಅಭಿವೃದ್ಧಿಗೆ ಎಲ್ಲರೂ ಸಹಕರಿಸಿ
ಗೌಡಳ್ಳಿ ಕೆಂಪು ಕೆರೆ ಹೂಳೆತ್ತುವ ಕೆಲಸವು ಜೀವಜಲ ಕಾರ್ಯಪಡೆಯಿಂದ ನಡೆಯುತ್ತಿದೆ. ಈಗಾಗಲೇ ಕರಸುಳ್ಳಿ, ಜೈನ ಮಠದ ಕೆರೆ ಹೂಳೆತ್ತುವ ಕೆಲಸ ಆಗಿದೆ‌. ಜಲಮೂಲ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮನವಿ ಮಾಡಿದ್ದಾರೆ.

Exit mobile version