Site icon Vistara News

ಅನುಭವ ಮಂಟಪ ಪೀರ್‌ಬಾಷಾ ಬಂಗ್ಲೆಯಾಗಿದೆ: ಚಂದ್ರಶೇಖರ ಸ್ವಾಮೀಜಿ

chandrashekara swamiji

ಬೆಳಗಾವಿ: ಬಸವಣ್ಣ ಅವರ ಅನುಭವ ಮಂಟಪ ಪೀರ್‌ಬಾಷಾ ಬಂಗ್ಲೆಯಾಗಿದೆ, ಇದನ್ನು ನೋಡಿ ನಾವು ಸುಮ್ಮನೆ ಕುಳಿತರೆ ಹೇಗೆ? ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ʼʼಬಸವಣ್ಣನವರ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಆಗಿತ್ತು. ಇದರ ಮರುನಿರ್ಮಾಣಕ್ಕೆ ಸರ್ಕಾರ ಸಾಕಷ್ಟು ಶ್ರಮವಹಿಸುತ್ತಿದೆ. ಆದರೆ ಮೂಲ ಅನುಭವ ಮಂಟಪವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದು ಅಭಿವೃದ್ಧಿಪಡಿಸಬೇಕು. ಮುಸ್ಲಿಮರು ಸೌಹಾರ್ದತೆಯಿಂದ ಚರ್ಚಿಸಿ ಮೂಲ ಅನುಭವ ಮಂಟಪ ಬಿಟ್ಟುಕೊಡಬೇಕು. ಈ ಕುರಿತು ವೀರಶೈವ ಲಿಂಗಾಯತ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ವಿಶೇಷ ಗಮನ ಹರಿಸುತ್ತಿದ್ದಾರೆʼʼ ಎಂದು ತಿಳಿಸಿದರು.

ʼʼಎಲ್ಲ ಸ್ವಾಮೀಜಿಗಳನ್ನು ಒಂದೆಡೆ ಸೇರಿಸಿ ಜೂನ್ 12 ರಂದು ಅನುಭವ ಮಂಟಪಕ್ಕೆ ತೆರಳುತ್ತಿದ್ದಾರೆ. ಅದಕ್ಕೂ ಮೊದಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮೂಲ ಅನುಭವ ಮಂಟಪ ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕುʼʼ ಎಂದು ಹೇಳಿದರು.

ಇದನ್ನೂ ಓದಿ | ಕೊಳದ ಮಠ ಪೀಠಾಧ್ಯಕ್ಷರ ಆಯ್ಕೆ ವಿವಾದ ತಾರಕಕ್ಕೆ: ಸ್ವಾಮೀಜಿ ಕುಟುಂಬದಲ್ಲಿ ಕಲಹ

Exit mobile version