Site icon Vistara News

Toyota: ಟೊಯೊಟಾ ಕೌಶಲ್ಯ ಕೋರ್ಸ್‌ಗೆ ಅರ್ಜಿ ಆಹ್ವಾನ; ಗ್ರಾಮೀಣ ಯುವಕರೇ ಈ ಅವಕಾಶ ಬಳಸಿಕೊಳ್ಳಿ

Application Invited for TTTI and Toyota Skill Courses from Toyota Technical Training Institute

ಬೆಂಗಳೂರು: ಗ್ರಾಮೀಣ ಯುವಕರನ್ನು ವಿಶ್ವದರ್ಜೆಯ ಸ್ಪರ್ಧಾತ್ಮಕ ತಂತ್ರಜ್ಞರನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ವತಿಯಿಂದ ಟಿಟಿಟಿಐ ರೆಗ್ಯುಲರ್ ಪ್ರೋಗ್ರಾಂ ಮತ್ತು ಟೊಯೊಟಾ (Toyota) ಕೌಶಲ್ಯ ಕಾರ್ಯಕ್ರಮಗಳಿಗೆ 2024ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿದೆ.

ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದಿರುವ ಶೈಕ್ಷಣಿಕ ಆಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತಿದ್ದು, ಇದರಿಂದ ಗ್ರಾಮೀಣ ವಿದ್ಯಾರ್ಥಿಗಳು ನುರಿತ ತಂತ್ರಜ್ಞರಾಗಿ ವೃತ್ತಿಜೀವನವನ್ನು ಮುಂದುವರಿಸಲು ಸಶಕ್ತರಾಗಲಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

ಟಿಟಿಟಿಐ ರೆಗ್ಯುಲರ್ ಪ್ರೋಗ್ರಾಂ ಮೂರು ವರ್ಷಗಳ ವಸತಿ ಕೋರ್ಸ್ ಮೂಲಕ ಸಮಗ್ರ ತರಬೇತಿಯನ್ನು ನೀಡುತ್ತದೆ. ಇತ್ತೀಚೆಗೆ ಪರಿಚಯಿಸಲಾದ ಟೊಯೊಟಾ ಕೌಶಲ್ಯ ಕಾರ್ಯಕ್ರಮದ ಜತೆಗೆ ಕೌಶಲ್ಯ, ಜ್ಞಾನ ಮತ್ತು ನಡವಳಿಕೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ, ಇದು ಉತ್ಪಾದನಾ ಉದ್ಯಮಕ್ಕೆ ನಿರ್ಣಾಯಕವಾದ ಕೌಶಲ್ಯಗಳೊಂದಿಗೆ ಯುವಕರನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ಸಮಗ್ರ ಎರಡು ವರ್ಷಗಳ ವಸತಿ ಕೋರ್ಸ್ ಆಗಿದೆ. ಆ ಮೂಲಕ ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸುತ್ತದೆ. ‘ಕಲಿಯಿರಿ ಮತ್ತು ಸಂಪಾದಿಸಿ’ ಮಾದರಿಯ ಮೂಲಕ ಭಾಗವಹಿಸುವವರು ಆನ್-ದಿ-ಜಾಬ್ ಟ್ರೈನಿಂಗ್ (ಒಜೆಟಿ) ಜತೆಗೆ ಸೈದ್ಧಾಂತಿಕ ಕಲಿಕೆಯಲ್ಲಿ ವಿದ್ಯಾರ್ಥಿಗಳು ತೊಡಗುತ್ತಾರೆ.

ಮಾಸ್ಟರ್ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಅನುಭವಿ ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುವವರು ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ಉನ್ನತ ಶ್ರೇಣಿಯ ಬೋಧನೆಯಿಂದ ಪ್ರಯೋಜನ ಪಡೆಯುತ್ತಾರೆ. ಇದು ಉತ್ತಮ ಗುಣಮಟ್ಟದ ತರಬೇತಿಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಕೈಗಾರಿಕಾ ಮಾನದಂಡಗಳಿಗೆ ಅನುಗುಣವಾಗಿ ಪರಿಣಿತಿಯನ್ನು ಬೆಳೆಸುತ್ತದೆ. ಹೆಚ್ಚುವರಿಯಾಗಿ ಈ ಕಾರ್ಯಕ್ರಮವು ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತದೆ. ತರಬೇತಿ ಪಡೆಯುವವರಿಗೆ ಸುಧಾರಿತ ಕೌಶಲ್ಯ ಮತ್ತು ಜ್ಞಾನ ಸಂಪಾದನೆಯೊಂದಿಗೆ ಕಠಿಣ ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಪಡೆಯಲಿದ್ದಾರೆ.

ಈ ಬಗ್ಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಹಣಕಾಸು ಮತ್ತು ಆಡಳಿತದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ಮಾತನಾಡಿ, “2024 ನೇ ಸಾಲಿಗೆ ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಗೆ (ಟಿಟಿಟಿಐ) ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ನಮ್ಮ ಟಿಟಿಟಿಐ ರೆಗ್ಯುಲರ್ ಪ್ರೋಗ್ರಾಂ ಮತ್ತು ಟೊಯೊಟಾ ಕೌಶಲ್ಯ ಕಾರ್ಯಕ್ರಮದ ಮೂಲಕ ನಾವು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ಮನೋಭಾವವನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತೇವೆ. ವಿದ್ಯಾರ್ಥಿಗಳನ್ನು 360 ಡಿಗ್ರಿ ದೃಷ್ಟಿಕೋನದಿಂದ ಅಭಿವೃದ್ಧಿ ಪಡಿಸುತ್ತೇವೆ. ಇದರ ಪರಿಣಾಮವಾಗಿ ನಮ್ಮ ಪದವೀಧರರು ಭಾರತದಲ್ಲಿ ಮತ್ತು ಜಪಾನ್ ಮತ್ತು ಮಧ್ಯಪ್ರಾಚ್ಯ ದೇಶಗಳು ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 2007 ರಲ್ಲಿ ಪ್ರಾರಂಭವಾದಾಗಿನಿಂದ ಟಿಟಿಟಿಐ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಶಸ್ವಿಯಾಗಿ ಪದವಿ ಪಡೆದಿದ್ದಾರೆ.

ಇದನ್ನೂ ಓದಿ: Bhatkal News: ಭಟ್ಕಳದ ಕಡವಿನಕಟ್ಟೆ ಹೊಳೆಯಲ್ಲಿ ಮುಳುಗಿ ಇಬ್ಬರ ಸಾವು

ಟಿಟಿಟಿಐ ಪದವೀಧರರು ರಾಷ್ಟ್ರೀಯ ಕೌಶಲ್ಯ ಸ್ಪರ್ಧೆ ಮತ್ತು ವಿಶ್ವ ಕೌಶಲ್ಯ ಸ್ಪರ್ಧೆಯಂತಹ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಪ್ರಶಂಸನೀಯ ಸಾಧನೆಗಳನ್ನು ಮಾಡಿದ್ದಾರೆ. ಆ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ. “ಸ್ಕಿಲ್ ಇಂಡಿಯಾ” ಮಿಷನ್‌ಗೆ ಕೊಡುಗೆ ನೀಡಲು ನಾವು ಹೆಮ್ಮೆಪಡುತ್ತೇವೆ. ಮುಂದಿನ ಪೀಳಿಗೆಯ ನುರಿತ ವೃತ್ತಿಪರರನ್ನು ಟೊಯೊಟಾ ಕುಟುಂಬಕ್ಕೆ ಸ್ವಾಗತಿಸಲು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಟಿಟಿಟಿಐ ಇತ್ತೀಚೆಗೆ ತನ್ನ ದಾಖಲಾತಿ ಸಮಾರ್ಥ್ಯವನ್ನು 600 ರಿಂದ 1200 ಕ್ಕೆ ದ್ವಿಗುಣಗೊಳಿಸಿದೆ. ಇದರಲ್ಲಿ 600 ಮಹಿಳಾ ವಿದ್ಯಾರ್ಥಿಗಳು ಸೇರಿದ್ದಾರೆ. ಅದರ ವಿಸ್ತರಣೆಯ ಪ್ರಮುಖ ಅಂಶವಾಗಿ ಲಿಂಗ ವೈವಿಧ್ಯತೆಯನ್ನು (ಲಿಂಗ ಸಮಾನತೆ) ಹೆಚ್ಚಿಸುವತ್ತ ದೃಢವಾದ ಗಮನ ಹರಿಸಲಾಗಿದೆ.

ಕೌಶಲ್ಯವನ್ನು ಉತ್ತೇಜಿಸಲು, ಟಿಟಿಟಿಐ ಜಪಾನ್ ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (ಜಿಐಎಂ) ಕೌಶಲ್ಯ ವರ್ಗಾವಣೆ ಉತ್ತೇಜನ ಕಾರ್ಯಕ್ರಮದ ಅಡಿಯಲ್ಲಿ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಜಪಾನೀಸ್ ಶೈಲಿಯ ಉತ್ಪಾದನಾ ಕೌಶಲ್ಯಗಳು ಮತ್ತು ಅಭ್ಯಾಸಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಆ ಮೂಲಕ ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ’ ಮಿಷನ್‌ಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಟಿಟಿಟಿಐ ರೆಗ್ಯುಲರ್ ಕೋರ್ಸ್

ಈ ಕೋರ್ಸ್‌ ಕೌಶಲ್ಯ, ಜ್ಞಾನ ಮತ್ತು ನಡವಳಿಕೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಸಮಗ್ರ ತರಬೇತಿ ವಿಧಾನವಾಗಿದೆ.

ಕೋರ್ಸ್‌ ಅವಧಿ: 3 ವರ್ಷಗಳು, ಕೋರ್ಸ್‌ಗೆ ಸೇರಲು ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಪಾಸ್‌ ಒಟ್ಟಾರೆ ಶೇ.50 ಅಂಕ, ಗಣಿತ ಮತ್ತು ವಿಜ್ಞಾನ ತಲಾ ಶೇ.45 ರಷ್ಟು ಅಂಕ ಪಡೆದಿರಬೇಕು. ವಯಸ್ಸಿನ ಅರ್ಹತೆ: 16-17 ವರ್ಷದವರಾಗಿರಬೇಕು. ಕೋರ್ಸ್‌ ಟ್ರೇಡ್ಸ್: ಆಟೋಮೋಟಿವ್ ವೆಲ್ಡ್, ಆಟೋಮೋಟಿವ್ ಪೇಂಟ್, ಆಟೋಮೋಟಿವ್ ಅಸೆಂಬ್ಲಿ, ಮೆಕಾಟ್ರಾನಿಕ್ಸ್ ಆಗಿವೆ.

ಈ ಮೂರು ವರ್ಷದ ಕೋರ್ಸ್‌ಗೆ ಸೇರುವವರಿಗೆ ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್‌ ಸಿಗಲಿದೆ. ಟೊಯೋಟಾ, ಜಿಮ್ (ಜಪಾನ್-ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್) ಎಎಸ್‌ಡಿಸಿ (ಆಟೋಮೋಟಿವ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್) ಪ್ರಮಾಣಪತ್ರ ದೊರೆಯಲಿದೆ.

ಟೊಯೊಟಾ ಕೌಶಲ್ಯ ಕೋರ್ಸ್

ಉದ್ಯೋಗ ತರಬೇತಿಯೊಂದಿಗೆ ಉದ್ಯಮ ಸಮೃದ್ಧ ಪಠ್ಯಕ್ರಮದೊಂದಿಗೆ “ಕಲಿಯಿರಿ ಮತ್ತು ಸಂಪಾದಿಸಿ” ಪರಿಕಲ್ಪನೆಯಾಗಿದೆ. ಕೋರ್ಸ್‌ನ ಅವಧಿ: 2 ವರ್ಷಗಳು, ಕೋರ್ಸ್‌ಗೆ ಸೇರಲು ವಿದ್ಯಾರ್ಹತೆ: ಎಸ್ಎಸ್ಎಲ್ ಸಿ ತೇರ್ಗಡೆಯಾಗಿರಬೇಕು. ವಯಸ್ಸಿನ ಅರ್ಹತೆ: 18 ರಿಂದ 24 ವರ್ಷದವರಾಗಿರಬೇಕು. ಇ-ಎನ್‌ಟಿಸಿ (ಐಟಿಐಗೆ ಸಮಾನವಾದ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ), ಟೊಯೊಟಾ, ಜಿಮ್ (ಜಪಾನ್-ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್) ಪ್ರಮಾಣ ಪತ್ರ ದೊರೆಯಲಿದೆ.

ಇದನ್ನೂ ಓದಿ: Dubbing Premier League : ಶನಿವಾರದಿಂದ 3ನೇ ಆವೃತ್ತಿಯ ಡಬ್ಬಿಂಗ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ

ಮೇ 26ರಂದು ಹುಬ್ಬಳ್ಳಿ, ತುಮಕೂರು, ಹಾಸನ ಹಾಗೂ ಮೇ 25 ರಂದು ಬಿಡದಿಯಲ್ಲಿ ಹಾಗೂ ಮೇ 24 ರಂದು ಶಿವಮೊಗ್ಗದಲ್ಲಿ ಪರೀಕ್ಷೆ ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಟೊಯೊಟಾ ಇಂಡಿಯಾ ಟಿಟಿಟಿಐ (toyotabharat.com), ಮೊಬೈಲ್: 8050673677, 9591999667, ಲ್ಯಾಂಡ್‌ಲೈನ್- 080 66292546 ಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ಒಳಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version