Site icon Vistara News

Translation Workshop: ʼಬಿಂಬ ಪ್ರತಿಬಿಂಬʼ ಅನುವಾದ ಕಲಿಕಾ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ

translation workshop

ಬೆಂಗಳೂರು: ಟಾಟಾ ಟ್ರಸ್ಟ್‌ನ ಅಂಗಸಂಸ್ಥೆಯಾದ ‘ಪರಾಗ್’, ‘ಬಹುರೂಪಿ’ ಪ್ರಕಾಶನದ ಸಹಯೋಗದೊಂದಿಗೆ ಮಕ್ಕಳ ಕೃತಿಗಳ ಭಾಷಾಂತರದಲ್ಲಿ ಆಸಕ್ತಿ ಇರುವ ಉದಯೋನ್ಮುಖರಿಗೆ ʼಬಿಂಬ ಪ್ರತಿಬಿಂಬʼ (Bimba Prati bimba) ಅನುವಾದ ಕಲಿಕಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಉದಯೋನ್ಮುಖ ಕನ್ನಡದ ಭಾಷಾಂತರಕಾರರಿಗೆ ಹಮ್ಮಿಕೊಂಡಿರುವ 3 ದಿನಗಳ ವಸತಿ ಸಹಿತ ಅನುವಾದ ಕಾರ್ಯಾಗಾರಕ್ಕೆ (Translation Workshop) ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಡಿಸೆಂಬರ್‌ 20ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಜನವರಿ 5 ರಂದು ಆಯ್ಕೆಯಾದ ಶಿಬಿರಾರ್ಥಿಗಳ ಘೋಷಣೆಯಾಗಲಿದ್ದು, ಜನವರಿ 26ರಿಂದ 28ರವರೆಗೆ ನಗರದಲ್ಲಿ 3 ದಿನಗಳ ವಸತಿ ಸಹಿತ ಕಾರ್ಯಾಗಾರ ನಡೆಯಲಿದೆ. ಭಾಷಾಂತರಿಸಿದ ಹಸ್ತಪ್ರತಿ ಸಲ್ಲಿಸಲು ಮಾರ್ಚ್‌ 7 ಕೊನೆಯ ದಿನವಾಗಿದೆ.

ಕಾರ್ಯಾಗಾರದ ವಿವರ

ಇದನ್ನೂ ಓದಿ | ಮೊಗಸಾಲೆ ಅಂಕಣ: ಉತ್ತರ ಕರ್ನಾಟಕಕ್ಕೆ ಉತ್ತರ ನೀಡದ ಬೆಳಗಾವಿ ಅಧಿವೇಶನ

ಅರ್ಜಿ ಮತ್ತು ಆಯ್ಕೆ ಪ್ರಕ್ರಿಯೆ

ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಅರ್ಜಿದಾರರು ಆನ್‌ಲೈನ್‌ನಲ್ಲಿ ನಿಗದಿತ
ದಿನಾಂಕದೊಳಗೆ (ಡಿ.20ರೊಳಗೆ) ಅರ್ಜಿ ಸಲ್ಲಿಸಬೇಕು. ಅರ್ಜಿಯ ಜತೆಗೆ ನೀಡಲಾಗುವ ಸೂಚಿತ ಕಾರ್ಯವನ್ನು ಪೂರ್ಣಗೊಳಿಸಿ ಕಡ್ಡಾಯವಾಗಿ ಸಲ್ಲಿಸಬೇಕು.

ಸೂಚಿತ ಕಾರ್ಯಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೂರವಾಣಿ ಸಂದರ್ಶನದ ಜತೆಗೆ, ಎರಡು ಹಂತಗಳಲ್ಲಿ ಅರ್ಜಿಗಳನ್ನು ಅಂತಿಮಗೊಳಿಸಲಾಗುವುದು. ಆಯ್ಕೆಯ ಕುರಿತು 2024ರ ಜನವರಿ 5ರೊಳಗೆ ಇ-ಮೇಲ್‌ ಮೂಲಕ ತಿಳಿಸಲಾಗುವುದು.

ಮುಖ್ಯವಾದ ದಿನಾಂಕಗಳು

ಡಿಸೆಂಬರ್‌ 20: ಅರ್ಜಿ ಸಲ್ಲಿಸಲು ಕೊನೆಯ ದಿನ
ಜನವರಿ 5: ಆಯ್ಕೆಯಾದ ಶಿಬಿರಾರ್ಥಿಗಳ ಘೋಷಣೆ
ಜನವರಿ 26ರಿಂದ 28: ಬೆಂಗಳೂರಿನಲ್ಲಿ 3 ದಿನಗಳ ವಸತಿಸಹಿತ ಕಾರ್ಯಾಗಾರ
ಮಾರ್ಚ್ 7: ಭಾಷಾಂತರಿಸಿದ ಹಸ್ತಪ್ರತಿಯನ್ನು ಸಲ್ಲಿಸಲು ಕೊನೆಯ ದಿನ

ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಅಪೂರ್ಣ ಅರ್ಜಿಗಳನ್ನು ಅಂಗೀಕರಿಸಲಾಗುವುದಿಲ್ಲ ಇನ್ನಾವುದೇ ಮಾಹಿತಿ/ಸ್ಪಷ್ಟನೆಗಾಗಿ ಸಂಪರ್ಕಿಸಿ: paragtranslationsworkshop@gmail.com

ಏನಿದು ಬಿಂಬ ಪ್ರತಿಬಿಂಬ ಕಾರ್ಯಾಗಾರ?

ಗುಣಮಟ್ಟದ ಸಮಕಾಲೀನ ಮಕ್ಕಳ ಕೃತಿಗಳ ಲಭ್ಯತೆ ಭಾರತೀಯ ಭಾಷೆಗಳಲ್ಲಿ ಇಂದಿಗೂ ಬಹುದೊಡ್ಡ ಸವಾಲಾಗಿಯೇ ಉಳಿದಿದೆ. ಕನ್ನಡದ ಪುಸ್ತಕಗಳನ್ನು ರೂಪಿಸುವಾಗ ಈ ಭಾಷೆಯಲ್ಲಿ ಸಮಕಾಲೀನ ಕೃತಿಗಳ ಲಭ್ಯತೆ ತೀರಾ ಕಡಿಮೆ ಇರುವುದನ್ನು ‘ಪರಾಗ್’ ಗಮನಿಸಿದೆ. ಲಭ್ಯವಿರುವ ಪುಸ್ತಕಗಳಲ್ಲಿ ಕೂಡ, ಮಕ್ಕಳ ವಯೋಮಿತಿ, ಪ್ರಕಾರಗಳು ಮತ್ತು ಮಾದರಿಗಳಲ್ಲಿ ಬಹುದೊಡ್ಡ ಅಂತರ ಇದೆ ಎನ್ನುವುದನ್ನು ಗುರುತಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮಕ್ಕಳು ಮತ್ತು ಹದಿಹರೆಯದವರಿಗೆ ಇಷ್ಟವಾಗುವಂಥ ಹೊಸ ರೀತಿಯ ಸಮಕಾಲೀನ ಸಾಹಿತ್ಯ ಕೃತಿಗಳ ಕೊರತೆ ಇದೆ ಎನ್ನುವುದನ್ನು ಗಮನಿಸಿದೆ. ವಿವಿಧ ಭಾಷೆ, ಪ್ರದೇಶ ಹಾಗೂ ಸಂದರ್ಭದ ವೈವಿಧ್ಯತೆಯನ್ನು ಉತ್ತಮ ಅನುವಾದದ ಮೂಲಕ ಕನ್ನಡಕ್ಕೆ ತಂದಲ್ಲಿ ಈ ಕೊರತೆಯನ್ನು ಒಂದಷ್ಟು ಮಟ್ಟಿಗೆ ತುಂಬಬಹುದು. ಇದರಿಂದಾಗಿ ಸಾಕಷ್ಟು ಒಳ್ಳೆಯ ಹಾಗೂ ವೈವಿಧ್ಯಮಯ ಕೃತಿಗಳು ಮಕ್ಕಳಿಗೆ ದೊರೆಯಲಿದ್ದು ಇವು ಹೆಚ್ಚೆಚ್ಚು ಪ್ರಯೋಗಶೀಲತೆ ಹಾಗೂ ತೊಡಗಿಸಿಕೊಳ್ಳುವಿಕೆಗೆ ದಾರಿ ಮಾಡಿಕೊಡುತ್ತದೆ. ‘ಬಿಂಬ-ಪ್ರತಿಬಿಂಬ’ ಈ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನವಾಗಿದೆ.

ಈ ಕಲಿಕಾ ಕಾರ್ಯಾಗಾರವು ಕನ್ನಡದ ಭಾಷಾಂತರಕಾರರಿಗೆ ಮಕ್ಕಳ ಸಾಹಿತ್ಯ ಮತ್ತು ಅನುವಾದದ ವಿವಿಧ ಮಜಲುಗಳನ್ನು ಪರಿಶೀಲಿಸಲು ವೇದಿಕೆ ಒದಗಿಸುತ್ತದೆ. ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುವ ವೈವಿಧ್ಯಮಯ ಸಮಕಾಲೀನ ಮಕ್ಕಳ ಸಾಹಿತ್ಯವನ್ನು ಅರಿಯಲು ಇದು ಅವಕಾಶ ಒದಗಿಸುತ್ತದೆ. ಅಷ್ಟೇ ಅಲ್ಲದೆ ಕನ್ನಡಕ್ಕೆ ಭಾಷಾಂತರ ಮಾಡುವ ವಿಭಿನ್ನ ವಿಧಾನಗಳು ಹಾಗೂ ರೀತಿಗಳನ್ನು ಪ್ರಯೋಗ ಮಾಡುವುದರ ಜೊತೆಗೆ ಈ ಕ್ಷೇತ್ರದ ಪರಿಣಿತರೊಂದಿಗೆ ಸಂವಾದಿಸಲು ಅವಕಾಶ ದೊರಕುತ್ತದೆ.

ಕಾರ್ಯಾಗಾರದ ಮಾರ್ಗದರ್ಶಕರಾಗಿ ಕನ್ನಡ ಬರಹಗಾರ, ಭಾಷಾಶಾಸ್ತ್ರಜ್ಞ ಎಂ.ಅಬ್ದುಲ್‌ ರೆಹಮಾನ್‌ ಪಾಷಾ, ಅನುಭವಿ ಪ್ರಕಾಶಕ, ಪತ್ರಕರ್ತ ಜಿ.ಎನ್‌. ಮೋಹನ್‌ ಹಾಗೂ ಗ್ರಂಥಾಲಯ ಶಿಕ್ಷಣ ತಜ್ಞ ತೇಜಸ್ವಿ ಶಿವಾನಂದ್‌ ಇರಲಿದ್ದಾರೆ.

ಇದನ್ನೂ ಓದಿ | Bhashavidya Kannada: ಡಿ. 17ರಂದು ʼಕನ್ನಡದಲ್ಲಿ ಮಾತಾಡೋಣʼ ಆನ್‌ಲೈನ್‌ ಕಾರ್ಯಾಗಾರ

ಕಾರ್ಯಾಗಾರದ ಪ್ರಮುಖ ಧೈಯೋದ್ದೇಶಗಳು

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version