ಬೆಂಗಳೂರು: ೨೪ ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಸರಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸರಕಾರ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ, ಸೋಮವಾರ ಆದೇಶದ ಹೊರಡಿಸಿದೆ.
ಜುಲೈ ೧೨ರಂದು ರಾಜ್ಯ ಸರಕಾರ ಒಟ್ಟು 52 ನಿಗಮ ಮಂಡಳಿಗಳ ನೇಮಕಾತಿ ರದ್ದು ಪಡಿಸಿತ್ತು. ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಈ ನೇಮಕಗಳು ನಡೆದಿದ್ದವು. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರ ಆಯ್ಕೆಯನ್ನು ರದ್ದು ಮಾಡಲಾಗಿತ್ತು.
ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ, ಮಾಹಿತಿ ತಂತ್ರಜ್ಞಾನ ಇಲಾಖೆ, ಜಲಸಂಪನ್ಮೂಲ, ನಗರಾಭಿವೃದ್ಧಿ ಇಲಾಖೆ, ಇಂಧನ ಇಲಾಖೆ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸೇರಿದಂತೆ ನಿಗಮ ಮಂಡಳಿಗಳ ಮುಖ್ಯಕಾರ್ಯದರ್ಶಿ, ಅಧ್ಯಕ್ಷ, ಉಪಾಧ್ಯಕ್ಷ ನೇಮಕಾತಿ ರದ್ದು ಪಡಿಸಲಾಗಿತ್ತು.
ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರ ಪಟ್ಟಿ ಇಂತಿದೆ.
ಶ್ರೀ ದೇವೇಂದ್ರನಾಥ ಕೆ | ಕರ್ನಾಟಕ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮ |
ಚಂಗಾವರ ಮಾರಣ್ಣ | ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮ ನಿಯಮಿತ, ಅಧ್ಯಕ್ಷ |
ಎಂ.ಕೆ. ಶ್ರೀನಿವಾಸ್ (ಮಿರ್ಲೆ ಶ್ರೀನಿವಾಸ್‌ಗೌಡ) | ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು |
ಎಂ.ಕೆ ವಾಸುದೇವ್ | ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ, ಮತ್ತು ಮಾರುಕಟ್ಟೆ ನಿಗಮ |
ಎನ್.ಎಂ. ರವಿನಾರಾಯಣರೆಡ್ಡಿ | ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ |
ಚಂದ್ರಶೇಖರ್ ಕವಟಗಿ | ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ |
ಬಿ.ಸಿ. ನಾರಾಯಣ ಸ್ವಾಮಿ | ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ |
ಗೌತಮ್ ಗೌಡ ಎಂ | ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ |
ಮಣಿರಾಜ ಶೆಟ್ಟಿ | ಕರ್ನಾಟಕ ಗೇರು ಅಭಿವೃದ್ಧಿ ನಿಗಮ |
ಗೋವಿಂದ ಜಟ್ಟಪ್ಪ ನಾಯ್ಕ | ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣೆ ಸಮಿತಿ |
ಎಂ. ಶಿವಕುಮಾರ್ | ಕರ್ನಾಟಕ ಮೃಗಾಲಯ ಪ್ರಾಧಿಕಾರ ಮೈಸೂರು |
ಎನ್.ಎಂ. ರವಿ ಕಾಳಪ್ಪ | ಕರ್ನಾಟಕ ಜೀವ ವೈವಿಧ್ಯ ಮಂಡಳಿ |
ಎ.ಎ.ತೀರ್ಥರಾಮ | ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ |
ಧರ್ಮಣ್ಣ ದೊಡ್ಡಮನಿ | ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ |
ಎಂ.ಎಸ್. ಕರಿಗೌಡ್ರು | ಕರ್ನಾಟಕ ಮಾರ್ಕೆಟಿಂಗ್ ಕಮ್ಯುನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್ |
ರಘು ಕೌಟಿಲ್ಯ | ಕರ್ನಾಟಕ ಮೈಸೂರು ಪೇಂಟ್ ಮತ್ತು ವಾರ್ವಿನ್ ನಿಯಮಿತ, ಮೈಸೂರು |
ಎಂ. ಸರವಣ | ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ |
ಮಾರುತಿ ಮಲ್ಲಪ್ಪ ಅಷ್ಟಗಿ | ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ |
ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ | ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ |
ಕೆ.ಪಿ ವೆಂಕಟೇಶ್ | ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ |
ಕೊಲ್ಲಾ ಶೇಷಗಿರಿ ರಾವ್ | ಕರ್ನಾಟಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆ ಮುನಿರಾಬಾದ್ |
ಜಿ. ನಿಜಗುಣರಾಜು | ಕರ್ನಾಟಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಾವೇರಿ ಜಲಾನಯನ ಯೋಜನೆ ಮೈಸೂರು |
ಕೆ. ವಿ ನಾಗರಾಜ್ | ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ |
ಶಂಕರ ಬ. ಪಾಟೀಲ ಮುನ್ನೇನಕೊಪ್ಪ | ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ |
ರೇವಣ್ಣಪ್ಪ ಕೋಳಗಿ | ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಬೆಂಗಳೂರು |