ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್(Puneeth Rajkumar) ನೆನಪಿನಲ್ಲಿ ಆಯೋಜಿಸಲಾಗಿರುವ ‘ಅಪ್ಪು ಕಪ್ ಸೀಸನ್-2(Appu Cup Season 2) ಸ್ಯಾಂಡಲ್ವುಡ್(sandalwood) ಬ್ಯಾಡ್ಮಿಂಟನ್ ಲೀಗ್’ ಲೋಗೋವನ್ನು ಖ್ಯಾತ ಬ್ಯಾಡ್ಮಿಂಟನ್(badminton) ಆಟಗಾರ ಪ್ರಕಾಶ್ ಪಡುಕೋಣೆ(prakash padukone) ಇಂದು(ಬುಧವಾರ) ಅನಾವರಣಗೊಳಿಸಿದರು. ನಗರದಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಲೋಗೋ ಅನಾವರಣ ಮಾಡಿ ಆಟಗಾರರಿಗೆ ಶುಭಾಶಯ ಕೋರಿದರು.
ಪುನೀತ್ ರಾಜ್ಕುಮಾರ್ ನನಗೆ ವೈಯಕ್ತಿಕವಾಗಿ ತುಂಬಾ ಫ್ರೆಂಡ್ಲಿ ಆಗಿದ್ದವರು. ಐದಾರು ವರ್ಷಗಳ ಹಿಂದೆ ನಾವೊಂದು ಇವೆಂಟ್ ಮಾಡಿದ್ದೆವು. ಒಂದೇ ಒಂದು ಫೋನ್ ಕಾಲ್ಗೆ ಬಂದು ನಮ್ಮ ಜತೆ ಮ್ಯಾಚ್ ಆಡಿದ್ದರು. ಚಿತ್ರರಂಗದಲ್ಲಿ ತುಂಬಾ ಜನ ಬ್ಯಾಡ್ಮಿಂಟನ್ ಆಡುತ್ತಾರೆ ಎನ್ನುವುದನ್ನು ಕೇಳಿ ಖುಷಿಯಾಗಿದೆ. ಅಪ್ಪು ಕಪ್ ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಹೀಗೇ ಮುಂದುವರಿಯಲಿ ಎಂದು ಪ್ರಕಾಶ್ ಪಡುಕೋಣೆ ಹಾರೈಸಿದರು.
ಇದನ್ನೂ ಓದಿ Puneeth Rajkumar: ಎತ್ತರದಲ್ಲಿದ್ದೂ ಹತ್ತಿರವಿದ್ದ ಅಭಿಜಾತ ಕಲಾವಿದ ಪುನೀತ್ ರಾಜಕುಮಾರ್
ಕನ್ನಡ ಚಿತ್ರಕಲಾವಿದರು, ತಂತ್ರಜ್ಞರು ಹಾಗೂ ಮಾಧ್ಯಮದವರು ಆಡಲಿರುವ ಈ ಪಂದ್ಯಾವಳಿ ಆಗಸ್ಟ್ ತಿಂಗಳಾಂತ್ಯದಲ್ಲಿ ಶುರುವಾಗಲಿದೆ. ಕಳೆದ ಬಾರಿ ಒಟ್ಟು ಎಂಟು ತಂಡಗಳು ಭಾಗಿಯಾಗಿದ್ದವು. ಪ್ರಿಯಾಂಕಾ ಉಪೇಂದ್ರ, ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್ ತಂಡದ ಪೈಕಿ ಸೃಜನ್ ಲೋಕೇಶ್ ನೇತೃತ್ವದ ರಾಜಕುಮಾರ್ ಕಿಂಗ್ಸ್ ಕಳೆದ ಬಾರಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತಷ್ಟು ತಾರೆಯರು ಪಾಲ್ಗೊಳ್ಳುವ ಮೂಲಕ ಅಪ್ಪು ಕಪ್ ಸೀಸನ್-2 ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ ಮೆರುಗು ಹೆಚ್ಚಿಸಲಿದ್ದಾರೆ.