Site icon Vistara News

Puneeth Rajkumar: ಶ್ರೀರಂಗಪಟ್ಟಣದಲ್ಲಿ ಅಪ್ಪು ಅಭಿಮಾನಿಗಳ ʼಗಂಧದ ಗುಡಿʼ ಹೋಟೆಲ್‌ ಶುರು

Hotel Gandhada Gudi in Shrirangapattana

ಬೆಂಗಳೂರು: ಶ್ರೀರಂಗಪಟ್ಟಣದಲ್ಲೊಂದು “ಗಂಧದ ಗುಡಿ” (Gandhada Gudi) ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ಇಲ್ಲಿ ಹೋಗುತ್ತಿದ್ದಂತೆ ಆನೆಯೊಂದು ಸ್ವಾಗತ ನೀಡುತ್ತದೆ. ಒಳಗೆಲ್ಲ ಕಾಡು ಪ್ರಾಣಿಗಳು ಕಾಣುತ್ತವೆ. ಅದಕ್ಕಿಂತ ಮುಂಚೆ ಟ್ರಕ್ಕಿಂಗ್‌ ಸೂಟ್‌ನಲ್ಲಿ ಕೋಟಿ ಅಭಿಮಾನಿಗಳ “ಅಪ್ಪು” ಕಾಣಸಿಗುತ್ತಾರೆ. ಅಂದಹಾಗೆ ಇದು ನೂತನ ಹೋಟೆಲ್‌ ಆಗಿದ್ದು, ಮಂಗಳವಾರ ಪುನೀತ್‌ ರಾಜಕುಮಾರ್‌ (Puneeth Rajkumar) ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಉದ್ಘಾಟನೆ ಮಾಡಿದರು.

ಪವರ್‌ಸ್ಟಾರ್​ ಪುನೀತ್​ ರಾಜ್​ಕುಮಾರ್​ ಪ್ರೇರಣೆಯಿಂದ ಅವರ ಐವರು ಅಭಿಮಾನಿಗಳು ಹೋಟೆಲ್ ಉದ್ಯಮವನ್ನು ಆರಂಭಿಸಿದ್ದಾರೆ. ಇದಕ್ಕೆ “ಗಂಧದಗುಡಿ” ಹೆಸರನ್ನು ನಾಮಕರಣ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಪ್ರಕೃತಿಯ ಮರು ಸೃಷ್ಟಿಗೆ ಶ್ರಮ ವಹಿಸಿದ್ದಾರೆ.

ಶ್ರೀರಂಗಪಟ್ಟಣದ ತಾಲೂಕಿನ ದರಸಗುಪ್ಪೆ ಗ್ರಾಮದ ಸಮೀಪ ಈಗ ನೂತನವಾಗಿ “ಗಂಧದಗುಡಿ” ಹೋಟೆಲ್ ಆರಂಭವಾಗಿದೆ. ಅಪ್ಪು ಅಭಿಮಾನಿಯಾಗಿರುವ ಸುಂದರ್, ಅವಿನಾಶ್, ಶರತ್, ಸುಮನ್, ಪುನೀತ್ ಎಂಬುವವರು ಗಂಧದಗುಡಿ ಸಸ್ಯಾಹಾರಿ ಹೋಟೆಲ್ ಅ​ನ್ನು ಆರಂಭಿಸಿದ್ದಾರೆ.

ಹೆಸರಿಗೆ ತಕ್ಕಂತೆ ಹೋಟೆಲ್‌ ನಿರ್ಮಾಣ

“ಗುಂಧದಗುಡಿ”ಯು ಅಪ್ಪು ಅವರ ದಶಕದ ಕನಸಿನ ಸಿನಿಮಾ ಆಗಿತ್ತು. ಇದರಲ್ಲಿ ಪ್ರಕೃತಿ ಸೌಂದರ್ಯ, ಜೀವ ಸಂಕುಲಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಡಲಾಗಿತ್ತು. ಆದರೆ, ಈ ಸಿನಿಮಾ ಬಿಡುಗಡೆಗೆ ಮುಂಚೆಯೇ ಅವರು ನಿಧನರಾಗಿದ್ದರು. ಆದರೆ, ಈ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಮೆಚ್ಚುಗೆ ಸಿಕ್ಕಿತ್ತು. ಈಗ ಚಿತ್ರದ ಹೆಸರಿಗೆ ತಕ್ಕ ಹಾಗೆ ಹೋಟೆಲ್ ಅನ್ನು ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: ಹಲೋ ಸಚಿವರೇ: 1978ಕ್ಕಿಂತ ಹಿಂದಿನ ಅರಣ್ಯ ಒತ್ತುವರಿದಾರರಿಗೆ ಈಶ್ವರ ಖಂಡ್ರೆ ಅಭಯ, ಕಸ್ತೂರಿ ರಂಗನ್‌ ವರದಿ ಆತಂಕ ಬೇಡ

ಈ ಹೋಟೆಲ್‌ನ ಒಳಾಂಗಣ ಹಾಗೂ ಹೊರಾಂಗಣವನ್ನು ನೋಡಿದರೆ ಗ್ರಾಹಕರಿಗೆ ಕಾಡಿಗೆ ಬಂದ ಅನುಭವವನ್ನು ಕೊಡುತ್ತದೆ ಎಂದು ಈ ಹೋಟೆಲ್‌ ಉದ್ಯಮಿಗಳು ಹೇಳಿಕೊಂಡಿದ್ದಾರೆ. ಈ ಹೋಟೆಲ್‌ ಅನ್ನು ಮಂಗಳವಾರ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಉದ್ಘಾಟನೆ ಮಾಡಿದರು. ಜತೆಗೆ ಅಪ್ಪು ಪ್ರತಿಮೆಯನ್ನೂ ಅನಾವರಣಗೊಳಿಸಿದರು.

ಅಪ್ಪು ಜತೆ ಒಂದು ಸೆಲ್ಫೀ

ಇನ್ನು ಈ ಹೋಟೆಲ್‌ಗೆ ಜನರೂ ಸಹ ಬರುತ್ತಿದ್ದು, ಬಂದವರು ಪುನೀತ್‌ ರಾಜಕುಮಾರ್‌ ಅವರ ಪ್ರತಿಮೆ ಬಳಿ ತಮ್ಮದೊಂದು ಸೆಲ್ಫೀಯನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕೆಲವರು ಪ್ರತಿಮೆ ಅಕ್ಕ-ಪಕ್ಕ ನಿಂತು ಗ್ರೂಪ್‌ ಫೋಟೊವನ್ನು ತೆಗೆಸಿಕೊಳ್ಳುತ್ತಿದ್ದಾರೆ.

Exit mobile version