Site icon Vistara News

ಪತಿ, ಹಿರಿಯ ಪುತ್ರನ ಸಮಾಧಿ ಪಕ್ಕದಲ್ಲೇ ನಟ ಅರ್ಜುನ್ ಸರ್ಜಾ ತಾಯಿ ಅಂತ್ಯಸಂಸ್ಕಾರ

ಲಕ್ಷ್ಮೀದೇವಮ್ಮ ವಿಧಿವಶ

ತುಮಕೂರು: ನಟ ಅರ್ಜುನ್‌ ಸರ್ಜಾ ಅವರ ತಾಯಿ ಲಕ್ಷ್ಮೀದೇವಮ್ಮ ಶನಿವಾರ (ಜುಲೈ 23) ವಿಧಿವಶರಾಗಿದ್ದರು. ಮೃತರ ಅಂತ್ಯಸಂಸ್ಕಾರಕ್ಕೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸ್ವಗ್ರಾಮ ಜಕ್ಕೇನಹಳ್ಳಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಗ್ರಾಮದಲ್ಲಿರುವ ಕುಟುಂಬಸ್ಥರಿಂದ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆಗಳು ಆಗುತ್ತಿವೆ. ಬೆಂಗಳೂರಿನಿಂದ ಜಕ್ಕೇನಹಳ್ಳಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಎರಡು ಗಂಟೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ದಿವಂಗತ ನಟ ಶಕ್ತಿಪ್ರಸಾದ್ ಮತ್ತು ಹಿರಿಯ ಮಗನಾದ ಕಿಶೋರ್ ಸರ್ಜಾ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದೀಗ ಅಂತ್ಯಕ್ರಿಯೆ ಸ್ಥಳಕ್ಕೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ | ನಟ ಅರ್ಜುನ್ ಸರ್ಜಾ ತಾಯಿ ಲಕ್ಷ್ಮಿದೇವಮ್ಮ ವಿಧಿವಶ

Exit mobile version