ಹೊಸಪೇಟೆ: 2021ರಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ (House theft case) ಸಂಬಂಧಿಸಿ, ಪಟ್ಟಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು (accused) ಬಂಧಿಸಿ, ಅವರಿಂದ 3.80 ಲಕ್ಷ ರೂ ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು (Gold jewellery) ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Weather Report : 50 ಕಿ.ಮೀ ವೇಗದಲ್ಲಿ ಬೀಸಲಿದೆ ಬಿರುಗಾಳಿ; ಕರಾವಳಿಗೆ ಮಳೆ ಅಲರ್ಟ್
ಹೊಸಪೇಟೆಯ ಮೇನ್ ಬಜಾರ್‌ನಲ್ಲಿರುವ ಚಿನ್ನದ ಅಂಗಡಿಯ ಮುಂದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಆರೋಪಿಗಳಾದ ಮಂಜುನಾಥ, ಕಾರ್ತಿಕ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು, 2021 ಡಿಸೆಂಬರ್ 13ರಂದು ನಗರದ ಕಂಚಗಾರ ಪೇಟೆಯಲ್ಲಿ ಮನೆಯೊಂದರ ಕಳ್ಳತನ ಮಾಡಿದ ವಿಷಯ ಬಹಿರಂಗಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿಶ್ವನಾಥ್ ಕುಲಕರ್ಣಿ, ಸಿಪಿಐ ಬಾಳನಗೌಡ, ಪಿಎಸ್ಐ ಮುನಿರತ್ನಂ, ಎಎಸ್ಐಗಳಾದ ವೆಂಕಟೇಶ, ಸುರೇಶ್, ಪೊಲೀಸ್ ಸಿಬ್ಬಂದಿಗಳಾದ ಫಕ್ಕೀರಪ್ಪ, ಮಲಕಾಜಿ, ನಾಗೇಂದ್ರ, ರಾಘವೇಂದ್ರ, ಲಿಂಗರಾಜ್, ಪರಶು ನಾಯಕ್, ಶ್ರೀರಾಮ್ ರೆಡ್ಡಿ, ಕೊಟ್ರೇಶ್, ದುರ್ಗಿಬಾಯಿ ಇದ್ದರು. ಸಿಬ್ಬಂದಿ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಶ್ಲಾಘಿಸಿದ್ದಾರೆ.