Site icon Vistara News

Deer killing | ಬನವಾಸಿಯಲ್ಲಿ ಇಬ್ಬರು ಆರೋಪಿಗಳ ಸೆರೆ: ತಲೆಮರೆಸಿಕೊಂಡ ಮತ್ತೊಬ್ಬನಿಗೆ ಶೋಧ

ಜಿಂಕೆ ಹತ್ಯೆ

ಶಿರಸಿ: ಬನವಾಸಿ ಅರಣ್ಯ ವಲಯದ ಕಾನಕೊಪ್ಪ ಗ್ರಾಮದಲ್ಲಿ ಜಿಂಕೆ ಹತ್ಯೆ ಮಾಡಿರುವ ಇಬ್ಬರು ಆರೋಪಿಗಳನ್ನು ಬನವಾಸಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬನವಾಸಿ ವಲಯ ಅರಣ್ಯಾಧಿಕಾರಿಗಳು, ಪರಮೇಶ್ವರ ಮಾದೇವ ಮಡಿವಾಳ, ಶಿವಪ್ಪ ಬಸ್ಯಾ ಗೌಡ ಎಂಬಿಬ್ಬರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಶಿವರಾಮ ತಿಮ್ಮಾ ನಾಯ್ಕ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ. ಹತ್ಯೆ ಮಾಡಿದ್ದ ಜಿಂಕೆಯ ಮಾಂಸವನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಜಿ.ಆರ್. ಮಾರ್ಗದರ್ಶನದಲ್ಲಿ ಸಹಾಯಕ
ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಅಲಗೂರ್, ಬನವಾಸಿ ವಲಯ ಅರಣ್ಯಾಧಿಕಾರಿ ಉಷಾ ಆರ್. ಕಬ್ಬೇರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ | ಲಕ್ಷಾಂತರ ರೂಪಾಯಿ ಮೌಲ್ಯದ 8 ಹುಲಿ ಉಗುರು ವಶ; ಸೆನ್ (CEN) ಪೊಲೀಸರ ಭರ್ಜರಿ ಕಾರ್ಯಾಚರಣೆ

Exit mobile version