ಕಾರವಾರ: ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳನ್ನು (Arts Training Camp) ಗುರುತಿಸಿ ಪ್ರೋತ್ಸಾಹಿಸುವುದು ಅತೀ ಅಗತ್ಯವಾಗಿದೆ ಎಂದು ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ್ ಹೇಳಿದರು.
ನಗರದ ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ, ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳ ತರಬೇತಿ ಶಿಬಿರ ಕಾರ್ಯಕ್ರಮವನ್ನು ಡೋಲು ಬಾರಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಆ ಕಾಲದ ಹಳೆಯ ಕಸೂತಿ ಕಲೆ, ಜಾನಪದ ಕಲೆ ಹಾಗೂ ವಾದ್ಯ ಇವೆಲ್ಲವುಗಳನ್ನೂ ನಮ್ಮ ಹಿರಿಯರು ನಮಗೆ ತಲತಲಾಂತರದಿಂದ ಉಡುಗೊರೆಯಾಗಿ ನೀಡಿದ್ದು. ಇಂತಹ ಕಲೆಗಳನ್ನು ಕಾಪಾಡಿಕೊಂಡು, ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂತಹ ಕಲೆಗಳನ್ನು ಕಾಪಾಡಿದರೆ ಮಾತ್ರ ನಮ್ಮ ಈಗಿನ ಅಥವಾ ಮುಂದಿನ ಪೀಳಿಗೆಗೆ ಈ ಕಲೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ” ಎಂದರು.
ಇದನ್ನೂ ಓದಿ: BEL Recruitment 2023 : ಬಿಇಎಲ್‌ನಲ್ಲಿ 110 ಎಂಜಿನಿಯರಿಂಗ್ ಹುದ್ದೆಗಳಿಗೆ ನೇಮಕ; ಬೆಂಗಳೂರಿನಲ್ಲಿಯೂ ಇದೆ ಉದ್ಯೋಗ
“ಈಗಿನ ಸಂಸ್ಕೃತಿಗೆ ಹೊಂದಿಕೊಂಡಿರುವಂತೆ ನಮ್ಮ ಹಿಂದಿನ ಸಂಸ್ಕೃತಿಯನ್ನು ಸಹ ನಾವು ಅಳವಡಿಸಿಕೊಂಡು ಸಾಗುವ ಅಗತ್ಯವಿದೆ. ಜಿಲ್ಲೆಯಲ್ಲಿ ಹಲವಾರು ಸಂಸ್ಕೃತಿಯ ಜಾನಪದ ನೃತ್ಯಗಳು, ಲಾವಣಿಗಳು, ಬೇಡರ ವೇಷ, ಹಾಲಕ್ಕಿ ತಾರ್ಲೆ ನೃತ್ಯ, ಧಮಾಮಿ ನೃತ್ಯ, ಗುಮಟೆಪಾಂಗ್ ಹೀಗೆ ಹಲವಾರು ಕಲೆಗಳು ಈ ಪ್ರದೇಶದಲ್ಲಿ ಕಾಣುತ್ತಿರುವುದು ನಮಗೆ ಹೆಮ್ಮೆ ತರುವಂತಹ ವಿಷಯವಾಗಿದೆ. ಈ ರೀತಿಯ ಕಲೆಗಳಿಂದ ನಮ್ಮ ಪ್ರದೇಶದ ಸಂಸ್ಕೃತಿಯನ್ನು ಕಾಣಲು ನಮಗೆ ಸಾಧ್ಯವಾಗುತ್ತದೆ” ಎಂದರು.
ಇದನ್ನೂ ಓದಿ: Lokayukta raid: ಮುಖ್ಯಮಂತ್ರಿಯವರೇ, ನಿಮಗೆ ಇದಕ್ಕಿಂತ ಸಾಕ್ಷಿ ಬೇಕೇ?; ಕೂಡಲೇ ರಾಜೀನಾಮೆ ಕೊಟ್ಟು ಹೊರಡಿ: ಸಿದ್ದರಾಮಯ್ಯ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಕೆ.ಎಮ್. ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸ್ವಾಗತ ಕೋರಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾವಿದೆ ಮೇರಿ ಗರಿಬಾಚೆ, ಜೂಲಿಯಾನ ಫರ್ನಾಂಡೀಸ್, ವಿಷ್ಣು ರಾಣೆ, ಫಕ್ಕೀರಪ್ಪ ಭಜಂತ್ರಿ, ಸೂರ್ಯಪ್ರಕಾಶ ಬಶೆಟ್ಟಿ, ಉದಯ ಬಶೆಟ್ಟಿ, ಪದ್ಮಾವತಿ ಗೌಡ, ಶಿಕ್ಷಕ ಮಹದೇವ ರಾಣೆ ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ: Indian Super League: ವಿವಾದಾತ್ಮಕ ಗೋಲು; ಮೈದಾನ ತೊರೆದ ಕೇರಳ ತಂಡ