Site icon Vistara News

Ashwini Sparsha | ಹೋಮಿಯೋಪಥಿ ಬ್ಯುಸಿನೆಸ್‌ ಆಗಬಾರದು: ನಾಡೋಜ ಡಾ. ಬಿ.ಟಿ. ರುದ್ರೇಶ್‌

ಬೆಂಗಳೂರು: ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಡೋಜ ಡಾ. ಬಿ.ಟಿ. ರುದ್ರೇಶ್ ವಿರಚಿತ “ಅಶ್ವಿನಿ ಸ್ಪರ್ಶ” ಕೃತಿ ಲೋಕಾರ್ಪಣೆ (Ashwini Sparsha) ಮಾಡಲಾಯಿತು. ಹೋಮಿಯೋಪಥಿ ಫೌಂಡೇಶನ್ ಮತ್ತು ಮಡಿಲು ಪ್ರಕಾಶನ ಬೆಂಗಳೂರು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅಶ್ವಿನಿ ಸ್ಪರ್ಶ ಹೋಮಿಯೋಪಥಿಯ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಡಾ.ಬಿ.ಟಿ.ರುದ್ರೇಶ್​, ಹೋಮಿಯೋಪಥಿ ಈಗ ಬ್ಯುಸಿನೆಸ್​ ಆಗುತ್ತಿದೆ. ಅದು ಆಗದಿರಲಿ ಎನ್ನುವ ಉದ್ದೇಶದಿಂದ ಈ ಪುಸ್ತಕವನ್ನು ಬರೆದಿದ್ದೇನೆ. ಹೋಮಿಯೋಪಥಿಯ ಬಗ್ಗೆ ಬರೆದಿರುವ ಈ ಪುಸ್ತಕ ಜನರಿಗೆ ತುಂಬಾ ಉಪಯುಕ್ತವಾಗಲಿದೆ. ಇದು ಯಾವುದೋ ಕತೆಯಲ್ಲ, ನಿಜ ಜೀವನದ ಘಟನೆಗಳನ್ನು ಇದರಲ್ಲಿ ಬರೆಯಲಾಗಿದೆ ಎಂದರು.

ಬಳಿಕ ನಟ ಸುಚೇಂದ್ರ ಪ್ರಸಾದ್​ ಮಾತನಾಡಿ, ನಾಡೋಜ ಎಂಬ ಬಿರುದು ರುದ್ರೇಶ್​ರಿಗೆ ಒಪ್ಪುವಂತದ್ದು, ಅವರು ಯಾವುದೇ ಸೇವೆ ಮಾಡಿದರೂ ಮಾಡಿದೆ ಎಂದು ಹೇಳಿಕೊಳ್ಳದೇ ಇರುವುದು ನಿಜಕ್ಕೂ ಶ್ಲಾಘನೀಯ. ಅಲ್ಲದೆ ಹೋಮಿಯೋಪಥಿಯನ್ನು ದಂಧೆ ಮಾಡಬಾರದು ಎಂಬ ವೈದ್ಯರ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹೋಮಿಯೋಪಥಿ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಡಾ. ರಾಮ್ ಜೀ ಸಿಂಗ್ ಆಗಮಿಸಿದ್ದರು. ಡಾ. ಗುರುರಾಜ್ ಕರಜಗಿ “ಅವರಿಂದ “ಅಶ್ವಿನಿ ಸ್ಪರ್ಶ” ಪುಸ್ತಕದ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಡಾ.ಎನ್.ಆರ್. ಶ್ರೀವತ್ಸನ್, ನಟಿ ಗಿರಿಜಾ ಲೋಕೇಶ್​, ಬರಹಗಾರ ಜೋಗಿ ಸೇರಿದಂತೆ ಇತರರು ಭಾಗಿಯಾಗಿದರು.

ಇದನ್ನೂ ಓದಿ | Makar Sankranti 2023 | ಸಂಕ್ರಾಂತಿ ಹಬ್ಬದಂದು ತರಗತಿ ನಡೆಸಿದ ಕ್ರೈಸ್ಟ್ ಸಿಎಂಐ ಪಬ್ಲಿಕ್ ಶಾಲೆ; ಹಿಂದು ಜಾಗರಣಾ ವೇದಿಕೆ ಕಿಡಿ

Exit mobile version