Site icon Vistara News

Assault Case : ಕುಡಿದ ಅಮಲಿನಲ್ಲಿ ಕಿತ್ತಾಟ; ಇಬ್ಬರಿಗೆ ಚಾಕು ಇರಿದ ಗೆಳೆಯ

rangaswamy and basavaraju

ಹಾಸನ: ಜಿಲ್ಲೆಯ ಅರಸೀಕೆರೆ ಪಟ್ಟಣದ ಕಂತೇನಹಳ್ಳಿ ಕೆರೆ ಬಳಿ ಮೂವರು ಸ್ನೇಹಿತರು ಕುಡಿದು ದಾಂಧಲೆ ಮಾಡಿದ್ದಾರೆ. ಗಂಗಾಧರ್ (50) ಎಂಬಾತ ರಂಗಸ್ವಾಮಿ ಹಾಗೂ ಬಸವರಾಜು ಎಂಬುವವರಿಗೆ ಚಾಕು (Assault Case) ಇರಿದಿದ್ದಾನೆ.

ಗಂಗಾಧರ್‌, ರಂಗಸ್ವಾಮಿ, ಬಸವರಾಜು ಈ ಮೂವರು ಸ್ನೇಹಿತರು ಕಂತೇನಹಳ್ಳಿ ಕೆರೆ ಸಮೀಪ ಕುಳಿತು ಕಿಕ್‌ ಏರಿಸಿಕೊಳ್ಳುತ್ತಿದ್ದರು. ಎಣ್ಣೆ ಒಳಗೆ ಹೋಗುತ್ತಿದ್ದಂತೆ ಅಮಲಿನಲ್ಲಿ ತೇಲಾಡುತ್ತಿದ್ದರು. ಮೂವರು ಸ್ನೇಹಿತರ ನಡುವೆ ಕುಡಿಯುವ ಎಣ್ಣೆಗೆ ದುಡ್ಡು ಕೊಡುವ‌ ವಿಚಾರದಲ್ಲಿ ಗಲಾಟೆ ಶುರುವಾಗಿದೆ.

ಕ್ಷಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡ ಮೂವರು ಸಿಟ್ಟಿನಲ್ಲಿ ಗಂಗಾಧರ್‌ ತನ್ನಿಬ್ಬರು ಸ್ನೇಹಿತರಿಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡಿರುವ ಇಬ್ಬರಿಗೂ ಹಾಸನದ ಹಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರಸೀಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಗಂಗಾಧರ್‌ನನ್ನು ಬಂಧಿಸಲಾಗಿದೆ.

ಇ-ಸ್ವತ್ತು ವಿಳಂಬಕ್ಕೆ ಗಲಾಟೆ

ಚಾಮರಾಜನಗರ ನಗರಸಭೆಯಲ್ಲಿ ಗಲಾಟೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಗಲಾಟೆ ಜೋರಾಗಿತ್ತು. ಇ-ಸ್ವತ್ತು ಮಾಡಿಕೊಡಲು ವಿಳಂಬ ಮಾಡುತ್ತುದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇಂಟರ್ ನೆಟ್ ಸಮಸ್ಯೆ, ಸಿಬ್ಬಂದಿ ಕೊರತೆ ಹೀಗೆ ಇಲ್ಲಸಲ್ಲದ ಸಬೂಬು ಹೇಳುತ್ತಾರೆ. ನಗರಸಭೆಯಲ್ಲಿ ಯಾವ ಕೆಲಸಗಳು ಆಗುತ್ತಿಲ್ಲ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಗಲಾಟೆಯು ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು . ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ನಗರಸಭೆ ಆಯುಕ್ತ ರಾಮದಾಸ್ ಪರದಾಡಿದರು.

ಹೆಂಡ್ತಿ ಕತ್ತು ಹಿಸುಕಿ ಕೊಲೆ ಮಾಡಿದ ಕುಡುಕ ಗಂಡ

ಹುಬ್ಬಳ್ಳಿ: ಹುಬ್ಬಳ್ಳಿಯ (Hubballi News) ರಾಯನಾಳದಲ್ಲಿ ಪತ್ನಿಯ ಕತ್ತು ಹಿಸುಕಿ ಪತಿಯೊಬ್ಬ ಹತ್ಯೆ (Murder case) ಮಾಡಿದ್ದಾನೆ. ದೀಪಾ ಹತ್ಯೆಯಾದವರು. ಪ್ರಕಾಶ್‌ ಎಂಬುವವನು ಆರೋಪಿ ಆಗಿದ್ದಾನೆ.

ಪ್ರಕಾಶ್‌ ಕುಡಿತದ ಚಟವನ್ನು ಹೊಂದಿದ್ದ. ನಿತ್ಯವು ಕುಡಿದು ಬಂದು ಆಗಾಗ ಪತ್ನಿ‌ ದೀಪಾ ಜತೆ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದ. ಇದೆ ರೀತಿ ಗುರುವಾರವು ಇಬ್ಬರ ನಡುವೆ ಜಗಳ ಶುರುವಾಗಿದ್ದು, ವಿಕೋಪಕ್ಕೆ ತಿರುಗಿದೆ. ಬಳಿಕ ಸಿಟ್ಟಿಗೆದ್ದ ಪ್ರಕಾಶ್‌, ಪತ್ನಿಯ ಕತ್ತು ಹಿಸುಕಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಹಳೇಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕಾಶ್‌ ಕುಡಿದು ಬಂದು ದೀಪಾಳನ್ನು ಹತ್ಯೆ ಮಾಡಿದ್ದಾನೆ ಎಂದು ಮೃತ ಪೋಷಕರು ಆರೋಪಿಸಿದ್ದಾರೆ. ಸದ್ಯ ಕೊಲೆ ಮಾಡಿ ಪರಾರಿ ಆಗಿರುವ ಆರೋಪಿ ಪ್ರಕಾಶ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version