ಕೋಲಾರ: ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಂಡಿದ್ದನ್ನು ತೆರವು ಮಾಡಲು ಮುಂದಾದ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ (Assault Case) ನಡೆಸಿದ ಘಟನೆ ನಾಗಲಾಪುರ ಗ್ರಾಮದಲ್ಲಿ ನಡೆದಿದೆ. ನಾಗಲಾಪುರ ಗ್ರಾಮದ ನಾಗರಾಜು ಎಂಬುವವರು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ವಶಪಡಿಸಿಕೊಳ್ಳಲು ಬಂದವರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.
ಎರಡು ಗುಂಪುಗಳ ಮಧ್ಯೆ ನಡೆದ ನೂಕಾಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಹಲ್ಲೆ ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಲು ಬಂದವರನ್ನು ವೇಮಗಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಲಾರದ ನಾಗಲಾಪುರ ಗ್ರಾಮದ ನಾಗರಾಜು ಕುಟುಂಬದವರು ಸಾಮಾಜಿಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮೂರು ಎಕರೆಗೂ ಅಧಿಕ ಭೂ ಒತ್ತುವರಿ ಮಾಡಿಕೊಂಡಿರುವುದು ಘಟನೆಗೆ ಮುಖ್ಯ ಕಾರಣವಾಗಿದೆ. ಈ ಬಗ್ಗೆ ಹಲವು ಬಾರಿ ಅರಣ್ಯ ಸಿಬ್ಬಂದಿ ಎಚ್ಚರಿಕೆ ನೀಡಿ ತೆರವು ಮಾಡಲು ಸೂಚಿಸಿದ್ದರು. ಆದರೆ ಯಾವುದಕ್ಕೂ ಜಗ್ಗದ ರೈತ ಕುಟುಂಬ ಸಾಗುವಳಿ ಮಾಡಲು ಮುಂದಾಗಿದ್ದಾರೆ.
ಹೀಗಾಗಿ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ಒತ್ತುವರಿ ತೆರವು ಕಾರ್ಯಾಚರಣೆಗೆ ಬುಧವಾರ ಮುಂದಾಗಿದ್ದರು. ಈ ವೇಳೆ ಅಡ್ಡಿಪಡಿಸಲು ಮುಂದಾದ ರೈತ ಕುಟುಂಬ ನಿಂದಿಸುತ್ತಾ, ಮಾತಿನ ಚಕಮಕಿ ನಡೆದಿದೆ. ಆಗ ಒತ್ತುವರಿ ತೆರವಿಗೆ ಮುಂದಾದ ಅರಣ್ಯ ಸಿಬ್ಬಂದಿಯೊಂದಿಗೆ ನೂಕಾಟ ತಳ್ಳಾಟವಾಗಿದ್ದು, ಗಾಯಗೊಂಡಿದ್ದಾರೆ. ಇನ್ನು ಈ ಗದ್ದಲ ಗಲಾಟೆಯ ನಡುವೆಯು ಅಕ್ರಮ ಜಮೀನು ಒತ್ತುವರಿ ತೆರವು ಮಾಡಿ ಅರಣ್ಯ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ | Fire Accident | ಬಳ್ಳಾರಿಯ ಎಟಿಎಂನೊಳಗೆ ದಟ್ಟ ಹೊಗೆ; ವಿಜಯಪುರದ ಹೋಟೆಲ್‌ನಲ್ಲಿ ಆಕಸ್ಮಿಕ ಬೆಂಕಿ