Site icon Vistara News

Assault Case : ಹೆಂಡ್ತಿಗೆ ಹಲ್ಲೆ ಮಾಡುವುದನ್ನು ಕಂಡ ಗಂಡನಿಗೆ ಹಾರ್ಟ್ ಅಟ್ಯಾಕ್!

Heart Attack and youth

In Six Months, 80% Of Heart Attack Deaths In 11-25 Age Group In Gujarat

ಬೆಂಗಳೂರು: ಇಲ್ಲಿನ ಚಂದ್ರಲೇಔಟ್‌ನ ಗಂಗೊಂಡನಹಳ್ಳಿಯಲ್ಲಿ ಅಣ್ಣ-ತಮ್ಮಂದಿರು ಮಹಿಳೆಗೆ ಮಚ್ಚಿನಿಂದ ಹಲ್ಲೆ (Assault Case) ಮಾಡಿದ್ದಾರೆ. ಇದನ್ನೂ ಕಂಡ ಮಹಿಳೆಯ ಪತಿಗೆ ಹೃದಯಾಘಾತವಾಗಿ (Heart Attack) ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.ಮುದಾಸೀರ್ ಖಾನ್ ಮೃತ ದುರ್ದೈವಿ.

ಮುದಾಸೀರ್‌ ಎಂಬುವರ ಪತ್ನಿ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಪತ್ನಿಗೆ ಮಚ್ಚಿನಿಂದ ಹಲ್ಲೆ ಮಾಡೋದನ್ನು ನೋಡಿ ಆಘಾತಕ್ಕೆ ಒಳಗಾದ ಮುದಾಸೀರ್ ಖಾನ್‌ಗೆ ಹಾರ್ಟ್ ಅಟ್ಯಾಕ್ ಆಗಿದೆ. ಕುಸಿದು ಬಿದ್ದ ಮುದಾಸೀರ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ವಹೀದ್ ಆಹ್ಮದ್ ಎಂಬಾತ ಮುದಾಸೀರ್ ಖಾನ್ ಪತ್ನಿಯ ನಡತೆ ಬಗ್ಗೆ ಮಾತನಾಡಿದ್ದ. ಈ ಬಗ್ಗೆ ಪ್ರಶ್ನಿಸಲೆಂದು ವಹೀದ್‌ ಆಹ್ಮದ್‌ನ ಅಣ್ಣ ಮತೀನ್‌ ಬಳಿ ಮಾತುಕತೆಗೆ ದಂಪತಿ ಬಂದಿದ್ದರು. ಈ ವೇಳೆ ಮುದಾಸೀರ್‌ ಪತ್ನಿ ಹಾಗೂ ವಹೀದ್ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಮಹಿಳೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಇದನ್ನು ಕಣ್ಣಾರೆ ಕಂಡ ಮುದಾಸೀರ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸದ್ಯ ಈ ಪ್ರಕರಣ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಮಹಿಳೆ ದೂರು ದಾಖಲಿಸಿದ್ದಾರೆ. ಮಹಿಳೆ ಮೇಲಿನ ಹಲ್ಲೆ ಸಂಬಂಧ 307 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ವಹೀದ್ ಆಹ್ಮದ್ ಹಾಗೂ ಆತನ ಅಣ್ಣ ಮತೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Murder Case : ಕುಡುಕ ಗಂಡನಿಗೆ ಚಟ್ಟ ಕಟ್ಟಿದ್ದಳು; ಸಹಜ ಸಾವಿನ ಕತೆ ಕಟ್ಟಿ ಬಂಧಿಯಾದಳು!

ಬಸ್‌ನಲ್ಲೇ ಸ್ತಬ್ಧವಾಯ್ತು ಪ್ರಯಾಣಿಕನ ಹೃದಯ

ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೂತಲ್ಲೇ ಮೃತ್ಯು ಆವರಿಸುತ್ತಿದೆ. ಸದ್ಯ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಹೃದಯಾಘಾತದಿಂದ ಮೃತಪಟ್ಟ ಸುರೇಶ್‌

ಮೈಸೂರಿನ ನಂಜನಗೂಡು ತಾಲೂಕಿನ ವೀರದೇವನಪುರ ಗ್ರಾಮದಲ್ಲಿ ನಡೆದಿದೆ. ಚುಂಚನಹಳ್ಳಿ ಗ್ರಾಮದ ಸುರೇಶ್ (50) ಹೃದಯಾಘಾತ ಮೃತಪಟ್ಟ ಪ್ರಯಾಣಿಕ. ನಂಜನಗೂಡಿನಿಂದ ಚುಂಚನಹಳ್ಳಿ ಗ್ರಾಮಕ್ಕೆ ಪ್ರಯಾಣ ಮಾಡುವಾಗ ಸುರೇಶ್‌ಗೆ ಕುಳಿತಲೇ ಹೃದಯಘಾತವಾಗಿದೆ. ಕೊನೆ ನಿಲ್ದಾಣ ಬಂದಾಗಲೂ ಸುರೇಶ್‌ ಇಳಿಯದೆ ಇದ್ದಾಗ ಕಂಡಕ್ಟರ್ ಹತ್ತಿರ ಹೋಗಿ ಮಾತನಾಡಿಸಿದ್ದಾರೆ.

ಮಾತನಾಡದೇ ಇದ್ದಾಗ ಅನುಮಾನಗೊಂಡು ಕೂಡಲೇ ಬಸ್‌ನಲ್ಲೇ ದೊಡ್ಡ ಕವಲಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version